Home ರಾಜಕೀಯ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ಜುಲೈ 24 ರಿಂದಲೇ ಪ್ರಾರಂಭ — ಉಸ್ತುವಾರಿ ಸಚಿವ ಜಮೀರ್...

ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ಜುಲೈ 24 ರಿಂದಲೇ ಪ್ರಾರಂಭ — ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಘೋಷಣೆ

33
0
Karnataka Minister Zameer Ahmed Khan announces KDP meeting at taluk level starts from July 24
Karnataka Minister Zameer Ahmed Khan announces KDP meeting at taluk level starts from July 24

ಇಂಚಾರ್ಜ್ ಅಧಿಕಾರಿ, ಇಲಾಖೆ ಗಳಿಗೆ ಕಟ್ಟಡ ಇಲ್ಲದ ಬಗ್ಗೆ ಅಸಮಾಧಾನ

ಹೊಸಪೇಟೆ:

ನೂತನ ಜಿಲ್ಲೆಯ ಪ್ರತಿ ತಾಲೂಕಿನ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಲು ತೀರ್ಮಾನಿಸಿದ್ದೇನೆ ಎಂದು ವಸತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಘೋಷಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದ ಅವರು,

ಬಜೆಟ್ ಅಧಿವೇಶನದ ನಂತರ ಜುಲೈ 24 ರಿಂದ ಒಂದು ವಾರ ಕಾಲ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲಾಗುವುದು. ಒಂದೊಂದು ದಿನ ಒಂದೊಂದು ತಾಲೂಕು ಸಭೆ ಗೆ ಮೀಸಲಿಡಲಾಗುವುದು ಎಂದು ತಿಳಿಸಿದರು.

ಜುಲೈ 24 ರಂದು ಹರಪನಹಳ್ಳಿ, 25 ರಂದು ಹೂವಿನ ಹಡಗಲಿ, 26 ರಂದು ಕೂಡ್ಲಿಗಿ, 27 ರಂದು ಹಗರಿಬೊಮ್ಮನಹಳ್ಳಿ ಹಾಗೂ 28 ರಂದು ಹೊಸಪೇಟೆ ಯ ಕೆಡಿಪಿ ಸಭೆ ನಡೆಸಲಾಗುವುದು ಎಂದು ದಿನಾಂಕ ಸಹಿತ ಪ್ರಕಟಿಸಿದರು.

ನೂತನ ಜಿಲ್ಲೆ ರಚನೆ ಆದ್ದರಿಂದ ಪ್ರತಿ ತಾಲೂಕಿನಲ್ಲೂ ಸಾಕಷ್ಟು ಸಮಸ್ಯೆ ಇದ್ದು ಅದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪರಿಣಾಮಕಾರಿಯಾಗಿ ಆಡಳಿತ ಯಂತ್ರಕ್ಕೆ ವೇಗ ನೀಡಲು ಈ ತೀರ್ಮಾನ ಕೈಗೊಂಡಿದ್ದೇನೆ ಎಂದು ತಿಳಿಸಿದರು.

ತಕ್ಷಣ ಗಮನ ಹರಿಸಿಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಂಭವ ಇದ್ದು ಈಗಿನಿಂದಲೇ ಕ್ರಿಯಾ ಯೋಜನೆ ರೂಪಿಸಿಕೊಂಡು ಕ್ರಮ ಕೈಗೊಳ್ಳಿ ಎಂದು ಎಲ್ಲ ಜಿಲ್ಲಾ ಮತ್ತು ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಲ್ಲೂಕು ಮಟ್ಟದಲ್ಲಿ ಏನೇ ಸಮಸ್ಯೆ ಇದ್ದರೂ ಪಟ್ಟಿ ಮಾಡಿ ಗಮನಕ್ಕೆ ತನ್ನಿ ಅಧಿಕಾರಿಗಳ ಸಹಕಾರ ಇದ್ದರೆ ಮಾತ್ರ ನಾವು ಕೆಲಸ ಮಾಡಲು ಸಾಧ್ಯ. ನಾವು ನೀವು ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಗೆ ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಹೇಳಿದರು.

ಇಂಚಾರ್ಜ್ ಪಟ್ಟಿ ಮಾಡಿ

ನೂತನ ಜಿಲ್ಲೆ ರಚನೆಯಾದ ನಂತರ ಇನ್ನೂ ಬಹುತೇಕ ಇಲಾಖೆ ಗಳಿಗೆ ಅಧಿಕಾರಿ ಸಿಬ್ಬಂದಿ ನೇಮಕ ವಾಗದೆ ಬಳ್ಳಾರಿ ಮತ್ತು ವಿಜಯನಗರ ಎರಡೂ ಜಿಲ್ಲೆ ಗಳಿಗೆ ಒಬ್ಬರೇ ಅಧಿಕಾರಿ ಹೆಚ್ಚುವರಿ ಹೊಣೆಗಾರಿಕೆ ನೋಡಿಕೊಳ್ಳುತ್ತಿರುವ ಬಗ್ಗೆ ತಿಳಿದು ಅಚ್ಚರಿ ವ್ಯಕ್ತಪಡಿಸಿದ ಸಚಿವರು, ಎಲ್ಲ ಕಡೆ ಇಂಚಾರ್ಜ್ ಅಧಿಕಾರಿಗಳೇ ಇದ್ದಾರೆ. ಕೆಲವೆಡೆ ಅಧಿಕಾರಿಗಳು ಇದ್ದರೆ ಕಟ್ಟಡ ಇಲ್ಲ, ಕಟ್ಟಡ ಇದ್ದರೂ ಸಿಬ್ಬಂದಿ ನೇಮಿಸಿಲ್ಲ, ಹುದ್ದೆಗಳ ಮಂಜೂರಾತಿ ಆಗಿಲ್ಲ, ಹೀಗಾದರೆ ಏನು ಕೆಲಸ ಆಗುತ್ತದೆ. ಕಟ್ಟಡ ಇಲ್ಲದ ಕಡೆ ಬಂದು ಹೋಗುವುದಕ್ಕೆ ಸುಮ್ಮನೆ ವೇತನ ನೀಡುತ್ತಿದ್ದಾರಾ ಎಂದು ಜಿಲ್ಲಾಧಿಕಾರಿಗಳನ್ನು ಪ್ರೆಶ್ನೆ ಮಾಡಿದರು.

ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆ ನಿಯೋಜನೆ ಮಾಡಿರುವ ಅಧಿಕಾರಿ ಸಿಬ್ಬಂದಿ, ಕಟ್ಟಡ ಇಲ್ಲದ ಇಲಾಖೆ ಕುರಿತು ಪಟ್ಟಿ ಮಾಡಿ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಮುಖ್ಯಮಂತ್ರಿ ಅವರ ಬಳಿ ಚರ್ಚಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎರಡೂ ವರ್ಷಗಳಿಂದ ಅಧಿಕಾರಿ, ಕಚೇರಿ ಇಲ್ಲದೆ ಏನು ಮಾಡುತ್ತಿದ್ದೀರಿ, ಇದು ಯಾವ ರೀತಿಯ ಕೆಲಸ ನನಗೆ ಅರ್ಥ ವಾಗುತ್ತಿಲ್ಲ, ಎಲ್ಲ ಇಂಚಾರ್ಜ್ ತುಂಬಿದ್ದರೆ ಯಾವ ರೀತಿ ಜಿಲ್ಲೆ ಅಭಿವೃದ್ಧಿ ಆಗುತ್ತದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಉಸ್ತುವಾರಿ ಕಾರ್ಯದರ್ಶಿ ಮೋಹನ್ ರಾಜ್, ಜಿಲ್ಲಾಧಿಕಾರಿ ವೆಂಕಟೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾಶಿವ ಬಾಬು ಉಪಸ್ಥಿತರಿದ್ದರು.

ಶಾಸಕರ ಸ್ವಾಗತ

ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸುವ ತೀರ್ಮಾನಕ್ಕೆ ಸಭೆಯಲ್ಲಿ ಹಾಜರಿದ್ದ ಲತಾ ಮಲ್ಲಿಕಾರ್ಜುನ, ಡಾ. ಶ್ರೀನಿವಾಸ್, ಕೃಷ್ಣಾ ನಾಯಕ್, ಗವಿಯಪ್ಪ ಸೇರಿ ಎಲ್ಲ ಶಾಸಕರು ಸ್ವಾಗತಿಸಿ ಇದೊಂದು ಉತ್ತಮ ನಿರ್ಧಾರ ನಮಗೆಲ್ಲ ಬಯಸದೆ ಬಂದ ಭಾಗ್ಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದರಿಂದ ನಾವು ಮುಕ್ತವಾಗಿ ನಮ್ಮ ತಾಲೂಕು ಸಮಸ್ಯೆ ಬಗ್ಗೆ ಹೇಳಿಕೊಳ್ಳಲು ಪರಿಹಾರ ಕಂಡುಕೊಳ್ಳಲು ಸಹಕಾರಿ ಯಾಗಲಿದೆ ಎಂದು ಹೇಳಿದರು.

ತರಾಟೆ

ಪ್ರಗತಿ ಪರಿಶೀಲನೆ ಸಭೆಗೆ ಕಂದಾಯ, ಪೊಲೀಸ್, ಆಹಾರ ಮತ್ತು ನಾಗರಿಕ ಪೂರೈಕೆ, ನಗರಾಭಿವೃದ್ಧಿ, ಸ್ಥಳೀಯ ಸಂಸ್ಥೆ ಗಳು ವರದಿ ನೀಡದ ಬಗ್ಗೆ ಗರಂ ಆದ ಸಚಿವರು ಯಾಕೆ ವರದಿ ಕೊಟ್ಟಿಲ್ಲ ಎಂದು ಪ್ರೆಶ್ನೆ ಮಾಡಿದರು. ತಕ್ಷಣ ಪೊಲೀಸ್ ಮತ್ತು ಆಹಾರ ಇಲಾಖೆ ಅಧಿಕಾರಿಗಳು ವರದಿ ನೀಡಿದರು. ಉಳಿದ ಇಲಾಖೆ ಅಧಿಕಾರಿಗಳು ಯಾಕೆ ವರದಿ ನೀಡಿಲ್ಲ ಎಂಬ ಬಗ್ಗೆ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಇಂಚಾರ್ಜ್ ಅಧಿಕಾರಿಗಳ ಕೈ ಎತ್ತಿಸಿದ ಸಚಿವರು ಸಭೆಗೆ ಗೈರು ಹಾಜರಾದವರ ಬಗ್ಗೆ ನೋಟೀಸ್ ನೀಡಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಬಹುತೇಕ ಅಧಿಕಾರಿಗಳು ಬಳ್ಳಾರಿ ಅಥವಾ ಕೊಪ್ಪಳ ದಿಂದ ಹೆಚ್ಚುವರಿ ಯಾಗಿ ನಿಯೋಜನೆ ಆಗಿರುವ ಬಗ್ಗೆಯೂ ಪಟ್ಟಿ ಮಾಡಿಸಿ ಹಾಜರಾತಿ ಪಡೆದುಕೊಂಡರು. ಆಹಾರ ಮತ್ತು ಪೂರೈಕೆ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಗೈರು ಹಾಜರಾಗಿದ್ದು ಅವರನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು.

LEAVE A REPLY

Please enter your comment!
Please enter your name here