Home ಆರೋಗ್ಯ ಎಸ್.ಎನ್.ಎನ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 103 ಕ್ಕೆ ಏರಿಕೆ

ಎಸ್.ಎನ್.ಎನ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 103 ಕ್ಕೆ ಏರಿಕೆ

44
0

ಬೆಂಗಳೂರು:

ನಗರದ ಬೊಮ್ಮನಹಳ್ಳಿ ವಲಯದ ಬಿಳೆಕಳ್ಳಿಯಲ್ಲಿ ಎಸ್.ಎನ್.ಎನ್ ಅಪಾರ್ಟ್‌ಮೆಂಟ್‌ ಸಂಕೀರ್ಣದಲ್ಲಿ 103 ನಿವಾಸಿಗಳಲ್ಲಿ ಕೋವಿಡ್-19 ಪತ್ತೆಯಾಗಿದೆ. ನಿನ್ನೆಯವರೆಗೆ 90 ಮಂದಿಯಲ್ಲಿ ಕಾಣಿಸಿಕೊಂಡಿದ್ದ ಕೋವಿಡ್-19 ಸೋಂಕು ಇಂದು 103 ಮಂದಿಗೆ ಏರಿಕೆಯಾಗಿದೆ.

ಈ ಅಪಾರ್ಟ್ ಮೆಂಟ್ ನಲ್ಲಿ 1053 ಮಂದಿ ನಿವಾಸಿಗಳಿದ್ದಾರೆ. ಇವರಲ್ಲಿ 96 ಮಂದಿ 60 ವರ್ಷಕ್ಕೆ ಮೇಲ್ಪಟ್ಟವರಾಗಿದ್ದಾರೆ ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಅಪಾರ್ಟ್ ಮೆಂಟ್ ನಿವಾಸಿಗಳ ಅಭಿವೃದ್ಧಿ ಸಂಘದ ಜೊತೆ ಸಭೆ ನಡೆಸಿದ ಬಳಿಕ ಮಾಹಿತಿ ನೀಡಿದರು.

LEAVE A REPLY

Please enter your comment!
Please enter your name here