505 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ಪರೀಕ್ಷೆಗೆ ಪರಿಷ್ಕೃತ ಕೀ ಉತ್ತರ ಪ್ರಕಟಿಸಿದ KEA; ತಜ್ಞರ ಪರಿಶೀಲನೆಯ ಬಳಿಕ ತಿದ್ದುಪಡಿ
ಬೆಂಗಳೂರು: ಎಂಬಿಎ, ಎಂಸಿಎ ಮತ್ತು ಎಂಟೆಕ್ ಕೋರ್ಸ್ಗಳ ಪಿಜಿಸಿಇಟಿ ಅಂತಿಮ ಸುತ್ತಿನ ಕೌನ್ಸೆಲಿಂಗ್ ಅಕ್ಟೋಬರ್ 31ರಿಂದ ಆರಂಭವಾಗಲಿದೆ. ನವೆಂಬರ್ 4ರ ಮಧ್ಯಾಹ್ನ 2ರವರೆಗೆ ಹೊಸದಾಗಿ ಆದ್ಯತೆಯ ಕ್ರಮದಲ್ಲಿ ಆಯ್ಕೆಗಳನ್ನು ದಾಖಲಿಸಲು ಅವಕಾಶವಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೊಂದು ಕೊನೆಯ ಸುತ್ತು ನಡೆಸಲು ತೀರ್ಮಾನಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಹೇಳಿದ್ದಾರೆ. ನವೆಂಬರ್ 5ರ ಮಧ್ಯಾಹ್ನ 1ರ ನಂತರ ತಾತ್ಕಾಲಿಕ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಲಿದೆ.
ಪಿಜಿಸಿಇಟಿ ಅಂತಿಮ ಸುತ್ತಿನ ಠೇವಣಿ ಮತ್ತು ಆಯ್ಕೆ ದಾಖಲಾತಿ
ಈ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಅಕ್ಟೋಬರ್ 31ರಿಂದ ನವೆಂಬರ್ 3ರೊಳಗೆ ಕಾಷನ್ ಡಿಪಾಸಿಟ್ ಪಾವತಿಸಬೇಕು. ಅಕ್ಟೋಬರ್ 31ರ ಮಧ್ಯಾಹ್ನ 2ರಿಂದ ನವೆಂಬರ್ 4ರ ಮಧ್ಯಾಹ್ನ 2ರವರೆಗೆ ಹೊಸದಾಗಿ ಆಯ್ಕೆಗಳನ್ನು ಆದ್ಯತೆಯ ಕ್ರಮದಲ್ಲಿ ದಾಖಲಿಸಬಹುದು.
ಅಕ್ಟೋಬರ್ 13ರಿಂದ 15ರವರೆಗೆ ಆಯ್ಕೆಗಳನ್ನು ದಾಖಲಿಸಿ ಸೀಟು ಹಂಚಿಕೆಯಾದ ಕಾಲೇಜಿನಲ್ಲಿ ಪ್ರವೇಶ ಪಡೆಯದ ಅಭ್ಯರ್ಥಿಗಳಿಗೆ ಅಕ್ಟೋಬರ್ 31ರ ಸಂಜೆ 6ರೊಳಗೆ ಶುಲ್ಕ ಪಾವತಿಸಿ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಪ್ರವೇಶ ಪಡೆದ ಬಳಿಕ ಬೇಕಿದ್ದರೆ ಉನ್ನತ ಆಯ್ಕೆಗೆ ಹೋಗಬಹುದು. ಈ ಅಭ್ಯರ್ಥಿಗಳು ಅಂತಿಮ ಸುತ್ತಿನಲ್ಲಿ ಪಾಲ್ಗೊಳ್ಳಲು ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಪ್ರಸನ್ನ ತಿಳಿಸಿದ್ದಾರೆ.
ಶುಲ್ಕ ಪಾವತಿ ಅಥವಾ ಹೊಸ ಆಯ್ಕೆಗಳನ್ನು ದಾಖಲಿಸುವ ಮೊದಲು ಅಭ್ಯರ್ಥಿಗಳು ಕೆಇಎ ವೆಬ್ಸೈಟ್ನಲ್ಲಿ ವಿವರವಾದ ವೇಳಾಪಟ್ಟಿ ಮತ್ತು ಅರ್ಹತಾ ಸೂಚನೆಗಳನ್ನು ಪರಿಶೀಲಿಸಬೇಕು.
