Leelavati funeral: last rites will be held today, here are the details…| ಲೀಲಾವತಿ ವಿಧಿವಶ: ಇಂದು ನಡೆಯಲಿದೆ ಅಂತಿಮ ಸಂಸ್ಕಾರ, ಇಲ್ಲಿದೆ ಡೀಟೈಲ್ಸ್…
ಬೆಂಗಳೂರು:
ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟಿ ಲೀಲಾವತಿ ಅವರು, ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ.
ನೆಲಮಂಗಲ ತಹಶೀಲ್ದಾರ್, ಜಿಲ್ಲಾ ಎಸ್ಪಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿಗಳು ನೆಲಮಂಗಲಕ್ಕೆ ಧಾವಿಸಿದ್ದು, ಹಿರಿಯ ನಟಿಯ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಅಭಿಮಾನಿಗಳು ನೂಕು-ನುಗ್ಗಲು ಮಾಡಿಕೊಳ್ಳದೆ ಶಾಂತ ರೀತಿಯಲ್ಲಿ ಹಿರಿಯ ನಟಿಯ ಅಂತಿಮ ದರ್ಶನ ಮಾಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ
ನೆಲಮಂಗಲದ ಜೂನಿಯರ್ ಕಾಲೇಜಿನ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದು, ಇಂದು ಮಧ್ಯಾಹ್ನದ ವರೆಗೆ ಲೀಲಾವತಿಯವರ ಅಂತಿಮ ದರ್ಶನ ಮಾಡಬಹುದುದಾಗಿದೆ. ಆ ಬಳಿಕ ಅಂತಿಮ ಸಂಸ್ಕಾರವನ್ನು ಸೋಲದೇವನಹಳ್ಳಿಯ ತೋಟದಲ್ಲಿ ಮಾಡಲಾಗುತ್ತದೆ.
ಇನ್ನೂ ಹಿರಿಯ ನಟಿ ಲೀಲಾವತಿಯವರು ನಿನ್ನೆ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.
