Home ರಾಜಕೀಯ ರಾಹುಲ್ ಬಗ್ಗೆ ಕಟೀಲ್ ಹೇಳಿಕೆ ಸಮರ್ಥನಿಯವಲ್ಲ: ಬಿ.ಎಸ್.ವೈ

ರಾಹುಲ್ ಬಗ್ಗೆ ಕಟೀಲ್ ಹೇಳಿಕೆ ಸಮರ್ಥನಿಯವಲ್ಲ: ಬಿ.ಎಸ್.ವೈ

50
0
Kateel's statement on Rahul Gandhi is not justified: Yediyurappa

ಸಿಂಧಗಿ:

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ನೀಡಿರುವ ಹೇಳಿಕೆ ಸಮರ್ಥನಿಯವಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಭಿಪ್ರಾಯಪಟ್ಟರು.

ಸಿಂಧಗಿ ತಾಲ್ಲೂಕು ಮೊರಟಗಿಯಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಟೀಲ್ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಡ್ರಗ್ ಪೆಡ್ಲರ್ ಎಂದಿರುವುದು ಸೂಕ್ತವಲ್ಲ. ಈ ರೀತಿ ಅಗೌರವದಿಂದ ಮಾತನಾಡಿರುವುದು ಸಮರ್ಥನಿಯವಲ್ಲ ಎಂದರು.

Also Read: I respect Rahul Gandhi, says Yediyurappa after Nalin’s drug addict jibe

ಯಾರ ಬಗ್ಗೆಯೂ ಅವಹೇಳಕಾರಿಯಾಗಿ ಮಾತನಾಡುವುದು ಸರಿಯಲ್ಲ ಎಂದ ಅವರು ರಾಹುಲ್ ಗಾಂಧಿ ಬಗ್ಗೆ ತಮಗೆ ಗೌರವವಿದೆ ಎಂದು ಹೇಳೀದರು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ, ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಅನಗತ್ಯವಾಗಿ ಆರ್.ಎಸ್.ಎಸ್. ಎಳೆದು ತರುವುದರಿಂದ ಅವರಿಗೆ ಯಾವುದೇ ಲಾಭವಾಗುವುದಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here