Home Uncategorized Kerala: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇಬ್ಬರು ಬಾಲಕರು ಸಾವು

Kerala: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಇಬ್ಬರು ಬಾಲಕರು ಸಾವು

1
0
bengaluru

ತ್ರಿಶೂರ್ : ಕೇರಳದ (Kerala) ತ್ರಿಶೂರ್ (Thrissur) ಜಿಲ್ಲೆಯ ಕೊರಟ್ಟಿ ರೈಲು ನಿಲ್ದಾಣದಲ್ಲಿ ಶುಕ್ರವಾರ ಬೆಳಗಿನ ಜಾವ ರೈಲಿನಿಂದ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಪ್ರಕಾರ, 17 ವರ್ಷ ವಯಸ್ಸಿನ ಹುಡುಗರು ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಸಾವನ್ನಪ್ಪಿದ್ದಾರೆ, ಈ ರೈಲು ಆ ನಿಲ್ದಾಣದಲ್ಲಿ ನಿಲ್ಲುವುದಿಲ್ಲ. ಅದರೂ ಅವರು ಹತ್ತಲು ಪ್ರಯತ್ನಿಸಿದ್ದಾರೆ.

ಈ ಇಬ್ಬರೂ ಹುಡುಗರು ಎರ್ನಾಕುಲಂನಿಂದ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಯಾವ ರೈಲು ಎಂದು ಈವರೆಗೆ ಪತ್ತೆಯಾಗಿಲ್ಲ ಎಂದು ಕೊರಟ್ಟಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಇನ್ನೊಂದು ರೈಲಿನ ಲೋಕೋಮೋಟಿವ್ ಪೈಲಟ್ ಮೃತದೇಹಗಳನ್ನು ನೋಡಿ ಚಾಲಕುಡಿಯ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿದ್ದಾರೆ ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನೆಗೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದರು.

ಇದನ್ನು ಓದಿ; ಕಾರು ಡಿವೈಡರ್‌ಗೆ ಡಿಕ್ಕಿ, 2 ಸಾವು, ಮೂವರಿಗೆ ಗಾಯ

ಪ್ರಾಥಮಿಕ ತನಿಖೆ ಪ್ರಕಾರ ನಿಲ್ದಾಣದ ಪ್ಲಾಟ್​ಫಾರ್ಮ್​ನಿಂದ ಬಿದ್ದಾಗ ಅವರ ತಲೆಗೆ ಗಂಭೀರ ಗಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ ಇದು ಆಕಸ್ಮಿಕ ಸಾವು ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಈ ಬಗ್ಗೆ ತನಿಖೆಯ ವಿಚಾರಣೆ ಪ್ರಕ್ರಿಯೆ ಮುಗಿದಿದ್ದು, ಮುಂದಿನ ಹಂತ ಮರಣೋತ್ತರ ಪರೀಕ್ಷೆಯಾಗಲಿದೆ ಎಂದರು.

bengaluru

ಜಿಲ್ಲೆಯ ಕೊಟ್ಟಪುರಂ ಪ್ರದೇಶದಿಂದ ಬಂದ ಇಬ್ಬರು ಹುಡುಗರು ನಿಯತಕಾಲಿಕವಾಗಿ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದರು ಮತ್ತು ಮಾದಕ ದ್ರವ್ಯ ಸೇವನೆ ಮಾಡಿದ್ದರು ಎಂದು ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here