Home ಬೆಂಗಳೂರು ನಗರ ಬೆಂಗಳೂರಿನಲ್ಲಿ `ಡಿಸೈನ್ ಡಿಸ್ಟ್ರಿಕ್ಟ್’ ಸ್ಥಾಪನೆಯ ಕನಸು

ಬೆಂಗಳೂರಿನಲ್ಲಿ `ಡಿಸೈನ್ ಡಿಸ್ಟ್ರಿಕ್ಟ್’ ಸ್ಥಾಪನೆಯ ಕನಸು

48
0
Majid Almari, CEO of Real Estate registration and services Dubai Land Department, Govt of Dubai received Karnataka minister Ashwathnarayan

ದುಬೈ:

ಐಟಿ- ಬಿಟಿ ಸಚಿವ ಡಾ.ಸಿ ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರನ್ನು ವಿಶ್ವದ ಡಿಸೈನ್ ಹಬ್’ ಮಾಡುವ ಹಂಬಲದೊಂದಿಗೆ ಇಲ್ಲಿನದುಬೈ ಡಿಸೈನ್ ಡಿಸ್ಟ್ರಿಕ್ಟ್’ಗೆ ಎರಡನೇ ದಿನ ಭೇಟಿ ಕೊಟ್ಟರು. ಔದ್ಯಮಿಕ ವಿನ್ಯಾಸ, ಕಲೆ ಮತ್ತು ಫ್ಯಾಷನ್ ಗಳ ತ್ರಿವೇಣಿ ಸಂಗಮವಾಗಿರುವ ಈ ಕೇಂದ್ರದಲ್ಲಿರುವ ಸೌಲಭ್ಯಗಳು ಮತ್ತು ವೈಶಿಷ್ಟ್ಯಗಳನ್ನು ಅವರು ಸಮಗ್ರವಾಗಿ ತಿಳಿದುಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹತ್ತಿರದಲ್ಲಿ 100ರಿಂದ 150 ಎಕರೆ ಪ್ರದೇಶದಲ್ಲಿ ಇಂತಹ ಡಿಸೈನ್ ಡಿಸ್ಟ್ರಿಕ್ಟ್ ಸ್ಥಾಪಿಸುವ ಯೋಜನೆ ರಾಜ್ಯ ಸರಕಾರಕ್ಕಿದೆ. ಇದು ಸಾಕಾರಗೊಂಡರೆ ಕಾರ್ಪೊರೇಟ್ ಸಂಸ್ಥೆಗಳ ಜತೆಗೆ ನಮ್ಮ ಕಲಾವಿದರು, ವಿನ್ಯಾಸಕಾರರು, ಜಾಹೀರಾತು ಕಂಪನಿಗಳು, ಸಂಗೀತಗಾರರು, ಅನಿಮೇಷನ್ ಪರಿಣತರು, ಗ್ರಾಫಿಕ್ ವಿನ್ಯಾಸಕಾರರು ಸೇರಿದಂತೆ ಹಲವರಿಗೆ ಉತ್ತಮ ಅವಕಾಶಗಳು ಸೃಷ್ಟಿಯಾಗಲಿವೆ. ಜೊತೆಗೆ, ಫ್ಯಾಷನ್ ಉದ್ಯಮದಲ್ಲಿ ಬೆಂಗಳೂರು ಜಗತ್ತಿನ ಗಮನ ಸೆಳೆಯುವಂತೆಬೆಂಗಳೂರು ಡಿಸೈನ್ ಉತ್ಸವ’ವನ್ನು ನಡೆಸುವ ಉದ್ದೇಶವಿದೆ’ ಎಂದರು.

Also Read: Bengaluru Design District to take cue from Dubai model

ದುಬೈ ಸರಕಾರದ ಭೂ ಅಭಿವೃದ್ಧಿ ಇಲಾಖೆಯ ಸಿಇಒ ಮಜೀದ್ ಅಲ್ಮಾರಿ ಅವರ ಜತೆ ಸಚಿವರು ಸಭೆ ನಡೆಸಿ, ಹೂಡಿಕೆಗೆ ಮನವಿ ಮಾಡಿದರು.

ರೀಜೆಂಟ್ ಟೆಕ್ನಾಲಜೀಸ್ ನ ವ್ಯವಸ್ಥಾಪಕ ನಿರ್ದೇಶಕ ಐವಾನ್ ಎ.ಫರ್ನಾಂಡಿಸ್, ಆರ್ಟ್ ಯುಎಇ ಸಂಸ್ಥಾಪಕ ಸತರ್ ಅಲ್-ಕರಣ್ ಇದ್ದರು.

ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ ನಿರ್ದೇಶಕಿ ಮೀನಾ ನಾಗರಾಜ್, ಡಿಜಿಟಲ್ ಐಎಸ್ ಡಿಸಿ ನಿರ್ದೇಶಕ ಅರುಣ್ ಹಾಜರಿದ್ದರು.

LEAVE A REPLY

Please enter your comment!
Please enter your name here