Home High Court/ಹೈಕೋರ್ಟ್ Karnataka High Court banned broadcasting of live streaming, ‘obscene scenes’ appeared during...

Karnataka High Court banned broadcasting of live streaming, ‘obscene scenes’ appeared during video conference | ಲೈವ್ ಸ್ಟ್ರೀಮಿಂಗ್ ವೇಳೆ ‘ಅಶ್ಲೀಲ ದೃಶ್ಯ’ ಪ್ರಸಾರ, ವಿಡಿಯೋ ಕಾನ್ಫರೆನ್ಸ್ ನಿರ್ಬಂಧ ಹೇರಿದ ಕರ್ನಾಟಕ ಹೈಕೋರ್ಟ್

36
0
Karnataka High Court banned broadcasting of live streaming, 'obscene scenes' appeared during video conference Chief Justice Varale

ಬೆಂಗಳೂರು:

ಕರ್ನಾಟಕ ಹೈಕೋರ್ಟ್‍ನ ಕೆಲವು ಕೋರ್ಟ್‍ಗಳಲ್ಲಿನ ವಿಡಿಯೋ ಕಾನ್ಫರೆನ್ಸ್ ವೇಳೆ ಅಶ್ಲೀಲ ದೃಶ್ಯಾವಳಿಗಳನ್ನು ಅಪ್ಲೋಡ್ ಮಾಡಲಾಗಿದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್ ಅನ್ನು ಹೈಕೋರ್ಟ್ ಮಂಗಳವಾರ ನಿರ್ಬಧಿಸಿದೆ.

ಈ ಸಂಬಂಧ ಮುಕ್ತ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ‘ನಾವು ಎಲ್ಲ ಲೈವ್ ಸ್ಟ್ರೀಮಿಂಗ್‍ಗಳನ್ನು ನಿರ್ಬಧಿಸುತ್ತಿದ್ದೇವೆ. ವಿಡಿಯೋ ಕಾನ್ಫರೆನ್ಸ್ ಗೂ ಅವಕಾಶ ಇರುವುದಿಲ್ಲ. ದುರದೃಷ್ಟವಶಾತ್ ತಂತ್ರಜ್ಞಾನ ದುರ್ಬಳಕೆ ಅಥವಾ ಕೆಲವರಿಂದ ಅನುಚಿತ ವರ್ತನೆ ನಡೆದಿದೆ ಎಂದರು.

Karnataka High Court banned broadcasting of live streaming, 'obscene scenes' appeared during video conference
Karnataka High Court banned broadcasting of live streaming, 'obscene scenes' appeared during video conference
Karnataka High Court banned broadcasting of live streaming, 'obscene scenes' appeared during video conference

ಇದೆಲ್ಲದರ ನಡುವೆ ಕರ್ನಾಟಕ ಹೈಕೋರ್ಟ್ ಸಾರ್ವಜನಿಕರ ಹಿತದೃಷ್ಟಿಯಿಂದ ವಿಸ್ತೃತ ನೆಲೆಯಲ್ಲಿ ತಂತ್ರಜ್ಞಾನ ಬಳಕೆ ಮಾಡುವುದರ ಪರವಾಗಿ ಕರ್ನಾಟಕ ಹೈಕೋರ್ಟ್ ಇರಲಿದೆ. ಇದೊಂದು ಅನಿರ್ಬಂಧಿತ ಪರಿಸ್ಥಿತಿಯಾಗಿದ್ದು, ನಮಗೆ ಸಹಕರಿಸಬೇಕು. ಈ ಸಂಬಂಧ ಕಂಪ್ಯೂಟರ್ ತಂಡ ಅಥವಾ ರಿಜಿಸ್ಟ್ರಾರ್ ಗೆ ದೂರು ಕೊಂಡೊಯ್ಯಬೇಡಿ. ವ್ಯವಸ್ಥೆಯ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಮಾಧ್ಯಮದವರಿಗೆ ವಿಚಾರ ತಿಳಿಸಿ, ನಮಗೆ ಸಹಕರಿಸಿ’ ಎಂದು ಕೋರಿದರು.

ಆನಂತರ ಹೈಕೋರ್ಟ್‍ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಅವರು ‘ಸೈಬರ್ ಭದ್ರತಾ ಕಾರಣಗಳಿಗಾಗಿ ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿನ ಎಲ್ಲ ಕಡೆ ವಿಡಿಯೋ ಕಾನ್ಫರೆನ್ಸ್ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ’ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here