Home ಬೆಂಗಳೂರು ನಗರ ಹಾಪ್‌ಕಾಮ್ಸ್‌, ಹಾಲಿನ ಬೂತ್‌ಗಳು, ತಳ್ಳುಗಾಡಿಗಳ ಮೂಲಕ ತರಕಾರಿ, ಮಾರಾಟ ಮಾಡುವವರಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ...

ಹಾಪ್‌ಕಾಮ್ಸ್‌, ಹಾಲಿನ ಬೂತ್‌ಗಳು, ತಳ್ಳುಗಾಡಿಗಳ ಮೂಲಕ ತರಕಾರಿ, ಮಾರಾಟ ಮಾಡುವವರಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಅವಕಾಶ

73
0

ದಿನಸಿ ಅಂಗಡಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೂ ಅವಕಾಶ

ಬೆಂಗಳೂರು:

ಮಾರುಕಟ್ಟೆಗಳಲ್ಲಿ ಜನಸಂದಣಿ ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ತನ್ನ ಮಾರ್ಗಸೂಚಿಯನ್ನ ಪರಿಷ್ಕರಣೆ ಮಾಡಿದೆ. ನಾಳೆಯಿಂದ, ಮೇ 2ರ ಭಾನುವಾರದಿಂದ ಅನ್ವಯವಾಗುವಂತೆ ಎಲ್ಲಾ ರೀತಿಯ ಸಂತೆಗಳು, ವಾರದ ಸಂತೆಗಳ ಬಂದ್ ಆಗಲಿವೆ.

ಆದೇಶ ಅನ್ವಯವಾಗುವಂತೆ ಹಾಪ್‌ಕಾಮ್ಸ್‌, ಹಾಲಿನ ಬೂತ್‌ಗಳು, ತಳ್ಳುಗಾಡಿಗಳ ಮೂಲಕ ತರಕಾರಿ, ಹಣ್ಣು ಮಾರಾಟಮಾಡುವವರು ಹಾಗೂ ದುಬಾರಿ ಬೆಲೆಗೆ ಮಾರದೇ ಮಾರುಕಟ್ಟೆ ದರದಲ್ಲಿ ವ್ಯಾಪಾರ ಮಾಡುವವರಿಗೆ ಬೆಳಿಗ್ಗೆ 6ರಿಂದ ಸಂಜೆ 6ರವರೆಗೂ ಅವಕಾಶ ನೀಡಲಾಗಿದೆ.

ದಿನಸಿ ಮತ್ತು ಎಪಿಎಂಸಿ ಮಾರುಕಟ್ಟೆಯನ್ನು ಬೆಳಿಗ್ಗೆ 6 ಗಂಟೆಯಿಂದ 12ರವರೆಗೆ ತೆರೆಯಲು ಅವಕಾಶ ಕಲ್ಪಿಸಿ ರಾಜ್ಯ ಆದೇಶ ಹೊರಡಿಸಿದೆ.

Screenshot 194

ಮೇ 2ರ ಭಾನುವಾರದಿಂದ ಅನ್ವಯವಾಗುವಂತೆ ಈ ಪರಿಷ್ಕೃತ ಆದೇಶ ಜಾರಿಯಲ್ಲಿರಲಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಖರೀದಿ ವೇಳೆ ಮಾರುಕಟ್ಟೆಯಲ್ಲಿ ಆಗುತ್ತಿರುವ ನೂಕುನುಗ್ಗಲು, ಜನಸಂದಣಿ ತಪ್ಪಿಸಲು ಈ ‍ ಉಪಕ್ರಮ ಕೈಗೊಳ್ಳಲಾಗಿದೆ. ವಾರದ ಸಂತೆ ಸೇರಿದಂತೆ ಎಲ್ಲ ರೀತಿಯ ಸಂತೆಗಳನ್ನೂ ನಿರ್ಬಂಧಿಸಲಾಗಿದೆ.

ಬಿಬಿಎಂಪಿ, ಪೊಲೀಸ್ ಕಮಿಷನರ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಆದೇಶವನ್ನು ಜಾರಿ ಮಾಡಲು ಅವರು ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here