Home ಬೆಂಗಳೂರು ನಗರ ಕೇರಳದಿಂದ ಬರುವ ಜನರಿಗೆ ಏಳು ದಿನ ಕಡ್ಡಾಯವಾಗಿ ಕ್ವಾರಂಟೈನ್

ಕೇರಳದಿಂದ ಬರುವ ಜನರಿಗೆ ಏಳು ದಿನ ಕಡ್ಡಾಯವಾಗಿ ಕ್ವಾರಂಟೈನ್

28
0

ಬಳಿಕ ಕೋವಿಡ್ ಪರೀಕ್ಷೆ ಕಡ್ಡಾಯ: ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರು:

ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿಂದ ಬರುವ ಜನರಿಗೆ ಏಳು ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್. ಏಳು ದಿನಗಳ ಬಳಿಕ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದ್ದಾರೆ.

“ನೆರೆಯ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿಂದ ಬರುವ ಎಲ್ಲಾ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವಾರದ ಸಾಂಸ್ಥಿಕ ಕ್ವಾರಂಟೈನ್ ನಲ್ಲಿರಲೇಬೇಕು. ವಾರದ ನಂತರ ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೊಳಪಡಬೇಕು,” ಎಂದು ಅಶೋಕ ಹೇಳಿದ್ದಾರೆ.

Kerala quarantine compulsory

ಕೇರಳ ಗಡಿಯಲ್ಲಿರುವ ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಯಲಿದೆ. ಉಡುಪಿ, ಚಿಕ್ಕಮಗಳೂರು, ಮೈಸೂರು, ಹಾಸನ, ಕೋಲಾರ, ಕಲಬುರಗಿಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಶೇ.1.5ಕ್ಕಿಂತ ಕಡಿಮೆ ಇರುವ ಕಾರಣ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಯಲಿದೆ.

ರಾಜ್ಯದಲ್ಲಿ ಶೇ.1.5ಕ್ಕಿಂತ ಕಡಿಮೆ ಕೋವಿಡ್ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉಡುಪಿ, ಚಿಕ್ಕಮಗಳೂರು, ಹಾಸನ, ಮೈಸೂರು, ಶಿವಮೊಗ್ಗ, ಕೋಲಾರ ಮತ್ತು ಕಲ್ಬುರ್ಗಿಯಲ್ಲಿ ವಿಧಿಸಲಾಗಿದ್ದ ನಿಬಂಧನೆಗಳಲ್ಲಿ ಕೆಲ ಸಡಿಲಿಕೆಗಳನ್ನ ಸರ್ಕಾರ ನೀಡಿದೆ. ವಾರಾಂತ್ಯದ ಕಫ್ರ್ಯೂನಲ್ಲಿಯು ಕೊಂಚ ಸಡಿಲಿಕೆ ಮಾಡಲಾಗಿದೆ. ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯಲ್ಲಿ ಸಧ್ಯ ಇರುವ ನಿಬಂಧನೆಗಳನ್ನ ಹಾಗೆಯೇ ಮುಂದುವರೆಸಿಕೊಂಡು ಹೋಗಲಾಗುವುದು. ಚಿತ್ರಮಂದಿರಗಳ ರೀತಿಯಲ್ಲಿ ಮದುವೆ ಹಾಲ್‍ಗಳಿಗೂ ಕೂಡಾ ಶೇ.50ರಷ್ಟು ಭರ್ತಿಯೊಂದಿಗೆ ಅನುಮತಿ ನೀಡಲಾಗಿದೆ. ಅದು 400ರ ಮಿತಿ ದಾಟುವಂತಿಲ್ಲ. ಸಧ್ಯ 2912 ಪಂಚಾಯಿತಿಗಳಲ್ಲಿ ಪಾಸಿಟಿವಿಟಿ ದರ ಸೊನ್ನೆಯಿದೆ. ಈಗಾಗಲೇ 6472 ಮಕ್ಕಳ ಕೋವಿಡ್ ಸ್ಯಾಂಪಲ್ ಪರೀಕ್ಷಿಸಲಾಗಿದೆ. ಅದರಲ್ಲಿ ಕೇವಲ 14 ಮಾತ್ರ ಪಾಸಿಟಿವ್ ಬಂದಿವೆ. ಇದು ಸಕಾರಾತ್ಮಕ ಸೂಚನೆ” ಎಂದು ತಿಳಿಸಿದರು.

LEAVE A REPLY

Please enter your comment!
Please enter your name here