ಬೆಳಗಾವಿ:
ಖಾನಾಪುರ ತಾಲ್ಲೂಕಿನ ಬೀಡಿ ಹೋಬಳಿಯ ಚುಂಚವಾಡ ಗ್ರಾಮದಲ್ಲಿ ಮಳೆಯಿಂದ ಗೋಡೆ ಬಿದ್ದು ಮೃತಪಟ್ಟಿರುವ ಅನಂತರಾಜ ಧರಣೇಂದ್ರ ಪಾಶೆಟ್ಟಿ(16) ಅವರ ವಾರಸುದಾರರಿಗೆ ತಕ್ಷಣವೇ ಐದು ಲಕ್ಷ ರೂಪಾಯಿ ಪರಿಹಾರವನ್ನು ಕೆಲವೇ ಗಂಟೆಗಳಲ್ಲಿ ಆರ್.ಟಿ.ಜಿ.ಎಸ್. ಮೂಲಕ ಜಮಾ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
Also Read: Karnataka rains: Teenage boy killed in house wall collapse in Belagavi
ಪ್ರಕೃತಿ ವಿಕೋಪದಿಂದ ಈ ಘಟನೆ ಸಂಭವಿಸಿರುವ ಹಿನ್ನೆಲೆಯಲ್ಲಿ ನಿಯಮಾವಳಿ ಪ್ರಕಾರ ಮೃತ ಬಾಲಕನ ತಂದೆ ಧರಣೇಂದ್ರ ಪಾಶೆಟ್ಟಿ ಇವರ ಬ್ಯಾಂಕ್ ಖಾತೆಗೆ ಪರಿಹಾರ ಧನವನ್ನು ಖಾನಾಪುರ ತಹಶೀಲ್ದಾರರ ಪಿ.ಡಿ. ಖಾತೆಯಿಂದ ಜಮಾ ಮಾಡಲಾಗಿರುತ್ತದೆ.
ದುರಂತದ ಕುರಿತು ವರದಿಯನ್ನು ಪಡೆದುಕೊಂಡ ಕೆಲವೇ ಗಂಟೆಗಳಲ್ಲಿ ಮೃತರ ವಾರಸುದಾರರಿಗೆ ಪರಿಹಾರಧನವನ್ನು ನೀಡುವ ಮೂಲಕ ಜಿಲ್ಲಾಡಳಿತವು ಅತ್ಯಂತ ತ್ವರಿತವಾಗಿ ಸ್ಪಂದಿಸಿರುತ್ತದೆ.