ಬೆಂಗಳೂರು:
ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು ಅಂತ ಆರೋಪಕ್ಕೆ ಸಂಬಂಧಪಟ್ಟಂತೆ ಸಾಹಿತಿ ಕೆ ಎಸ್ ಭಗವಾನ್ ಮುಖಕ್ಕೆ ಮಸಿ ಬಳಿಯಲಾಗಿದೆ.
ಸಾಹಿತಿ ಕೆಎಸ್ ಭಗವಾನ್ ಅವರ ಮುಖಕ್ಕೆ ಮಸಿ ಬೆಳೆದಿರುವ ವಕೀಲೆ. ಬೆಂಗಳೂರಿನಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಆವರಣ ದಲ್ಲಿ ನಡೆದಿರುವ ಘಟನೆ ಇದು.
ಬುದ್ಧಿಜೀವಿ, ಧರ್ಮ ವಿರೋಧಿ #ಫ್ರೊಭಗವಾನ್ ಇಂದು ಕೋರ್ಟ್ ಕಟಕಟೆಗೆ ಹಾಜರಾಗಿ ಜಾಮೀನು ಪಡೆದುಕೊಂಡರು. ಅವರಿಗೆ ಮಸಿ ಬಳಿದು ತಕ್ಕ ಶಾಸ್ತಿ ಮಾಡಿದ್ದೇನೆ. #ಜೈಶ್ರೀರಾಮ್🚩🚩🚩 pic.twitter.com/t0iF36VR3x
— Meera Raghavendra (@MeeraRaghavendr) February 4, 2021
ಈ ವಕೀಲೆ ಖಾಸಗಿ ದೂರನ್ನು ದಾಖಲಿಸಿದ್ದಾರೆ. ಮೀರಾ ರಾಘವೇಂದ್ರ ದೂರುದಾರರು. ಅವರು ದಾಖಲಿಸಿರುವ ದೂರದ ಮೇರಿಗೆ ಭಗವಾನ್ ಇವತ್ತು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ವಿಚಾರಣೆ ನಡೆಸಿ ನ್ಯಾಯಾಲಯ ಭಗವಾನ್ ಅವರಿಗೆ ಜಾಮೀನು ಮಂಜೂರು ಮಾಡಿರುತ್ತದೆ. ಕೋರ್ಟಿಂದ ಹೊರಗೆ ಬರುತ್ತಿದ್ದಂತೆ ವಕೀಲೆ ಅವರ ಮುಖಕ್ಕೆ ಮಸಿ ಬರೆದಿದ್ದಾಳೆ.