Home ಬೆಂಗಳೂರು ನಗರ Leelavati funeral: last rites will be held today, here are the details…|...

Leelavati funeral: last rites will be held today, here are the details…| ಲೀಲಾವತಿ ವಿಧಿವಶ: ಇಂದು ನಡೆಯಲಿದೆ ಅಂತಿಮ ಸಂಸ್ಕಾರ, ಇಲ್ಲಿದೆ ಡೀಟೈಲ್ಸ್…

35
0
Veteran Kannada film actress Leelavati passed away |

ಬೆಂಗಳೂರು:

ಸ್ಯಾಂಡಲ್ ವುಡ್ ನ ಖ್ಯಾತ ಹಿರಿಯ ನಟಿ ಲೀಲಾವತಿ ಅವರು, ಶುಕ್ರವಾರ ನಿಧನ ಹೊಂದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಲೀಲಾವತಿ ಅವರ ಅಂತಿಮ ದರ್ಶನಕ್ಕೆ ಕುಟುಂಬ ಹಾಗೂ ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ.

ನೆಲಮಂಗಲ ತಹಶೀಲ್ದಾರ್, ಜಿಲ್ಲಾ ಎಸ್​ಪಿ, ಐಜಿಪಿ ರವಿಕಾಂತೇಗೌಡ, ಜಿಲ್ಲಾಧಿಕಾರಿಗಳು ನೆಲಮಂಗಲಕ್ಕೆ ಧಾವಿಸಿದ್ದು, ಹಿರಿಯ ನಟಿಯ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಯ ಜವಾಬ್ದಾರಿ ಹೊತ್ತಿದ್ದಾರೆ. ಅಭಿಮಾನಿಗಳು ನೂಕು-ನುಗ್ಗಲು ಮಾಡಿಕೊಳ್ಳದೆ ಶಾಂತ ರೀತಿಯಲ್ಲಿ ಹಿರಿಯ ನಟಿಯ ಅಂತಿಮ ದರ್ಶನ ಮಾಡಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ

ನೆಲಮಂಗಲದ ಜೂನಿಯರ್ ಕಾಲೇಜಿನ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಿದ್ದು, ಇಂದು ಮಧ್ಯಾಹ್ನದ ವರೆಗೆ ಲೀಲಾವತಿಯವರ ಅಂತಿಮ ದರ್ಶನ ಮಾಡಬಹುದುದಾಗಿದೆ. ಆ ಬಳಿಕ ಅಂತಿಮ ಸಂಸ್ಕಾರವನ್ನು ಸೋಲದೇವನಹಳ್ಳಿಯ ತೋಟದಲ್ಲಿ ಮಾಡಲಾಗುತ್ತದೆ.

ಇನ್ನೂ ಹಿರಿಯ ನಟಿ ಲೀಲಾವತಿಯವರು ನಿನ್ನೆ ಸಂಜೆ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

LEAVE A REPLY

Please enter your comment!
Please enter your name here