Home Uncategorized Kylian Mbappe: 24ನೇ ವಯಸ್ಸಿಗೆ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿಕೊಂಡ ಕೈಲಿಯನ್‌ ಎಂಬಾಪೆಗೆ ಜನ್ಮದಿನದ...

Kylian Mbappe: 24ನೇ ವಯಸ್ಸಿಗೆ ಜಗತ್ತಿನ ಶ್ರೇಷ್ಠ ಫುಟ್ಬಾಲ್ ಆಟಗಾರ ಎನಿಸಿಕೊಂಡ ಕೈಲಿಯನ್‌ ಎಂಬಾಪೆಗೆ ಜನ್ಮದಿನದ ಸಂಭ್ರಮ

1
0
bengaluru

ಕತಾರ್​ನಲ್ಲಿ ಜರುಗಿದ ಬಹುನಿರೀಕ್ಷಿತ 2022 ಫಿಫಾ ವಿಶ್ವಕಪ್ (FIFA World Cup) ಟೂರ್ನಿಗೆ ತೆರೆಬಿದ್ದಾಗಿದೆ. ಫೈನಲ್‌ ಪಂದ್ಯದಲ್ಲಿ ಪೆನಾಲ್ಟಿ ಶೂಟ್‌ಔಟ್‌ ಮೂಲಕ ಫ್ರಾನ್ಸ್‌ ತಂಡವನ್ನು ಮಣಿಸಿದ ಲಿಯೊನೆಲ್‌ ಮೆಸ್ಸಿ (Lionel Messi) ನಾಯಕತ್ವದ ಅರ್ಜೆಂಟೀನ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಈ ಬಾರಿಯ ಫಿಫಾ ವಿಶ್ವಕಪ್​ನಲ್ಲಿ ಸ್ಟಾರ್ ಆಟಗಾರರಾದ ಮೆಸ್ಸಿ, ರೊನಾಲ್ಡೊ ಜೊತೆಗೆ ಕೇಳಿಬಂದ ಮತ್ತೊಂದು ಹೆಸರು ಕೈಲಿಯನ್‌ ಎಂಬಾಪೆ (Kylian Mbappe). ಮೆಸ್ಸಿ, ರೊನಾಲ್ಡೊ ಯುಗ ಅಂತ್ಯವಾಗುತ್ತಿದ್ದಂತೆ ಕಾಲ್ಚೆಂಡಿನ ಜಗತ್ತನ್ನು ಆಳುವುದಕ್ಕಾಗಿಯೇ ಉದಯಿಸಿರುವ ಆಟಗಾರ ಫ್ರಾನ್ಸ್‌ನ ಕೈಲಿಯನ್‌ ಎಂಬಾಪೆ. ಈತ ಮುಂದೆ ವಿಶ್ವ ಫುಟ್‌ಬಾಲ್‌ ಲೋಕದ ದಿಗ್ಗಜ ಆಟಗಾರರ ಪಟ್ಟಿಗೆ ಸೇರಲಿದ್ದಾನೆ ಎಂದು ಈಗಾಗಲೇ ಹಲವರು ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಫುಟ್‌ಬಾಲ್‌ ಜಗತ್ತಿನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಎಂಬಾಪೆಗೆ ಇಂದು ಹುಟ್ಟುಹಬ್ಬದ ಸಂಭ್ರಮ.

1998 ಡಿಸೆಂಬರ್ 20 ರಂದು ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ಜನಿಸಿದ ಕೈಲಿಯನ್‌ ಎಂಬಾಪೆ ಇಂದು 24ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕ್ಯಾಥೊಲಿಕ್‌ ಸ್ಕೂಲ್‌ನಲ್ಲಿ ಓದುವಾಗಲೇ ಫುಟ್‌ಬಾಲ್‌ನ ದೀಕ್ಷೆ ಪಡೆದ ಇವರಿಗೆ ತಂದೆ ವಿಲ್‌ಫ್ರೆಡ್‌ ಅವರೇ ಮೊದಲ ಗುರು. ಜಿನೆದಿನ್‌ ಜಿದಾನೆ, ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಘಟಾನುಘಟಿ ಆಟಗಾರರನ್ನು ಆದರ್ಶವಾಗಿ ಕಂಡವರು ಎಂಬಾಪೆ. ಈ ಹುಡುಗನ ಆಟ ಕಂಡವರು ಅವರನ್ನು ಪಿಲೆ ಅವರೊಂದಿಗೆ ಹೋಲಿಕೆ ಮಾಡಿದ್ದರು.

IPL Auction 2023: ಮಿನಿ ಹರಾಜಿಗೆ ದಿನಗಣನೆ; ಆಟಗಾರರ ಮೂಲ ಬೆಲೆ, ಯಾವ ಚಾನೆಲ್​ನಲ್ಲಿ, ಎಷ್ಟು ಗಂಟೆಗೆ ನೇರ ಪ್ರಸಾರ​?

2017 ರಲ್ಲಿ 18 ನೇ ವಯಸ್ಸಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಎಂಬಾಪೆ ಅವರು ಫ್ರಾನ್ಸ್‌ಗೆ ತಮ್ಮ ಚೊಚ್ಚಲ ಪ್ರವೇಶ ಪಡೆದರು. 2018 ಫಿಫಾ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ ಅತ್ಯಂತ ಕಿರಿಯ ಫ್ರೆಂಚ್ ಆಟಗಾರ ಎಂಬ ಸಾಧನೆ ಮಾಡಿದರು. ಫಿಫಾ ವಿಶ್ವಕಪ್​ನಲ್ಲಿ ಅತ್ಯುತ್ತಮ ಯುವ ಆಟಗಾರ ಮತ್ತು ವರ್ಷದ ಫ್ರೆಂಚ್ ಆಟಗಾರ ಪ್ರಶಸ್ತಿಯನ್ನೂ ಗೆದ್ದರು. ಕಳೆದ ಬಾರಿ ಫ್ರಾನ್ಸ್‌ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಸತತ ಎರಡನೇ ಬಾರಿಗೆ ವಿಶ್ವಕಪ್‌ ಕಿರೀಟ ತೊಡುವ ಅವಕಾಶದಿಂದ ಕೂದಲೆಳೆಯ ಅಂತರದಿಂದ ವಂಚಿತರಾದರು.

bengaluru

ಈ ಬಾರಿಯ ಫೈನಲ್‌ನಲ್ಲಿ ಎಂಬಾಪೆ ಅವರೇನೋ ಪಂದ್ಯ ಸೋತರು. ಆದರೆ, ಹ್ಯಾಟ್ರಿಕ್‌ ಗೋಲುಗಳ ಮೂಲಕ ಫುಟ್‌ಬಾಲ್‌ ಪ್ರಿಯರ ಹೃದಯವನ್ನು ಗೆದ್ದರು. 24 ವರ್ಷ ವಯಸ್ಸಿನ ಕೈಲಿಯನ್‌ ಎಂಬಾಪೆ ಈ ಬಾರಿಯ ಫಿಫಾ ವರ್ಡ್‌ಕಪ್‌ನಲ್ಲಿ ಗೋಲ್ಡನ್‌ ಬೂಟ್‌ ಪಡೆದ ಫ್ರಾನ್ಸ್ ಆಟಗಾರ. 2018ರಲ್ಲಿ ರಷ್ಯಾದಲ್ಲಿ ನಡೆದ ಫಿಫಾ ವರ್ಡ್‌ಕಪ್‌ನಲ್ಲಿ ‘ಬೆಸ್ಟ್ ಯಂಗ್ ಪ್ಲೇಯರ್‌ ಅವಾರ್ಡ್’ ಪಡೆದಿದ್ದ ಎಂಬಾಪೆ ಈ ಸಲದ ಕತಾರ್‌ ವರ್ಡ್‌ಕಪ್‌ನಲ್ಲಿ ಅತಿ ಹೆಚ್ಚು ಗೋಲ್‌ ಭಾರಿಸುವ ಮೂಲಕ ‘ಗೋಲ್ಡನ್ ಬೂಟ್ ಅವಾರ್ಡ್’ ತಮ್ಮದಾಗಿಸಿಕೊಂಡರು. ಮುಂದಿನ ವಿಶ್ವಕಪ್‌ನಲ್ಲಿ ಎಂಬಾಪೆ ಫ್ರಾನ್ಸ್ ತಂಡಕ್ಕಾಗಿ ವಿಶ್ವಕಪ್‌ ಗೆದ್ದರೂ ಅಚ್ಚರಿ ಪಡಬೇಕಿಲ್ಲ.

ಎಂಬಾಪೆ ಫಿಫಾ ವಿಶ್ವಕಪ್‌ನಲ್ಲಿ ಅತ್ಯಂತ ಹೆಚ್ಚು ಗೋಲು ಗಳಿಸಿದ 24 ವರ್ಷದೊಳಗಿನ ಆಟಗಾರರಾಗಿದ್ದಾರೆ. ಪ್ಯಾರಿಸ್ ಸೇಂಟ್-ಜರ್ಮೈನ್ ಸ್ಟಾರ್ ಎಂಬಾಪೆ ಈಗ ವಿಶ್ವಕಪ್ ನಲ್ಲಿ ಒಟ್ಟು 9 ಗೋಲುಗಳನ್ನು ಗಳಿಸಿದ್ದಾರೆ. 2018 ರ ವಿಶ್ವಕಪ್ ವಿಜೇತ ಎಂಬಾಪೆ ಈಗ ಡಿಗೋ ಮರಡೋನಾ, ಲಿಯೊನೆಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ, ಪೀಲೆಯಂತಹ ಆಟಗಾರರನ್ನು ಹಿಂದಿಕ್ಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here