Home ಬೆಂಗಳೂರು ನಗರ ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

ಪೋಲೀಸರ ಮೇಲಿನ ಹಲ್ಲೆ ಘಟನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಖಂಡನೆ

12
0
bengaluru

ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಲು ನಿರ್ದೇಶನ

ಬೆಂಗಳೂರು:

ಬೆಂಗಳೂರಿನ, ಯಲಹಂಕ ನ್ಯೂ ಟೌನ್ ಪ್ರದೇಶದಲ್ಲಿ, ಸೋಮವಾರ, ನೈಟ್ ರೌಂಡ್ಸ್ ಕರ್ತವ್ಯದ ಮೇಲಿದ್ದ ಅಧಿಕಾರಿಗಳ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿದ, ಗೃಹ ಸಚಿವ ಆರಗ ಜ್ಞಾನೇಂದ್ರ ರವರು, ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ
ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಿದ್ದಾರೆ.

ಸಚಿವರು ಇಂದು, ಬೆಂಗಳೂರು ಪೊಲೀಸ್ ಆಯುಕ್ತ ಶ್ರೀ ಕಮಲ್ ಪಂಥ್, ಅವರನ್ನು ಸಂಪರ್ಕಿಸಿ, ವಿಷಯವನ್ನು ಪ್ರಸ್ತಾಪಿಸಿ “ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಘಟನೆಯ ದೃಶ್ಯಾವಳಿಗಳನ್ನು ನೋಡಿದ್ದೇನೆ, ಸಬ್ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಕಾನ್ಸ್ಟೇಬಲ್ ಗಳ ಮೇಲೆ ಕೆಲವು ಪುಂಡರಿಂದ ನಡೆದ ಹಲ್ಲೆ ಘಟನೆ, ಖಂಡನೀಯ “. ಎಂದು ತಿಳಿಸಿದರು.

“ಈ ರೀತಿಯಾಗಿ ಕಾನೂನನ್ನು ಕೈಗೆ ತೆಗೆದುಕೊಂಡು ಜನರಿಗೆ ರಕ್ಷಣೆ ನೀಡುವ ಪೋಲೀಸರ ಮೇಲೆಯೇ ಹಲ್ಲೆ ನಡೆದ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಳ್ಳಬೇಕು” ಎಂದೂ ಸಚಿವರು ಸೂಚಿಸಿದರು.

ಹಲ್ಲೆಗೊಳಗಾದ ಪೋಲೀಸರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತಯೂ ಸಚಿವರು, ಪೊಲೀಸ್ ಆಯುಕ್ತರಿಗೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here