ಬೆಂಗಳೂರು:
ನಗರ ಪ್ರದೇಶಗಳಲ್ಲಿರುವ ಕೆರೆಗಳನ್ನು ಸರ್ವೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ ಒತ್ತುವರಿಗಳಿದ್ದಲ್ಲಿ ತೆರವುಗೊಳಿಸಿ ಮಲಿನ್ಯವಾಗದಂತೆ ಕ್ರಮ ವಹಿಸಿ ಮಾಹಿತಿ ನೀಡಬೇಕೆಂದು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಕೆರೆ ಸಂರಕ್ಷಣೆ ಮತ್ತು ಅಬಿವೃದ್ಧಿ ಪ್ರಾಧಿಕಾರ ಅಫೆಕ್ಸ್ ಸಮಿತಿಯ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದಾಗ ಅವರು ಈ ಸೂಚನೆ ನೀಡಿದರು.
ಅಲ್ಲದೆ ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್ ಕೆರೆಗಳ ಸಂಖ್ಯೆಯನ್ನು ನಿಖರ ಮಾಹಿತಿಯನ್ನು ಕ್ರೂಢೀಕರಿಸಿ ಸರ್ವೆ ನಡೆಸಿ ಗಡಿ ನಿರ್ಧರಿಸಿ, ಒತ್ತುವರಿ ತೆರವುಗೊಳಿಸಿ ವರದಿ ನೀಡಬೇಕೆಂದು ಮಹೇಂದ್ರ ಜೈನ್ ತಿಳಿಸಿದರು. UNI