ಬೆಂಗಳೂರು:
ಜಕ್ಕೂರು ಸರ್ಕಾರಿ ವೈಮಾನಿಕ ಶಾಲೆಯಲ್ಲಿ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಶುಲ್ಕವನ್ನು ಪರಿಷ್ಕರಿಸಿ ಸರ್ಕಾರ ಆದೇಶಿಸಿದೆ. ಈ ಹಿಂದೆ ಅತಿ ಕಡಿಮೆ ಶುಲ್ಕ ಇದ್ದ ಕಾರಣ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿ ಶುಲ್ಕ ಪರಿಷ್ಕರಿಸಿ ಆದೇಶಿಸಿದ್ದಾರೆ.
ಜಕ್ಕೂರು ಸರ್ಕಾರಿ ವೈಮಾನಿಕ ತರಬೇತಿ ಶಾಲೆಯ ಆವರಣದಲ್ಲಿ ಏರ್ ಕ್ರಾಫ್ಟ್ ಹಾಗೂ ಮೈಕ್ರೋ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಹಾಗೂ ಪಾರ್ಕಿಂಗ್ ಗೆ ಅವಕಾಶವಿದೆ. ಹಲವು ವರ್ಷಗಳಿಂದ ಅತಿ ಕಡಿಮೆ ಶುಲ್ಕ ಇದ್ದರೂ ಶುಲ್ಕ ಪರಿಷ್ಕರಣೆ ಆಗಿರಲಿಲ್ಲ. ಕೆಲ ವರ್ಷಗಳ ಸರ್ಕಾರ ದರ ಪರಿಷ್ಕರಿಸಿದ್ದರೂ ಏರ್ ಕ್ರಾಫ್ಟ್ ಕಂಪೆನಿಗಳು ಮನವಿ ಮಾಡಿದ್ದರಿಂದ ಅದನ್ನ ಸರ್ಕಸರ ಹಿಂಪಡೆದಿತ್ತು. ಸಚಿವ ನಾರಾಯಣಗೌಡ ಅವರು ಅತಿ ಕಡಿಮೆ ಶುಲ್ಕ ಇರುವುದನ್ನು ಗಮನಿಸಿ ಪರಿಷ್ಕರಣೆ ಸಂಬಂಧ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಏರ್ ಕ್ರಾಫ್ಟ್ ಪಾರ್ಕಿಂಗ್ ಪ್ರತಿ ಗಂಟೆಗೆ ರೂ. 50. ಇತ್ತು. ಎಷ್ಟೇ ಸಮಯ ಪಾರ್ಕಿಂಗ್ ಮಾಡಿದರೂ ಪ್ರತಿ ಗಂಟೆಗೆ ರೂ. 50 ಮಾತ್ತ ಬಾಡಿಗೆ ಇತ್ತು. ಇದನ್ನು ಈಗ ಪರಿಷ್ಕರಿಸಲಾಗಿದೆ. ಏರ್ ಕ್ರಾಫ್ಟ್ ಪ್ರತಿ ಲ್ಯಾಂಡಿಂಗ್ ಗೆ ಕೇವಲ ರೂ. 500 ಇತ್ತು. ಮೈಕ್ರೊ ಏರ್ ಕ್ರಾಫ್ಟ್ ಲ್ಯಾಂಡಿಂಗ್ ರೂ. 200 ಹಾಗೂ ಪಾರ್ಕಿಂಗ್ ಪ್ರತಿ ಗಂಟೆಗೆ ರೂ. 10 ಮಾತ್ರ ಇತ್ತು. ಬೈಕ್, ಕಾರ್ ಪಾರ್ಕಿಂಗ್ ದರಕ್ಕಿಂತಲೂ ಇದು ಕಡಿಮೆ ಇದ್ದ ಕಾರಣ ಸರ್ಕಾರ ಪರಿಷ್ಕರಿಸಿ ಆದೇಶಿದೆ.
ನೂತನ ದರ ಪಟ್ಟಿ ಹೀಗಿದೆ
ಏರ್ ಕ್ರಾಫ್ಟ್ ಪ್ರತಿ ಲ್ಯಾಂಡಿಂಗ್ ಗೆ – ರೂ. 5000/
ಪಾರ್ಕಿಂಗ್ ಪ್ರತಿ ಗಂಟೆಗೆ – ರೂ. 100/
24 ಗಂಟೆ ಬಳಿಕ ಪಾರ್ಕಿಂಗ್ ದರ ಪ್ರತಿ ಗಂಟೆಗೆ ಒಂದು ವಾರದ ವರೆಗೆ – ರೂ. 200/
15 ದಿನಗಳ ವರೆಗೆ ಪಾರ್ಕಿಂಗ್ ದರ – ರೂ. 2500/
15ದಿನದಿಂದ ಒಂದು ತಿಂಗಳಿಗೆ – ರೂ. 50000/
ಮೈಕ್ರೊ ಲೈಟ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ – ರೂ.400/
ಪಾರ್ಕಿಂಗ್ ದರ ಪ್ರತಿ ಗಂಟೆಗೆ – ರೂ. 20/
ತಕ್ಷಣದಿಂದಲೆ ಜಾರಿಗೆ ಬರುವಂತೆ ಶುಲ್ಕ ಪರಿಷ್ಕರಣೆ ಮಾಡಿ ಆದೇಶಿಸಲಾಗಿದೆ. ಈ ವರೆಗೆ ಜಕ್ಕೂರು ಏರೊಡ್ರಮ್ ನಲ್ಲಿ ನಾನ್ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಮತ್ತು ಪಾರ್ಕಿಂಗ್ ವ್ಯವಸ್ಥೆ ಇದೆ. ಆದರೆ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಗೆ ಅವಕಾಶ ಇರಲಿಲ್ಲ. ಸಚಿವ ನಾರಾಯಣಗೌಡ ಅವರು ಪ್ರವಾಸೋಧ್ಯಮ ಸಚಿವರ ಜೊತೆ ಸಭೆ ನಡೆಸಿದ್ದು, ಪ್ರವಾಸೋಧ್ಯಮಕ್ಕೆ ಅನುಕೂಲವಾಗುವಂತೆಯೂ ಏರೊಡ್ರಮ್ ಬಳಕೆ ಆಗುವಂತೆ ವ್ಯವಸ್ಥೆ ಮಾಡಲು ತೀರ್ಮಾನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಕ್ಕೂರು ಏರೊಡ್ರಮ್ ಪ್ರವಾಸೋದ್ಯಮಕ್ಕೂ ತೆರೆದುಕೊಳ್ಳಲಿದೆ. ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಹೀಗಾಗಿ ಶೆಡ್ಯುಲ್ಡ್ ಏರ್ ಕ್ರಾಫ್ಟ್ ಲ್ಯಾಂಡಿಂಗ್ ದರವನ್ನು ಈಗಲೆ ನಿಗದಿ ಮಾಡಲಾಗಿದೆ. ಪ್ರತಿ ಲ್ಯಾಂಡಿಂಗ್ ಗೆ ರೂ. 1000 ದರ ನಿಗದಿ ಮಾಡಲಾಗಿದೆ.
Also Read: Karnataka revises landing and parking fee for aircraft at flying school