ಹೊಸಪೇಟೆ:
ನೂತನ ಜಿಲ್ಲೆಯಲ್ಲಿ 19 ಇಲಾಖೆಗಳಿಗೆ ಕಚೇರಿ ಕಟ್ಟಡ ಇಲ್ಲದ ಬಗ್ಗೆ ಬೇಸರ ವ್ಯಕ್ತ ಪಡಿಸಿದ ಸಚಿವರು ಪ್ರವಾಸಿ ಮಂದಿರದ ತಮ್ಮ ಕಚೇರಿಯಲ್ಲಿ ತಾತ್ಕಾಲಿಕ ಕಚೇರಿ ಆರಂಭಿಸಲು ಸೂಚಿಸಿದರು. ನನಗೆ ಅಷ್ಟು ದೊಡ್ಡ ಕಚೇರಿ ಅಗತ್ಯವಿಲ್ಲ. ಜಿಲ್ಲಾಧಿಕಾರಿ ಗಳ ಕಚೇರಿಯಲ್ಲಿ ಒಂದು ಕುರ್ಚಿ ಹಾಕಿಕೊಂಡು ನಾನು ಕೆಲಸ ಮಾಡಲು ಸಿದ್ದ. ನಾನು ವಿಜಯನಗರ ಜಿಲ್ಲೆ ಮಾದರಿ ಜಿಲ್ಲೆ ಯಾಗಿ ಅಭಿವೃದ್ಧಿ ಪಡಿಸಲು ಕನಸು ಕಂಡಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಹೊಣೆಗಾರಿಕೆ ವಹಿಸಿದ್ದಾರೆ. ನಿಮ್ಮೆಲ್ಲರ ಸಹಕಾರ ಬಯಸುತ್ತೇನೆ ಎಂದು ಹೇಳಿದರು.
ಡ್ರಗ್ಸ್, ಮರಳು ದಂಧೆ ಕಡಿವಾಣ ಹಾಕಿ
ಜಿಲ್ಲೆ ಯಲ್ಲಿ ಡ್ರಗ್ಸ್, ಗಾಂಜಾ ಹಾವಳಿ, ಜೂಜು ಹೆಚ್ಚಾಗಿದೆ ಎಂಬ ದೂರಗಳು ಇವೆ, ಅಕ್ರಮ ಮರಳು ಗಾರಿಕೆ, ಗಣಿಗಾರಿಕೆ ವ್ಯಾಪಕ ವಾಗಿ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಪೊಲೀಸ್ ಇಲಾಖೆ ಈ ಬಗ್ಗೆ ಗಂಭೀರ ವಾಗಿ ಪರಿಗಣಿಸಬೇಕು. ಶುಕ್ರವಾರ ನಡೆದ ಅಪಘಾತದಲ್ಲಿ ಒಂಬತ್ತು ಮಂದಿ ಪ್ರಾಣ ಹೋಗಿದೆ ಆರ್ ಟಿ ಓ ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಒಂದು ಆಟೋದಲ್ಲಿ 20 ರಿಂದ 25 ಜನ ಹೇಗೆ ತುಂಬುತ್ತಾರೆ. ಇದನ್ನು ಯಾರು ಗಮನಿಸುವವರು ಇಲ್ಲವೇ ಎಂದರು.