Home ಬೆಂಗಳೂರು ನಗರ ಸೈಲೆನ್ಸ್‌ರ್‌ ವಿರೂಪಗೊಳಿಸಿ ಚಾಲನೆ ನಡೆಸುತ್ತಿದ್ದ ವಾಹನಗಳ ವಿರುದ್ದ ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

ಸೈಲೆನ್ಸ್‌ರ್‌ ವಿರೂಪಗೊಳಿಸಿ ಚಾಲನೆ ನಡೆಸುತ್ತಿದ್ದ ವಾಹನಗಳ ವಿರುದ್ದ ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ

47
0

• ಹಾಸನ – ನೆಲಮಂಗಲ ಟೋಲ್‌ ಗೇಟ್‌ ಬಳಿ ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ
• 300 ಹೈ ಎಂಡ್‌ ಬೈಕ್‌ ಮತ್ತು 60 ಕಾರುಗಳ ತಪಾಸಣೆ
• 40 ಕ್ಕೂ ಹೆಚ್ಚು ಬೈಕ್‌ ಮತ್ತು ಕಾರುಗಳ ಮೇಲೆ ದಂಡ

ಬೆಂಗಳೂರು:

ವಿರೂಪಗೊಳಿಸಿದ ಹಾಗೂ ಮಾರ್ಪಾಡಿತ ಸೈಲೆನ್ಸ್‌ರ್‌ ವಿರುದ್ದ ಸಾರಿಗೆ ಅಧಿಕಾರಿಗಳು ಇಂದು ಕಾರ್ಯಾಚರಣೆ ನಡೆಸಿ 300 ಹೈ ಎಂಡ್‌ ಬೈಕ್‌ ಹಾಗೂ 60 ಕ್ಕೂ ಹೆಚ್ಚು ಕಾರುಗಳ ಪರಿಶೀಲನೆ ನಡೆಸಿದರು.

Karnataka Transport officials books cases against defective Silencer in Bengaluru1

ಸಾರಿಗೆ ಇಲಾಖೆ ಅಪರ ಮುಖ್ಯ ಆಯುಕ್ತರಾದ ನರೇಂದ್ರ ಹೋಳ್ಕರ್‌ ಹಾಗೂ ಜಂಟಿ ಸಾರಿಗೆ ಆಯುಕ್ತರಾದ ಹಾಲಪ್ಪಸ್ವಾಮಿ ನೇತೃತ್ವದಲ್ಲಿ ರಚಿಸಲಾಗಿದ್ದ‌ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎನ್‌ ರಾಜಣ್ಣ, ಮೋಟಾರ್‌ ವಾಹನ ನೀರೀಕ್ಷಕರುಗಳಾದ ರಂಜಿತ್‌ (ದೇವನಹಳ್ಳಿ ಭಾಗದಲ್ಲಿ) ಚೇತನ್‌, ಸುಧಾಕರ್‌, ಸುಂದರ್‌ ಮತ್ತು ರಂಜೀತ್‌ (ನೆಲಮಂಗಲ-ಹಾಸನ ಟೋಲ್‌ಗೇಟ್‌) ಅವರನ್ನೊಳಗೊಂಡ ಮೂರು ತಂಡ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆಸಿತು.

Karnataka Transport officials books cases against defective Silencer in Bengaluru

ಸೈಲೆನ್ಸರ್‌ ವಿರೂಪಗೊಳಿಸಿ ವಾರಾಂತ್ಯಗಳಲ್ಲಿ ಜಾಲಿ ರೈಡ್‌ ಗೆ ಮಾತ್ರ ಹಲವಾರು ವಾಹನಗಳನ್ನು ಬಹಳಸಲಾಗುತ್ತಿರುವ ಅಂಶ ಸಾರಿಗೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ಇದನ್ನು ತಡೆಗಟ್ಟುವ ಹಾಗೂ ಪತ್ತೆಹಚ್ಚುವ ನಿಟ್ಟಿನಲ್ಲಿ ಇಂದು ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂಧರ್ಭದಲ್ಲಿ 300 ಕ್ಕೂ ಹೆಚ್ಚು ಬೈಕುಗಳು ಹಾಗೂ 60 ಕ್ಕೂ ಹೆಚ್ಚು ಕಾರುಗಳನ್ನು ತಪಾಸಣೆಗೊಳಿಸಲಾಯಿತು. ಈ ವೇಳೆ ಸೈಲೆನ್ಸರ್‌ ವಿರೂಪಗೊಳಿಸದ್ದ 40 ಕ್ಕೂ ಹೆಚ್ಚು ವಾಹನಗಳ ಮೇಲೆ ದೂರು ದಾಖಲಿಸಿದ್ದು, ಅವುಗಳ ಆರ್‌ ಸಿ ರದ್ದುಗೊಳಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಮೋಟಾರ್‌ ವಾಹನ ನಿರೀಕ್ಷಕ ಸುಧಾಕರ್‌ ತಿಳಿಸಿದರು.

LEAVE A REPLY

Please enter your comment!
Please enter your name here