Home ರಾಜಕೀಯ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ: ಮುಖ್ಯ ಮಂತ್ರಿ

ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ: ಮುಖ್ಯ ಮಂತ್ರಿ

47
0
Bommai reaction after Eshwarappa's resignation announcement1
Advertisement
bengaluru

ಬೆಂಗಳೂರು:

ಸಚಿವ ಕೆ.ಎಸ್.ಈಶ್ವರಪ್ಪ ಅವರು ನೈತಿಕ ಹೊಣೆ ಹೊತ್ತು, ಸ್ವಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಗುತ್ತಿಗೆದಾರನ ಸಾವು: ಕರ್ನಾಟಕ ಸಚಿವ ಕೆ ಎಸ್ ಈಶ್ವರಪ್ಪ ನಾಳೆ ರಾಜೀನಾಮೆ ನೀಡುವುದಾಗಿ ಘೋಷಣೆ

ಅವರು ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

bengaluru bengaluru

ಕೆ.ಎಸ್.ಈಶ್ವರಪ್ಪ ಅವರು ನನ್ನ ಬಳಿ ಮಾತನಾಡಿದರು. ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ ಹಾಗೂ ತಪ್ಪಿಲ್ಲ ಎನ್ನುವ ಸಂಪೂರ್ಣ ವಿಶ್ವಾಸವಿದೆ. ಹೀಗಾಗಿ ನನಗೆ ನೈತಿಕತೆ ಇದೆ. ಈಗ ಅದನ್ನಿಟ್ಟು ಕೊಂಡು ಮಾತನಾಡಿದರೆ ಬಹಳಷ್ಟು ಜನರಿಗೆ ಇರಿಸುಮುರುಸಾಗುತ್ತದೆ. ಅದಾಗುವುದು ಬೇಡ. ಇದರ ತನಿಖೆ ಮುಗಿಸಿ, ಸತ್ಯ ಹೊರಬಂದು, ನನ್ನ ಮೇಲೆ ಇರುವ ಆರೋಪಗಳಿಂದ ವಿಮುಕ್ತನಾಗಿ ಹೊರ ಬರುತ್ತೇನೆ. ಅಲ್ಲಿಯವರೆಗೂ ನಾನು ಈ ಸ್ಥಾನದಲ್ಲಿರಲು ಬಯಸುವುದಿಲ್ಲ ಎಂದು ಹೇಳಿದ್ದಾರೆ. ಆ ಪ್ರಕಾರ ಅವರು ಪತ್ರಿಕಾಗೋಷ್ಠಿಯಲ್ಲಿಯೂ ತಿಳಿದ್ದಾರೆ. ನಾಳೆ ಸಂಜೆ ಸಚಿವರನ್ನು ಭೇಟಿಯಾಗಲಿದ್ದೇನೆ ಎಂದರು.


bengaluru

LEAVE A REPLY

Please enter your comment!
Please enter your name here