ಬೆಂಗಳೂರು:
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ನಾಯಂಡಹಳ್ಳಿ ವಾರ್ಡಿನ ಪಂತರಪಾಳ್ಯದಲ್ಲಿ ಸರ್ಕಾರಿ ಆಸ್ಪತ್ರೆ ಕಟ್ಟಡಕ್ಕೆ ವಸತಿ ಸಚಿವ ವಿ.ಸೋಮಣ್ಣ ಇಂದು ಭೂಮಿಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.
ಈ ಆಸ್ಪತ್ರೆಯು 2.47 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿದ್ದು, ನಾಲ್ಕು ಮಹಡಿಗಳ ಈ ಸುಸಜ್ಜಿತ ಆಸ್ಪತ್ರೆಯ ನೆಲ ಮಹಡಿಯಲ್ಲಿ ತುರ್ತು ವಿಭಾಗ, ಮೈನರ್ ಒಟಿ ಹಾಗೂ ರೆಡಿಯಾಲಜಿ ವಿಭಾಗ ಇರಲಿದೆ.
ಇದನ್ನು ಓದು: ಪಂತರಪಾಳ್ಯದಲ್ಲಿ ಹತ್ತು ತಿಂಗಳಲ್ಲಿ 150 ಹಾಸಿಗೆಗಳ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಿದ್ಧ: ವಿ.ಸೋಮಣ್ಣ https://kannada.thebengalurulive.com/150-bed-multispecialty-hospital-to-be-ready-in-ten-months-in-pantharapalya-karnataka-housing-minister/

ಮೊದಲನೆ ಮಹಡಿಯಲ್ಲಿ ಶಸ್ತ್ತ ಚಿಕಿತ್ಸಾ ಕೊಠಡಿ ಸೇರಿದಂತೆ ಮತ್ತಿತರ ಪ್ರಮುಖ ಸೌಲಭ್ಯಗಳಿರುತ್ತವೆ. ಎರಡನೆ ಮಹಡಿ ಐಸಿಯು ಹಾಸಿಗೆಗಳನ್ನು ಒಳಗೊಂಡಿರುತ್ತದೆ, ಮೂರು ಹಾಗೂ ನಾಲ್ಕನೆ ಮಹಡಿಗಳಲ್ಲಿ ತಲಾ 100 ಹಾಸಿಗೆಗಳ ಪ್ರತ್ಯೇಕ ಕೊಠಡಿಗಳು ಸಿದ್ಧವಾಗಲಿದ್ದು, ಈ ಭಾಗದ ಪ್ರತಿಷ್ಟಿತ ಸರ್ಕಾರಿ ಆಸ್ಪತ್ರೆಯಾಗಿ ಕಾರ್ಯನಿರ್ವಹಿಸಲಿದೆ ಎಂದು ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಹೇಳಿದರು.
ಕಾರ್ಯಕ್ರಮದಲ್ಲಿ ನಗರಪಾಲಿಕೆಯ ಮಾಜಿ ಸದಸ್ಯರಾದ ಶ್ರೀಮತಿ ಸವಿತಾ ಕೃಷ್ಣ, ಶ್ರೀಮತಿ ಶಕುಂತಲ ದೊಡ್ಡಲಕ್ಕಪ್ಪ, ಶ್ರೀಮತಿ ರಾಜೇಶ್ವರಿ ಬೆಳಗೋಡು ಮುಂತಾದವರು ಭಾಗವಹಿಸಿದ್ದರು.