Home ಹುಬ್ಬಳ್ಳಿ ಕೆ.ಎಲ್.ಇ ಕಲ್ಪನೆ ಮೀರಿ ಬೆಳೆದಿದೆ: ಪ್ರಲ್ಹಾದ್ ಜೋಷಿ

ಕೆ.ಎಲ್.ಇ ಕಲ್ಪನೆ ಮೀರಿ ಬೆಳೆದಿದೆ: ಪ್ರಲ್ಹಾದ್ ಜೋಷಿ

69
0

ಹುಬ್ಬಳ್ಳಿ:

ಕೆಎಲ್‌ಇ ಸಂಸ್ಥೆಯುಕಲ್ಪನೆ ಮೀರಿ ಬೆಳೆದಿದೆ. ಸಪ್ತರ್ಷಿಗಳ ಕೊಡುಗೆ, ಮಹಾದಾನಿಗಳ ಸೇವಾ ಮನೋಭಾವ, ಡಾ.ಪ್ರಭಾಕರಕೋರೆ ಹಾಗೂ ತಂಡದವರ ಪರಿಶ್ರಮದಿಂದ ಕೆಎಲ್‌ಇ ಸಂಸ್ಥೆ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ ಎಂದು ಕೇಂದ್ರ ಕಲ್ಲಿದ್ದಲು, ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಕೆಎಲ್‌ಇವಿಶ್ವವಿದ್ಯಾಲಯದ ಹುಬ್ಬಳ್ಳಿಯ ಗಬ್ಬೂರ ಕ್ರಾಸ್‌ದಲ್ಲಿ ಆಯೋಜಿಸಿದ್ದ ಕೆಎಲ್‌ಇ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು ಮೂರು ಸಾವಿರಮಠ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಕೆಎಲ್‌ಇ ಆಸ್ಪತ್ರೆಯ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿ, ದೇಶದ ವಿಕಾಸದಲ್ಲಿ ಶಿಕ್ಷಣ ಹಾಗೂ ಆರೋಗ್ಯದ ಪಾತ್ರ ಅತೀ ಮಹತ್ವದ್ದಾಗಿದೆ. ಕೆಎಲ್‌ಇ ಸಂಸ್ಥೆ ಈ ಎರಡೂ ಆಶಯಗಳನ್ನು ಯಶಸ್ವಿಯಾಗಿ ಪೂರೈಸಿರುವುದು ಅದರ ಸಾಧನೆಗೆ ಸಾಕ್ಷಿ. ಭಾರತ ಇಂದು ತುರ್ತಾಗಿ ಆರೋಗ್ಯ ಸುಧಾರಣೆಗಳನ್ನು ಹೊಂದಲು ಹೋರಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೆಎಲ್‌ಇ ಸಂಸ್ಥೆಯಂತ ಹಆರೋಗ್ಯ ಸೇವೆಗಳು ಜನಸಮುದಾಯಕ್ಕೆ ಅತ್ಯಗತ್ಯವಾಗಿವೆ ಎಂದರು.

ಸ್ಕಿಲ್ ಡೆವಲಪ್‌ಮೆಂಟ್‌ಎನ್ನುವಂತಹದ್ದು ಅನುಕರಣಿ ರೂಪವಾಗಿರಬೇಕು. ಸರ್ಕಾರ ಇದಕ್ಕಾಗಿ ಹೆಚ್ಚಿನ ಆಸಕ್ತಿ ವಹಿಸುತ್ತಿದೆ. ಶಿಕ್ಷಣವನ್ನು ಪಾರದರ್ಶಕ ನೆಲೆಯಲ್ಲಿ ನೀಡುವ ಮೂಲಕ ದೇಶದ ಸಂಶೋಧನಾ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವುದು ಅವಶ್ಯವಾಗಿದೆ. ಕೆಎಲ್‌ಇ ಸಂಸ್ಥೆ ಮೆಡಿಕಲ್ ಕಾಲೇಜ ಸ್ಥಾಪಿಸುತ್ತಿರುವುದು ತುಂಬಾ ಸಂತೋಷದ ಸಂಗತಿ.ಸರ್ಕಾರ ಅವರಿಗೆ ಎಲ್ಲರೀತಿಯ ನೆರವು ನೀಡಲಿದೆ ಎಂದು ಪ್ರಹ್ಲಾದ ಜೋಶಿ ಹೇಳಿದರು.

ಬಹೃತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್‌ ಮಾತನಾಡಿ ಕೆಎಲ್‌ಇ ಸಂಸ್ಥೆ ಅಗಾಧವಾದುದ್ದನ್ನೆ ನಿರ್ಮಿಸುತ್ತದೆ. ಡಾ.ಪ್ರಭಾಕರಕೋರೆ ಇಚ್ಛಾಶಕ್ತಿ ಬಹುದೊಡ್ಡದು. ಅವರು ಹಿಡಿದ ಕಾರ್ಯವನ್ನು ಸಾಧಿಸಿಯೇ ತೀರುತ್ತಾರೆ. ಅವರ ಈ ಮಹತ್‌ಕಾರ್ಯಕ್ಕೆ ಸರ್ಕಾರ ಕೈಜೋಡಿಸುತ್ತದೆ ಎಂದು ಹೇಳಿದರು.

ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ ಇಲ್ಲಿ ಸ್ಥಾಪನೆಗೊಳ್ಳುವ ಮೆಡಿಕಲ್‌ಕಾಲೇಜು ದೇಶಕ್ಕೆ ಮಾದರಿಯ ಕಾಲೇಜು ಆಗಿ ರೂಪುಗೊಳ್ಳಲಿದೆ. ಕೆಎಲ್‌ಇ ಸಂಸ್ಥೆ ನಮ್ಮದು. ಅದು ಮತ್ತಷ್ಟು ವಿಸ್ತಾರವಾಗಿ ಬೆಳೆಯಬೇಕು. ಇಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಲೇಜು ಹಾಗೂ ಆಸ್ಪತ್ರೆ ಈ ಭಾಗದ ಬೆಳಕಾಗಲಿ ಎಂದು ಶುಭಹಾರೈಸಿದರು.

ಹುಬ್ಬಳ್ಳಿ ಮೂರು ಸಾವಿರಮಠದ ಪರಮಪೂಜ್ಯ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಮಾತನಾಡಿ, ಕೆಎಲ್‌ಇ ಸಂಸ್ಥೆಯು ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆಯನ್ನು ನೀಡಿದೆ. ಈ ಭಾಗದಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಯಾಗಬೇಕೆಂಬುದು ನಮ್ಮ ಗುರುಗಳ ಒತ್ತಾಯ ಹಾಗೂ ಸಂಕಲ್ಪವಾಗಿತ್ತು. ಡಾ.ಪ್ರಭಾಕರ ಕೋರೆಯವರಿಗೆ ೨೦೦೩ರಲ್ಲಿಯೇ ಆದೇಶವನ್ನು ನೀಡಿದ್ದರು. ಅವರ ಇಚ್ಛೆಯಂತೆಯೇ ಕೆಎಲ್‌ಇ ಸಂಸ್ಥೆ ವೈದ್ಯಕೀಯಕಾಲೇಜು ಹಾಗೂ ಆಸ್ಪತ್ರೆ ನಿರ್ಮಿಸುತ್ತಿರುವುದು ಅತೀವ ಸಂತೋಷ ಹಾಗೂ ಆನಂದವನ್ನುಂಟು ಮಾಡಿದೆ ಎಂದು ನುಡಿದರು.

ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಅಧ್ಯಕ್ಷತೆಯನ್ನು ವಹಿಸಿದ್ದರು.ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರಕೋರೆ ರಾಜ್ಯಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ,ಮಾಜಿ ಸಚಿವರು ಹಾಗೂ ವಿಧಾನ ಪರಿಷತ್‌ನ ಸದಸ್ಯರ ಬಸವರಾಜ ಹೊರಟ್ಟಿ ವಿಜಯ ಸಂಕೇಶ್ವರ, ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು. UNI

LEAVE A REPLY

Please enter your comment!
Please enter your name here