Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ
  • ಆರೋಗ್ಯ
  • ಬೆಂಗಳೂರು ನಗರ

ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

The Bengaluru Live September 14, 2021 10:30 PM 1 minute read
ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

ಸೆ. 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ: 30 ಲಕ್ಷ ಲಸಿಕೆ ನೀಡುವ ಗುರಿ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕೆ ಅಭಿಯಾನ ಆಯೋಜಿಸಿದ್ದು, ಈ ಕಾರ್ಯಕ್ರಮದಡಿ 30 ಲಕ್ಷ ಲಸಿಕೆ ಹಾಕಬೇಕು ಎಂದು ನಿರ್ಧರಿಸಲಾಗಿದೆ. ಅದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಬೃಹತ್ ಲಸಿಕೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು.

ರಾಜ್ಯದಲ್ಲಿ ಲಸಿಕೆ ಕಾರ್ಯಕ್ರಮ ಚುರುಕಾಗಿ ಸಾಗಿದ್ದು, ಉತ್ತರ ಪ್ರದೇಶದ ನಂತರ ಅತಿ ಹೆಚ್ಚು ಲಸಿಕೆ ನೀಡಿದ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು, ಅಂದರೆ 1.10 ಕೋಟಿ ಲಸಿಕೆ ನೀಡಲಾಗಿದೆ. ನವೆಂಬರ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರಡೂ ಡೋಸ್ ಲಸಿಕೆ ನೀಡಬೇಕು ಎಂಬ ಚಿಂತನೆ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ವಾರದಲ್ಲಿ ಬುಧವಾರ 15 ಲಕ್ಷ ಲಸಿಕೆ ಹಾಕುವ ಗುರಿ ಇದೆ. ದಿನಕ್ಕೆ 5 ಲಕ್ಷ ಲಸಿಕೆಯ ಗುರಿ ಹೊಂದಲಾಗಿದೆ.

ಬೃಹತ್ ಲಸಿಕೆ ಕಾರ್ಯಕ್ರಮದಂದು ಕೇಂದ್ರ ಸರ್ಕಾರ ಒಂದೇ ದಿನ 2 ರಿಂದ 3 ಕೋಟಿ ಲಸಿಕೆ ನೀಡುವ ಉದ್ದೇಶವಿದ್ದು, ರಾಜ್ಯದಲ್ಲಿ 30 ಲಕ್ಷ ಲಸಿಕೆ ಹಾಕುವ ಗುರಿ ಇದೆ. ಲಸಿಕೆ ಪೂರೈಕೆಗೆ ಕೇಂದ್ರ ಸರ್ಕಾರಕ್ಕೆ ವಿಶೇಷ ಬೇಡಿಕೆ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರ ಒದಗಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಇದೇ ಸೆಪ್ಟೆಂಬರ್ 17 ರಂದು ನಡೆಸಲಾಗುವ ಬೃಹತ್ ಲಸಿಕೆ ಅಭಿಯಾನ ಕಾರ್ಯಕ್ರಮದ ಪೂರ್ವಭಾವಿಯಾಗಿ ಇಂದು ಜಿಲ್ಲಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ @BSBommai ಅವರು ನಡೆಸಿದ ವೀಡಿಯೋ ಕಾನ್ಫರೆನ್ಸ್ ಪ್ರಮುಖಾಂಶಗಳು;#KarnatakaFightsCorona #LargestVaccineDrive pic.twitter.com/J2UHdpIXQI

— CM of Karnataka (@CMofKarnataka) September 14, 2021

ಬಡತನ ರೇಖೆಗಿಂತ ಕೆಳಗಿರುವ ದುರ್ಬಲ ವರ್ಗದವರಿಗೆ ಹಾಗೂ ದುಡಿಯುವ ವರ್ಗಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ನಗರ ಪ್ರದೇಶಗಳಲ್ಲಿ, ಬೆಂಗಳೂರಿನಲ್ಲಿ ಕೊಳಚೆ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಈ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಮುಖ್ಯಮಂತ್ರಿಯವರು ಸೂಚಿಸಿದರು.

ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು ಹಾಗೂ ನರ್ಸಿಂಗ್ ಕಾಲೇಜುಗಳ ಸಹಯೋಗ ಪಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ಸೂಕ್ತ ಸಂಖ್ಯೆಯಲ್ಲಿ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲು ತಿಳಿಸಿದರು.

ಮುಂಚಿತವಾಗಿಯೇ ಲಸಿಕೆ ದಾಸ್ತಾನು ಪಡೆದು, ಲಸಿಕಾ ಕೇಂದ್ರಗಳಿಗೆ ತಲುಪಿಸಿ, ವಿಶೇಷ ಲಸಿಕೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಲಾಯಿತು.

ಮುಖ್ಯಮಂತ್ರಿಯವರು ಈ ಬೃಹತ್ ಲಸಿಕೆ ಕಾರ್ಯಕ್ರಮಕ್ಕೆ ಕಲಬುರಗಿಯಲ್ಲಿ ಚಾಲನೆ ನೀಡಲಿದ್ದಾರೆ.

ದಿನದಿಂದ ದಿನಕ್ಕೆ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಲಸಿಕೆ ಪ್ರಮಾಣ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ರಾಜ್ಯದಲ್ಲಿ ಸರಾಸರಿ ಶೇ. 71 ಜನರಿಗೆ ಮೊದಲ ಡೋಸ್ ಹಾಕಲಾಗಿದೆ. ರಾಜ್ಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಇತರ ಜಿಲ್ಲೆಗಳಲ್ಲಿಯೂ ರಾಜ್ಯದ ಸರಾಸರಿ ಪ್ರಮಾಣದ ಸಾಧನೆ ಮಾಡುವಂತೆ ನಿರ್ದೇಶನ ನೀಡಿದರು.

ಸಭೆಯಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಅಭಿವೃದ್ಧಿ ಆಯುಕ್ತರು ಹಾಗೂ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಮತ್ತಿತರರು ಭಾಗವಹಿಸಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಅವಸರದಿಂದ ದೇವಸ್ಥಾನ ಒಡೆಯಬೇಡಿ- ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ
Next: ಇಂದಿನಿಂದ ಗುರುಗುಂಟೆಪಾಳ್ಯ ರಸ್ತೆಯ ವೈಟ್‌ ಟಾಪಿಂಗ್‌ ಕಾಮಗಾರಿ ಆರಂಭ

Related Stories

  • ಬೆಂಗಳೂರು ನಗರ

ವರ್ತೂರು ರೋಡ್ ರೇಜ್ ನಾಟಕ: ಚಿನ್ನದ ಸರ ದರೋಡೆ ಪ್ರಕರಣದಲ್ಲಿ ನಾಲ್ವರು ವಶಕ್ಕೆ, ಗ್ಯಾಂಗ್ ಜಾಲದ ತನಿಖೆ

The Bengaluru Live November 28, 2026 7:27 PM
ನಮ್ಮ ಮೆಟ್ರೋ ರೈಲು
  • ಬೆಂಗಳೂರು ನಗರ

ನಮ್ಮ ಮೆಟ್ರೋದಲ್ಲಿ ಇನ್ನೂ ಇಲ್ಲದ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್: ರಾಜ್ಯ ಸರ್ಕಾರಕ್ಕೆ ಮೂರನೇ ಬಾರಿ ತೇಜಸ್ವಿ ಸೂರ್ಯ ಪತ್ರ, ಕಾಲಮಿತಿ ಯೋಜನೆಗೆ ಆಗ್ರಹ

The Bengaluru Live November 28, 2026 6:37 PM
ಆಸ್ಪತ್ರೆಯ ಹಾಸಿಗೆಯ ಪಕ್ಕ ನಿಂತಿರುವ ಎಚ್.ಡಿ. ಕುಮಾರಸ್ವಾಮಿ; ಮಗುವಿನ ಮುಖ ಮಸುಕುಗೊಳಿಸಲಾಗಿದೆ
  • ಕರ್ನಾಟಕ
  • ಬೆಂಗಳೂರು ನಗರ

ಭಾನುವಾರ ಸಂಜೆ 4ರೊಳಗೆ ಮುಂದೆ ಬನ್ನಿ: ಮಗುವಿನ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ಆರೋಪಿಸಿ ಕ್ಲೌಡ್‌ನೈನ್ ಆಸ್ಪತ್ರೆಗೆ ಎಚ್.ಡಿ. ಕುಮಾರಸ್ವಾಮಿ ಗಡುವು

The Bengaluru Live November 28, 2026 5:01 PM

Latest Post

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ ವಿಮಾನ ನಿಲ್ದಾಣದಲ್ಲಿ ಬ್ಯಾರಿಕೇಡ್ ಆಚೆಯಿಂದ ಮರೂನ್ ಜಾಕೆಟ್ ಧರಿಸಿದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಫಲಕ ಹಿಡಿದ ಜನರು
  • ಕರ್ನಾಟಕ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ

November 28, 2026 9:20 PM
₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ ಗುಲಾಬಿ ಸೀರೆಯಲ್ಲಿ ಧರಣಿ ಕುಳಿತು ಮುಷ್ಟಿ ಎತ್ತಿ ಘೋಷಣೆ ಕೂಗುತ್ತಿರುವ ಅಪಾರ ಸಂಖ್ಯೆಯ ಆಶಾ ಕಾರ್ಯಕರ್ತೆಯರು
  • ಕರ್ನಾಟಕ

₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ

November 28, 2026 9:20 PM
ಒಂದು ತಿಂಗಳಲ್ಲಿ ARAI ಯೋಜನೆ ಆರಂಭವಾಗದಿದ್ದರೆ ಬೇರೆಡೆಗೆ: ಮಂಡ್ಯದ ಭೂಮಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಒಂದು ತಿಂಗಳಲ್ಲಿ ARAI ಯೋಜನೆ ಆರಂಭವಾಗದಿದ್ದರೆ ಬೇರೆಡೆಗೆ: ಮಂಡ್ಯದ ಭೂಮಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ

November 28, 2026 8:03 PM
ವರ್ತೂರು ರೋಡ್ ರೇಜ್ ನಾಟಕ: ಚಿನ್ನದ ಸರ ದರೋಡೆ ಪ್ರಕರಣದಲ್ಲಿ ನಾಲ್ವರು ವಶಕ್ಕೆ, ಗ್ಯಾಂಗ್ ಜಾಲದ ತನಿಖೆ
  • ಬೆಂಗಳೂರು ನಗರ

ವರ್ತೂರು ರೋಡ್ ರೇಜ್ ನಾಟಕ: ಚಿನ್ನದ ಸರ ದರೋಡೆ ಪ್ರಕರಣದಲ್ಲಿ ನಾಲ್ವರು ವಶಕ್ಕೆ, ಗ್ಯಾಂಗ್ ಜಾಲದ ತನಿಖೆ

November 28, 2026 7:27 PM
ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹2,000 ಹೆಚ್ಚಳ, ಜನವರಿ 1ರಿಂದ ಜಾರಿ: ಮಾತುಕತೆ ಬಳಿಕ ಸಿಎಂ ಶಿವಕುಮಾರ್ ಘೋಷಣೆ ಗೃಹ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಹೂಗುಚ್ಛ ಮತ್ತು ಶಾಲು ನೀಡಿ ಸನ್ಮಾನಿಸುತ್ತಿರುವ ಗುಲಾಬಿ ಸೀರೆಯ ಮಹಿಳೆಯರು ಮತ್ತಿತರರು
  • ಕರ್ನಾಟಕ

ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನ ₹2,000 ಹೆಚ್ಚಳ, ಜನವರಿ 1ರಿಂದ ಜಾರಿ: ಮಾತುಕತೆ ಬಳಿಕ ಸಿಎಂ ಶಿವಕುಮಾರ್ ಘೋಷಣೆ

November 28, 2026 7:13 PM
ಜಪಾನ್‌ನ ಮೂರು ಕಂಪನಿಗಳು, ಕರ್ನಾಟಕಕ್ಕೆ ಮೂರು ಯೋಜನೆಗಳು: ಮಾಲೂರಿನಲ್ಲಿ ಹೊಸ ಉತ್ಪಾದನಾ ಮಾರ್ಗ, ತುಮಕೂರಿನಲ್ಲಿ ₹50+ ಕೋಟಿ ಘಟಕ ಭಾರತ ಮತ್ತು ಜಪಾನ್ ಧ್ವಜಗಳ ನಡುವೆ ಕಂಪನಿ ಪ್ರತಿನಿಧಿಗಳೊಂದಿಗೆ ಎಂ.ಬಿ. ಪಾಟೀಲ್ ಮತ್ತು ಅಧಿಕಾರಿಗಳು
  • ಕರ್ನಾಟಕ

ಜಪಾನ್‌ನ ಮೂರು ಕಂಪನಿಗಳು, ಕರ್ನಾಟಕಕ್ಕೆ ಮೂರು ಯೋಜನೆಗಳು: ಮಾಲೂರಿನಲ್ಲಿ ಹೊಸ ಉತ್ಪಾದನಾ ಮಾರ್ಗ, ತುಮಕೂರಿನಲ್ಲಿ ₹50+ ಕೋಟಿ ಘಟಕ

November 28, 2026 6:45 PM

ನೀವು ತಪ್ಪಿಸಿಕೊಂಡಿರಬಹುದು

ವಿಮಾನ ನಿಲ್ದಾಣದಲ್ಲಿ ಬ್ಯಾರಿಕೇಡ್ ಆಚೆಯಿಂದ ಮರೂನ್ ಜಾಕೆಟ್ ಧರಿಸಿದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಫಲಕ ಹಿಡಿದ ಜನರು
  • ಕರ್ನಾಟಕ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ

The Bengaluru Live November 28, 2026 9:20 PM
ಗುಲಾಬಿ ಸೀರೆಯಲ್ಲಿ ಧರಣಿ ಕುಳಿತು ಮುಷ್ಟಿ ಎತ್ತಿ ಘೋಷಣೆ ಕೂಗುತ್ತಿರುವ ಅಪಾರ ಸಂಖ್ಯೆಯ ಆಶಾ ಕಾರ್ಯಕರ್ತೆಯರು
  • ಕರ್ನಾಟಕ

₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ

The Bengaluru Live November 28, 2026 9:20 PM
ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಒಂದು ತಿಂಗಳಲ್ಲಿ ARAI ಯೋಜನೆ ಆರಂಭವಾಗದಿದ್ದರೆ ಬೇರೆಡೆಗೆ: ಮಂಡ್ಯದ ಭೂಮಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ

The Bengaluru Live November 28, 2026 8:03 PM
  • ಬೆಂಗಳೂರು ನಗರ

ವರ್ತೂರು ರೋಡ್ ರೇಜ್ ನಾಟಕ: ಚಿನ್ನದ ಸರ ದರೋಡೆ ಪ್ರಕರಣದಲ್ಲಿ ನಾಲ್ವರು ವಶಕ್ಕೆ, ಗ್ಯಾಂಗ್ ಜಾಲದ ತನಿಖೆ

The Bengaluru Live November 28, 2026 7:27 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ
  • ₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ
  • ಒಂದು ತಿಂಗಳಲ್ಲಿ ARAI ಯೋಜನೆ ಆರಂಭವಾಗದಿದ್ದರೆ ಬೇರೆಡೆಗೆ: ಮಂಡ್ಯದ ಭೂಮಿ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ
  • ವರ್ತೂರು ರೋಡ್ ರೇಜ್ ನಾಟಕ: ಚಿನ್ನದ ಸರ ದರೋಡೆ ಪ್ರಕರಣದಲ್ಲಿ ನಾಲ್ವರು ವಶಕ್ಕೆ, ಗ್ಯಾಂಗ್ ಜಾಲದ ತನಿಖೆ
©Copyright 2025 The Bengaluru Live All rights reserved. | MoreNews by AF themes.