Home ಕರ್ನಾಟಕ ರಾಜ್ಯಕ್ಕೆ ಹಂಚಿಕೆಯಾದ ನೀರು ಪೂರ್ಣಪ್ರಮಾಣದ ಸದ್ಬಳಕೆಗೆ ಕ್ರಮಕೈಗೊಳ್ಳಲು ಗೋವಿಂದ ಕಾರಜೋಳ ಸೂಚನೆ

ರಾಜ್ಯಕ್ಕೆ ಹಂಚಿಕೆಯಾದ ನೀರು ಪೂರ್ಣಪ್ರಮಾಣದ ಸದ್ಬಳಕೆಗೆ ಕ್ರಮಕೈಗೊಳ್ಳಲು ಗೋವಿಂದ ಕಾರಜೋಳ ಸೂಚನೆ

29
0
Karnataka Minister Govind Karjol directs for full utilization of water allocated to state

ಬೆಂಗಳೂರು:

ರಾಜ್ಯಕ್ಕೆ ಹಂಚಿಕೆಯಾಗಿರುವ ನೀರನ್ನು ಪೂರ್ಣಪ್ರಮಾಣದಲ್ಲಿ ಸದ್ಬಳಕೆ‌ಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ನೂತನ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಎಂ ಕಾರಜೋಳ ಅವರು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು‌.

ಕರ್ನಾಟಕ ನೀರಾವರಿ ನಿಗಮದಲ್ಲಿಂದು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಪ್ರಥಮ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ರಾಜ್ಯದ ವಿವಿಧ ಜಲಾಶಯಗಳ ನೀರನ್ನು ನ್ಯಾಯಾಲಯವು/ಜಲವಿವಾದ ನ್ಯಾಯಾಧಿಕರಣವು ನೀಡಿದ ತೀರ್ಪಿನಲ್ಲಿ ರಾಜ್ಯಕ್ಕೆ ಹಂಚಿಕೆಯಾದ ನೀರನ್ನು ಪೂರ್ಣಪ್ರಮಾಣದಲ್ಲಿ ಸದ್ಬಳಕೆಯಾಗಬೇಕು.

ರಾಜ್ಯದಲ್ಲಿ 140 ಲಕ್ಷ ಹೆಕ್ಟೇರ್ ಪ್ರದೇಶವು ವ್ಯವಸಾಯಕ್ಕೆ ಯೋಗ್ಯವಾಗಿದ್ದು, 40.66 ಲಕ್ಷ ಹೆಕ್ಟೇರ್ ಪ್ರದೇಶವು ಅದರಲ್ಲಿ ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಇಲಾಖೆಯ ಯೋಜಿತ ನೀರಾವರಿ ಕ್ಷೇತ್ರವಾಗಿದೆ. ಅದರಲ್ಲಿ 29.18 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಾಗಿದೆ. ಪ್ರಸಕ್ತ ಆಯವ್ಯಯದಲ್ಲಿ 18702 ಕೋಟಿ ಅನುದಾನವನ್ನು ಮೀಸಲಿಡಲಾಗಿದ್ದು, ಜುಲೈ ಅಂತ್ಯಕ್ಕೆ 5053 ಕೋಟಿ ರೂ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಭೂಸ್ವಾಧೀನ ಪ್ರಕ್ರಿಯೆ ಪ್ರಮುಖವಾಗಿರುವುದರಿಂದ ಭೂ ಸ್ವಾಧೀನಕ್ಕೆ ಆದ್ಯತೆ ನೀಡಿ, ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.

Karnataka Minister Govind Karjol directs for full utilization of water allocated to state

ಸರ್ಕಾರಕ್ಕೆ ಹೆಚ್ಚಿನ ಹೊರೆಯಾಗದಂತಹ ನೀರಿನ ಸದ್ಬಳಕೆಯಾಗುವ ಹಾಗೂ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ರೂಪಿಸಬೇಕು. ಕೆರೆಗೆ ನೀರು ತುಂಬುವ ಯೋಜನೆ, ರೈತರ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಾಣ ಯೋಜನೆಗಳು ಉತ್ತಮವಾಗಿದ್ದು, ಇದರಿಂದ ಅಂತರ್ ಜಲ ವೃದ್ದಿಯಾಗುತ್ತದೆ.

ಸವಳು ಜವಳು ಸಮಸ್ಯೆ ಉದ್ವವವಾಗುವುದಿಲ್ಲ. ನಿರ್ವಹಣಾ ವೆಚ್ಚವೂ ಇರುವುದಿಲ್ಲ. ಕೃಷಿ ಹೊಂಡಗಳ ಒಳಭಾಗದಲ್ಲಿ ಉತ್ತಮ ಗುಣಮಟ್ಟದ ಶೀಟ್ ಅಳವಡಿಸಬೇಕು. ಇದರಿಂದ ನೀರು ಶೇಖರಣೆಗೆ ಅನುಕೂಲವಾಗುವುದರ ಜೊತೆಗೆ ಕೃಷಿ ಹೊಂಡಗಳಲ್ಲಿ ನೀರು ಇಂಗದೇ ಸದುಪಯೋಗ ವಾಗುತ್ತದೆ‌. ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸಬೇಕು ಎಂದು ಜಲಸಂಪನ್ಮೂಲ ಸಚಿವರು ಸೂಚಿಸಿದರು.

ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಯದರ್ಶಿ ಲಕ್ಷಣ ರಾವ್ ಪೇಶ್ವೆ, ಕೆಎನ್ ಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕೆಬಿಜೆಎನ್ ಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಚಿಣಿ, ಅಪರ ಕಾರ್ಯದರ್ಶಿಗಳಾದ ಕುಲಕರ್ಣಿ, ಜಂಟಿಕಾರ್ಯದರ್ಶಿ ಬಸವರಾಜಯ್ಯ , ಪ್ರಧಾನ ಇಂಜಿನಿಯರ್ ಸಿದ್ದಗಂಗಪ್ಪ , ಉಪಕಾರ್ಯದರ್ಶಿ ಕಿರಣ್ ಮಸೂತಿ, ಮತ್ತಿತರರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here