ಬೆಂಗಳೂರು:
ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದ ಕಾರಣದಿಂದ ಅಸ್ವಸ್ಥರಾಗಿ ನಗರದ ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ. ವಿ ಸದಾನಂದಗೌಡ ಅವರನ್ನು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವ ಸಂಪುಟದ ಹಲವು ಸದಸ್ಯರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ತೀವ್ರ ಕಾರ್ಯಬಾಹುಳ್ಯದ ಮಧ್ಯೆಯೂ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಶ್ರೀ @narendramodi ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕೆಲವು ಅಮೂಲ್ಯ ಸಲಹೆಗಳನ್ನು ನೀಡಲು ಅವರು ಮರೆಯಲಿಲ್ಲ. ಸರ್, ತಮ್ಮೆಲ್ಲರ ಶುಭಹಾರೈಕೆಯಿಂದ ನಾನೀಗ ಇನ್ನಷ್ಟು ಗಟ್ಟಿಯಾಗಿದ್ದೇನೆ. @PIBBengaluru @DDChandanaNews
— Sadananda Gowda (@DVSadanandGowda) January 4, 2021
ಇಂದು ಬೆಳಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬಳಿಕ ಗೃಹ ಸಚಿವ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ಸಚಿವರು ಆಸ್ಟರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಸದಾನಂದ ಗೌಡರು ಸಚಿವರೊಂದಿಗೆ ಮಾತನಾಡಿದ್ದಾರೆ.
ಬೆಂಗಳೂರಿನ ಎಸ್ತರ್ ಅಸ್ಪತ್ರೆಗೆ ಭೇಟಿನೀಡಿ ನನ್ನ ಆರೋಗ್ಯ ವಿಚಾರಿಸಿದ ಸನ್ಮಾನ್ಯ ಸಿಎಂ ಶ್ರೀ @BSYBJP ಮತ್ತವರ ಸಂಪುಟ ಸದಸ್ಯರಾದ ಶ್ರೀ @GovindKarjol ಶ್ರೀ @drashwathcn ಶ್ರೀ @LaxmanSavadi ಶ್ರೀ @sriramulubjp ಶ್ರೀ @STSomashekarMLA ಹಾಗೂ ಮತ್ತೆಲ್ಲ ಮಿತ್ರರಿಗೆ ಧನ್ಯವಾದಗಳು. @DDChandanaNews @KarnatakaVarthe pic.twitter.com/mIPHCY6Sg9
— Sadananda Gowda (@DVSadanandGowda) January 4, 2021
ಇದಕ್ಕೂ ಮುನ್ನ ಸದಾನಂದ ಗೌಡ ಅವರ ಆರೋಗ್ಯ ಕುರಿತು ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ಮಧ್ಯಾಹ್ನ ಸದಾನಂದ ಗೌಡರಿಗೆ ಕರೆ ಮಾಡಿದ ಪ್ರಧಾನಿ ಮೋದಿ, ಎರಡು ಮೂರು ನಿಮಿಷಗಳ ಕಾಲ ಮಾತನಾಡಿ, ಆದಷ್ಟು ಬೇಗ ಚೇತರಿಕೆ ಕಾಣುವಂತೆ ಹಾರೈಸಿದರು. ಅಲ್ಲದೇ, ಸ್ಪಲ್ಪ ವಿಶ್ರಾಂತಿ ಪಡೆಯುವಂತೆ ಅವರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ. UNI