Home ಬೆಂಗಳೂರು ನಗರ ಕಾರವಾರ: ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ

ಕಾರವಾರ: ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ

42
0
Karwar: Businessman Shyam Patil's family committed suicide
Karwar: Businessman Shyam Patil's family committed suicide
Advertisement
bengaluru

ಕಾಳಿಗೆ ನದಿಗೆ ಮಗ, ಪತ್ನಿ ಹಾರಿ ಆತ್ಮಹತ್ಯೆಗೆ ಶರಣಾದ ಬಳಿಕ ನೇಣು ಬಿಗಿದುಕೊಂಡು ಉದ್ಯಮಿ ಆತ್ಮಹತ್ಯೆ

ಕಾರವಾರ:

ಕಾರವಾರ ತಾಲೂಕಿನ ಗೋಪಶಿಟ್ಟಾ ಮೂಲದ ಉದ್ಯಮಿ ಶ್ಯಾಮ್ ಪಾಟೀಲ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

40 ವರ್ಷದ ಶ್ಯಾಮ್ ಪಾಟೀಲ್ ಗೋವಾದ ವೆರ್ಣಾ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪೂರೈಕೆ ಉದ್ಯಮ ನಡೆಸುತ್ತಿದ್ದರು. ಆದರೆ ಕಳೆದ ರಾತ್ರಿ ಪತ್ನಿ 37 ವರ್ಷದ ಜ್ಯೋತಿ ಪಾಟೀಲ್, ಮಗ 12 ವರ್ಷದ ಧಕ್ಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

bengaluru bengaluru

ಕೋಡಿಬಾಗದಲ್ಲಿರುವ ಕಾಳಿ ನದಿಗೆ ಜ್ಯೋತಿ ಪಾಟೀಲ್ ಮತ್ತು ಧಕ್ಷ್ ಪಾಟೀಲ್ ಜಿಗಿದು ಮೃತಪಟ್ಟ ನಂತರ ಶ್ಯಾಮ್ ಪಾಟೀಲ್ ಅಲ್ಲಿಂದ 60 ಕಿ.ಮೀ ದೂರದಲ್ಲಿರುವ ಗೋವಾದ ಪಾಡಿ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ತಾಯಿ ಮತ್ತು ಮಗನ ಮೃತದೇಹ ದೇವಬಾಗ ಕಡಲತೀರದಲ್ಲಿ ಪತ್ತೆಯಾಗಿದ್ದರೆ ಶ್ಯಾಮ್ ಮೃತದೇಹ ಪಾಟಿ ಅರಣ್ಯ ಪ್ರದೇಶದಲ್ಲಿ ಸಿಕ್ಕಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಚಿತ್ತಾಕುಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


bengaluru

LEAVE A REPLY

Please enter your comment!
Please enter your name here