Home Uncategorized Karnataka Politics ನಾಗ ಯಾರು, ತಿಮ್ಮ ಯಾರು ನನಗೆ ಗೊತ್ತಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

Karnataka Politics ನಾಗ ಯಾರು, ತಿಮ್ಮ ಯಾರು ನನಗೆ ಗೊತ್ತಿಲ್ಲ: ಸಚಿವ ಸೋಮಣ್ಣ ಸ್ಪಷ್ಟನೆ

19
0

ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ(BJP) ನಾಯಕರ ಜೊತೆ ಕಾಣಿಸಿಕೊಂಡಿದ್ದೇ ತಡ ರಾಜಕೀಯ ನಾಯಕರ ನಡುವೆ ಮಾತಿನ ಮಲ್ಲಯುದ್ಧ ಶುರುವಾಗಿದೆ. ಇದರ ಮಧ್ಯೆ ರೌಡಿ ನಾಗ, ವಸತಿ ಸಚಿವ ವಿ ಸೋಮಣ್ಣ(V Somanna) ಕಚೇರಿಗೆ ಭೇಟಿ ನೀಡಿದ್ದ ಎನ್ನುವ ಸುದ್ದಿ  ರಾಜ್ಯ ರಾಜಕಾರಣದಲ್ಲಿ(Karnataka Politics) ಮತ್ತಷ್ಟು ಹಲ್ ಚಲ್​ ಎಬ್ಬಿಸಿದೆ. ಇದಕ್ಕೆ ಇದೀಗ ಸ್ವತಃ ಸೋಮಣ್ಣ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಸ್ತ್ರವಾದ ಸೈಲೆಂಟ್ ಸುನೀಲ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಘಟಕ ತೆರೆಯುವ ಲಕ್ಷಣವಿದೆ ಎಂದ ಕಾಂಗ್ರೆಸ್

ವಿಧಾನಸೌಧದಲ್ಲಿ ಇಂದು(ಡಿಸೆಂಬರ್ 01) ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, 50 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾವಿರಾರು ಜನ ನನ್ನ ಮನೆಯ ಹತ್ತಿರ ಬಂದು ಹೋಗಿದ್ದಾರೆ. ಅದರಲ್ಲಿ ನಾಗ ಯಾರು, ತಿಮ್ಮ ಯಾರು ಅನ್ನೋದು ನನಗೆ ಗೊತ್ತಿಲ್ಲ. ನಾಗ ಎಂಬುವವರನ್ನು ನಾನೂ ನೋಡಿಲ್ಲ. ಒಂದು ಗಂಟೆಯಲ್ಲ, ಒಂದು ನಿಮಿಷವೂ ನಾನು ಮಾತನಾಡಿಲ್ಲ. ನನ್ನ ಜೀವನ ತೆರೆದ ಪುಸ್ತಕವಿದ್ದಂತೆ. ನಾನು ಆ ತರಹದ ಜೀವನ ಮಾಡಿಲ್ಲ. ಸಾರ್ವಜನಿಕ ರಸ್ತೆ ಎಂದ ಮೇಲೆ ಯಾರ್ಯಾರೋ ಓಡಾಡುತ್ತಾರೆ. ಅದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ. ಒಳ್ಳೆಯವರನ್ನೂ ರಸ್ತೆಗೆ ಕರೆ ತಂದು ನಿಲ್ಲಿಸುವ ಕೆಲಸ ಮಾಡಬೇಡಿ ಎಂದು ಸ್ಪಷ್ಟಪಡಿಸಿದರು.

ರಾಜಕಾರಣದಲ್ಲಿ 11 ಚುನಾವಣೆ ಎದುರಿಸಿದ್ದೇನೆ. ನನ್ನ ಜೀವನದಲ್ಲಿ ರೌಡಿಗಳ ಪರಿಚಯವೇ ಇಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನಮ್ಮ ವಯಸ್ಸು, ನಮ್ಮ ಸೇವೆಯನ್ನು ಮಾಧ್ಯಮ ಸ್ನೇಹಿತರೂ ಒಮ್ಮೆ ಅವಲೋಕಿಸಿಕೊಳ್ಳಬೇಕು. ಆರೋಪ ಮಾಡುವ ಮೊದಲು ನಮ್ಮ ರಾಜಕೀಯ ಇತಿಹಾಸವನ್ನು ನೋಡಬೇಕು. ಸುಮ್ಮನೆ ಸುಳ್ಳು ಆರೋಪ ಮಾಡಿ ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡಬೇಡಿ. ದಯಮಾಡಿ ಇಂತಹ ಸುದ್ದಿಯನ್ನು ಬಿತ್ತರಿಸುವಾಗ ನಮ್ಮ ಪೂರ್ವಾಪರ ತಿಳಿದುಕೊಳ್ಳಿ ಎಂದು ಮಾಧ್ಯಮ ಮಿತ್ರರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಬೆಂಗಳೂರಿನ ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ತನ್ನ ಗ್ಯಾಂಗ್​ನ 40 ರಿಂದ 50 ಜನ ಹುಡುಗರ ಜೊತೆಗೆ ಭೇಟಿ ನೀಡಿದ್ದ ಎನ್ನುವ ಸುದ್ದಿ ಹಬ್ಬಿತ್ತು. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ವಿರೋಧ ಪಕ್ಷ ಕಾಂಗ್ರೆಸ್, ಬಿಜೆಪಿ ವಿರುದ್ಧ ಮುಗಿಬಿದ್ದಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here