ಕೆಯುಡಬ್ಲ್ಯೂಎಸ್ಡಿಬಿ ಎಂಡಿ ಸ್ಥಾನದಿಂದ ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ಡಾ. ಸೆಲ್ವಮಣಿ ಆರ್. ವರ್ಗಾವಣೆ
ಬೆಂಗಳೂರು, ಜೂನ್ 7: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (KUWSDB) ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ. ಸೆಲ್ವಮಣಿ ಆರ್. (2013 ಬ್ಯಾಚ್) ಅವರನ್ನು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಯೋಗೇಶ್ ಎ.ಎಂ. ಅವರ ಸ್ಥಾನಕ್ಕೆ ಅವರು ನೇಮಕಗೊಂಡಿದ್ದು, ರಾಜ್ಯದ ರಸ್ತೆ ಸುರಕ್ಷತೆ, ಸಾರಿಗೆ ಆಡಳಿತ ಹಾಗೂ ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಜವಾಬ್ದಾರಿಗಳನ್ನು ವಹಿಸಿಕೊಳ್ಳಲಿದ್ದಾರೆ.
ರಾಜ್ಯ ಸರ್ಕಾರ ಹೊರಡಿಸಿರುವ ಆಡಳಿತಾತ್ಮಕ ವರ್ಗಾವಣೆ ಆದೇಶದ ಭಾಗವಾಗಿ ಈ ನೇಮಕ ನಡೆದಿದೆ.
