Home ಬೆಂಗಳೂರು ನಗರ ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

25
0
KR Puram Tashildar Ajith Rai
KR Puram Tashildar Ajith Rai
Advertisement
bengaluru

ಬೆಂಗಳೂರು:

ಬೆಂಗಳೂರಿನ ಕೆ.ಆರ್ ಪುರಂ ತಹಶೀಲ್ದಾರ್ ಅಜಿತ್ ರೈ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿಗಳಿಕೆಯ ಆರೋಪದ ಮೇಲೆ ಒಟ್ಟು 10 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳು, ಹಣ ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿಂದೆ ಅಜಿತ್ ರೈ ಅಮಾನತು ಆಗಿದ್ದರು. ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಬಿಲ್ಡರ್ ಹಾಗೂ ಕಂಪನಿಗಳಿಗೆ ಸಹಕಾರ ನೀಡಿದ್ದ ಅರೋಪದಲ್ಲಿ ಸರ್ಕಾರದ ಅಮಾನತು ಮಾಡಿತ್ತು.

ಬಾಗಲಕೋಟೆಯಲ್ಲಿ ಇಬ್ಬರು ಕೃಷಿ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಲಾಗಿದೆ. ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ ಹಾಗೂ ಮತ್ತೋರ್ವ ಕೃಷಿ ಅಧಿಕಾರಿ ಕೃಷ್ಣ ಶಿರೂರ ಮನೆ ಮೇಲೂ ದಾಳಿಯಾಗಿದೆ. ನಗರದ ವಿದ್ಯಾಗಿರಿಯಲ್ಲಿ ಇಬ್ಬರ ನಿವಾಸಗಳು ಇವೆ.

bengaluru bengaluru

bengaluru

LEAVE A REPLY

Please enter your comment!
Please enter your name here