Home ಬೆಂಗಳೂರು ನಗರ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೆ.ಅರ್.ಪುರ ಕ್ಷೇತ್ರದಿಂದ 6.01 ಕೋಟಿ ಸಂಗ್ರಹ

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೆ.ಅರ್.ಪುರ ಕ್ಷೇತ್ರದಿಂದ 6.01 ಕೋಟಿ ಸಂಗ್ರಹ

107
0

ದೇವಾಲಯ ನಿರ್ಮಾಣಕ್ಕೆ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ್ ರಿಂದ 51 ಲಕ್ಷ ರೂ ದೇಣಿಗೆ

ಬೆಂಗಳೂರು :

ಉತ್ತರ ಪ್ರದೇಶ ರಾಜ್ಯದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಡೆದಿರುವ ನಿಧಿ ಸಮರ್ಪಣಾ ಅಭಿಯಾನದಲ್ಲಿ ಬೆಂಗಳೂರು ನಗರದ ಕೆ.ಅರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ದಾಖಲೆ ಮೊತ್ತ ಸಂಗ್ರಹವಗಿದೆ.

ಕೆ. ಅರ್.ಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಆಗಿರುವ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ ಅವರ ನೇತೃತ್ವದಲ್ಲಿ ನಡೆದ ನಿಧಿ ಸಂಗ್ರಹ ಅಭಿಯಾನದಲ್ಲಿ ಒಟ್ಟು 6.01 ಕೋಟಿ ರೂಪಾಯಿಗಳು ಸಮರ್ಪಣಾ ರೂಪದಲ್ಲಿ ಬಂದಿದೆ.

MLA Basavaraj paid Rs 51 lakh towards Ram Mandir construction

ಕೆ.ಅರ್. ಪುರ ವಿಧಾನ ಸಭಾ ಕ್ಷೇತ್ರದ ಜನತೆ 5 ಕೋಟಿ 50 ಲಕ್ಷ ರೂಪಾಯಿಗಳನ್ನು ನೀಡಿದರೆ, ಶ್ರೀ ಬಸವರಾಜ ಅವರು ತಮ್ಮ ಸ್ವಂತ ಇಚ್ಛೆಯಿಂದ 51 ಲಕ್ಷ ರೂಪಾಯಿಗಳನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸಮರ್ಪಿಸಿದ್ದಾರೆ.

ರಾಜ್ಯದ 224 ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಸಂಗ್ರಹವಾದ ದೇಣಿಗೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here