Home ಅಪರಾಧ ಕೆಎಎಸ್ ಅಧಿಕಾರಿ ಸುಧಾ ಅಕ್ರಮ ಆಸ್ತಿ ಪ್ರಕರಣ; ಇಡಿ, ಐಟಿ ನಿಗಾ

ಕೆಎಎಸ್ ಅಧಿಕಾರಿ ಸುಧಾ ಅಕ್ರಮ ಆಸ್ತಿ ಪ್ರಕರಣ; ಇಡಿ, ಐಟಿ ನಿಗಾ

54
0

ಬೆಂಗಳೂರು:

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಆಡಳಿತಾಧಿಕಾರಿ ಡಾ.ಬಿ. ಸುಧಾ ಅವರು ಬಿಡಿಎ ಅಧಿಕಾರಿಯಾಗಿದ್ದಾಗ ಅವರ ಖಾತೆಗೆ ಬಹಳಷ್ಟು ಹಣ ಜಮಾವಣೆಯಾಗಿರುವ ಮಾಹಿತಿ ಆಧರಿಸಿ ಜಾರಿ‌ ನಿರ್ದೇಶನಾಲಯ (ಇಡಿ ) ಹಾಗೂ ಆದಾಯ ಇಲಾಖೆ (ಐಟಿ) ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ.


ಸುಧಾ ಅವರ ಅಕ್ರಮ ಆಸ್ತಿ ಸಂಬಂಧ ಎಸಿಬಿ ಅಧಿಕಾರಿಗಳು ತನಿಖೆ ನಡೆಸಿ ಜಪ್ತಿ‌ಮಾಡಿದ ದಾಖಲಾತಿಗಳನ್ನು ಆದಾಯ ಇಲಾಖೆ ಹಾಗೂ ಇಡಿಗೆ ಮಾಹಿತಿ ನೀಡಲಿದ್ದು ಇವೆರಡು ಇಲಾಖೆಗಳು ಮುಂದಿನ‌ ತನಿಖೆ ನಡೆಸಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ಕಳೆದ ಒಂದು ವಾರದಿಂದ ಸುಧಾ ಮತ್ತು ಕುಟುಂಬಸ್ಥರ ಆಸ್ತಿ, ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಎಸಿಬಿ, ಅವರ ಆಸ್ತಿಯ ವಿವರಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚು ದಾಖಲೆಗಳನ್ನು ಈಗಾಗಲೇ ಜಪ್ತಿ ಮಾಡಿದೆ. ಆದರೆ, ಎಲ್ಲ ಮಾಹಿತಿಗಳನ್ನು ಸಂಗ್ರಹ‌ ಮಾಡಲು ಇನ್ನೂ ಸ್ವಲ್ಪ ಸಮಾಯವಾಕಾಶ ಬೇಕಾಗಬಹುದು ಎಂದು ತಿಳಿಸಿದೆ.
ಡಾ. ಬಿ. ಸುಧಾ ಅವರು ಭ್ರಷ್ಟಾಚಾರ, ಅವ್ಯಹಾರಗಳಲ್ಲಿ ಭಾಗಿಯಾದ ಸಂಬಂಧ ಎಸಿಬಿಯಲ್ಲಿ ದೂರು ದಾಖಲಾಗಿತ್ತು. ಹೀಗಾಗಿ ಏಳನೇ ತಾರೀಖಿನಂದು ಬೆಂಗಳೂರು, ಮೈಸೂರು ಹಾಗೂ ಉಡುಪಿ ಜಿಲ್ಲೆಯ ಒಟ್ಟು 7 ಸ್ಥಳಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ, ಹಲವಾರು ಅಕ್ರಮ ಆಸ್ತಿಗಳು ಪತ್ತೆಯಾಗಿತ್ತು.

LEAVE A REPLY

Please enter your comment!
Please enter your name here