Home Uncategorized Konkani Style Dal Recipe: ಕೊಂಕಣಿ ಶೈಲಿಯ ದಾಲ್ ತೋವೆ ತಯಾರಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ

Konkani Style Dal Recipe: ಕೊಂಕಣಿ ಶೈಲಿಯ ದಾಲ್ ತೋವೆ ತಯಾರಿಸಲು ಸಿಂಪಲ್ ಟಿಪ್ಸ್ ಇಲ್ಲಿದೆ

9
0

ದಾಲ್ ತೋವೆಯು ಕೊಂಕಣಿ ಶೈಲಿ(Konkani Style)ಯ ಜನಪ್ರಿಯ ಬೇಳೆಕಾಳುಗಳ ರೆಸಿಪಿಯಾಗಿದೆ. ಈ ರೆಸಿಪಿ(Recipe) ಯನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದಾಗಿದೆ. ಪ್ರತಿ ದಿನ ನಿಮ್ಮ ರಾತ್ರಿಯ ಅಥವಾ ಮಧಾಹ್ನದ ಊಟಕ್ಕೆ ಇದು ಒಳ್ಳೆಯ ರುಚಿಯನ್ನು ನೀಡುತ್ತದೆ. ರುಚಿಯ ಹೊರತಾಗಿ, ಅವು ಕಬ್ಬಿಣ ಅಂಶ ಸಮೃದ್ಧವಾಗಿರುವಂತಹ ಆರೋಗ್ಯ ಪ್ರಯೋಜನಗಳಿಂದ ತುಂಬಿವೆ, ಕಡಿಮೆ ಕ್ಯಾಲೋರಿಗಳು ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ.

ದಾಲ್ ತೋವೆ ಮಾಡುವ ವಿಧಾನ:

ತೊಗರಿ ಬೇಳೆಯನ್ನು ಸ್ವಲ್ಪ ಹೊತ್ತಿನ ವರೆಗೆ ನೆನೆಸಿಡಿ. ನಂತರ ಇದನ್ನು ನೀರು ಮತ್ತು ಹಸಿರು ಮೆಣಸಿನಕಾಯಿಗಳು ಮತ್ತು ಎಣ್ಣೆಯನ್ನು ಸೇರಿಸಿ ತೊಗರಿಬೇಳೆ ಬೇಯುವ ವರೆಗೂ ಬೇಯಿಸಿ. ಒಂದು ಕಡಾಯಿ ತೆಗೆದುಕೊಂಡು ಒಂದು ಚಮಚ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಅದಕ್ಕೆ ಕರಿಬೇವಿನ ಎಲೆಗಳು, ಹಿಂಗ್, ಒಣ ಮೆಣಸಿನಕಾಯಿ ಸೇರಿಸಿ. ಇದಕ್ಕೆ ಈಗಾಗಲೇ ಬೇಯಿಸಿಟ್ಟ ತೊಗರಿ ಬೇಳೆಯನ್ನು ಹಾಕಿ ಮಿಶ್ರಣ ಮಾಡಿ.

ಇದನ್ನೂ ಓದಿ: ಈ ವರ್ಷ ಗೂಗಲ್ ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸ್ಕಿನ್ ಕೇರ್ ಪ್ರಾಡಕ್ಟ್​ಗಳು ಇಲ್ಲಿವೆ

ನಂತರ ಕೊನೆಯದಾಗಿ ಒಗ್ಗರಣೆ ಹಾಕುವುದು. ಇದಕ್ಕಾಗಿ ಒಂದು ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿ. ಸಾಸಿವೆ ಒಡೆಯುತ್ತಿದಂತೆ ತಕ್ಷಣ ಇದನ್ನು ದಾಲ್ ತೋವೆಗೆ ಹಾಕಿ. ನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಮತ್ತು ನಿಮ್ಮ ದಾಲ್ ತೋವೆ ಸಿದ್ಧವಾಗಿದೆ. ನೀವು ದಪ್ಪ ತೋವೆ ಬಯಸಿದರೆ ಇದಕ್ಕೆ ತೆಂಗಿನ ಹಾಲು ಸೇರಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

LEAVE A REPLY

Please enter your comment!
Please enter your name here