Home Uncategorized Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್​

Lionel Messi: ‘ಕಾಂತಾರ’ ರೀತಿ ಕಾಣಿಸಿದ ಮೆಸ್ಸಿ-ಮರಡೋನಾ; ವಿಶ್ವ ಮಟ್ಟದಲ್ಲಿ ಕನ್ನಡ ಸಿನಿಮಾ ಕ್ರೇಜ್​

14
0
Advertisement
bengaluru

ಕನ್ನಡದ ‘ಕಾಂತಾರ’ ಸಿನಿಮಾ (Kantara Movie) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ಸೂಚಿಸಿದ್ದಾಗಿದೆ. ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಒಟಿಟಿಯಲ್ಲೂ ಈ ಸಿನಿಮಾ ಸದ್ದು ಮಾಡುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಂತೂ ‘ಕಾಂತಾರ’ ಚಿತ್ರಕ್ಕೆ ಸಂಬಂಧಿಸಿದಂತೆ ಲೆಕ್ಕವಿಲ್ಲದಷ್ಟು ಮೀಮ್ಸ್​ ಹರಿದಾಡುತ್ತಿವೆ. ‘ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ..’ ಎಂಬ ಡೈಲಾಗ್​ನಿಂದ ಹಿಡಿದು, ದೈವದ ಕೂಗಿನ ತನಕ ಹತ್ತಾರು ವಿಷಯಗಳನ್ನು ಇಟ್ಟುಕೊಂಡು ಮೀಮ್ಸ್​ ಮಾಡಲಾಗಿದೆ. ಅಷ್ಟೇ ಅಲ್ಲ, ಫಿಫಾ ವಿಶ್ವಕಪ್ (Fifa World Cup 2022)​ ವಿಚಾರದಲ್ಲೂ ಇದು ಮುಂದುವರಿದಿದೆ. ‘ಕಾಂತಾರ’ ಚಿತ್ರದ ಪೋಸ್ಟರ್​ ರೀತಿಯಲ್ಲಿ ಲಿಯೋನೆಲ್​ ಮೆಸ್ಸಿ (Lionel Messi) ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ರಚಿಸಲಾಗಿದೆ. ಇದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ನಿರ್ದೇಶಕ/ನಟ ರಿಷಬ್​ ಶೆಟ್ಟಿ ಅವರು ‘ಕಾಂತಾರ’ ಸಿನಿಮಾದಲ್ಲಿ ಕಟ್ಟಿಕೊಟ್ಟ ಹಲವು ದೃಶ್ಯಗಳು ಜನರ ಮನಸ್ಸಿನಲ್ಲಿ ಅಚ್ಚಾಗಿವೆ. ಕ್ಲೈಮ್ಯಾಕ್ಸ್​ ವೇಳೆಗೆ ಕಥಾನಾಯಕ ಶಿವನನ್ನು ದೈವವು ಬಡಿದೆಬ್ಬಿಸುವ ಒಂದು ಸನ್ನಿವೇಶವಿದೆ. ಅದು ‘ಕಾಂತಾರ’ ಪೋಸ್ಟರ್​ನಲ್ಲೂ ಹೈಲೈಟ್​ ಆಗಿತ್ತು. ಅದೇ ಮಾದರಿಯಲ್ಲಿ ಈಗ ಲಿಯೋನೆಲ್​ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ಗಮನ ಸೆಳೆಯುತ್ತಿವೆ.

Messi and Maradona ( Kantara Inspired)
Hats off to whoever done this edit#FIFAWorldCup pic.twitter.com/ZXLiunReue

— Mr.S (@SarangSuresh95) December 18, 2022

bengaluru bengaluru

ಮೈದಾನದಲ್ಲಿ ಸುಸ್ತಾಗಿ ಮಲಗಿದ ಲಿಯೋನೆಲ್​ ಮೆಸ್ಸಿ ಅವರನ್ನು ಡಿಯಾಗೋ ಮರಡೋನಾ ಅವರು ದೈವದ ರೀತಿಯಲ್ಲಿ ಕೂಗಿ ಎಬ್ಬಿಸುತ್ತಿರುವ ಹಾಗೆ ಈ ಮೀಮ್​ ಮೂಡಿಬಂದಿದೆ. ಇದನ್ನು ‘ಕಾಂತಾರ’ ಪ್ರೇಕ್ಷಕರು ಮತ್ತು ಫುಟ್ಬಾಲ್​ ಪ್ರಿಯರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಈ ಕ್ರಿಯೇಟಿವಿಟಿಗೆ ಅನೇಕರು ಭೇಷ್​ ಎಂದಿದ್ದಾರೆ.

ಇದನ್ನೂ ಓದಿ: IMDb Top 10 Indian Movies: ಐಎಂಡಿಬಿ ಟಾಪ್​ 10 ಚಿತ್ರಗಳಲ್ಲಿ ಕಾಂತಾರ, ಕೆಜಿಎಫ್​ 2, 777 ಚಾರ್ಲಿ

ಲಿಯೋನೆಲ್​ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​?

ಅಕ್ಷಯ್​ ಕುಮಾರ್​ ಅವರು ಪದೇ ಪದೇ ಬಯೋಪಿಕ್​ ಬಗ್ಗೆ ಆಸಕ್ತಿ ತೋರಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಯಾರಾದರೂ ರಾತ್ರೋ ರಾತ್ರಿ ಫೇಮಸ್​ ಆದರೂ ಸಾಕು, ಅವರ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಾರೆ ಎಂಬ ಮೀಮ್ಸ್​ ಹರಿದಾಡಲು ಶುರುವಾಗುತ್ತವೆ. ಅಂಥದ್ದರಲ್ಲಿ ಲಿಯೋನಲ್​ ಮೆಸ್ಸಿ ಬಯೋಪಿಕ್​ ವಿಚಾರ ಬಂದಾಗ ನೆಟ್ಟಿಗರು ಸುಮ್ಮನಿರುತ್ತಾರಾ? ಖಂಡಿತಾ ಇಲ್ಲ.

ಇದನ್ನೂ ಓದಿ: Hrithik Roshan: ‘ಕಾಂತಾರ ಕ್ಲೈಮ್ಯಾಕ್ಸ್​ ನೋಡಿ ರೋಮಾಂಚನ ಆಯ್ತು’; ರಿಷಬ್​ ಶೆಟ್ಟಿ ಚಿತ್ರಕ್ಕೆ ಹೃತಿಕ್​ ರೋಷನ್​ ಮೆಚ್ಚುಗೆ

ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆಯೇ ಒಂದಷ್ಟು ಮಂದಿ ಲಿಯೋನಲ್​ ಮೆಸ್ಸಿಯ ಬಯೋಪಿಕ್​ ಬಗ್ಗೆ ಚರ್ಚೆ ಆರಂಭಿದ್ದಾರೆ. ಆ ಬಯೋಪಿಕ್​ನಲ್ಲಿ ಮೆಸ್ಸಿ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡ್ತಾರೆ ಎಂದು ಮೀಮ್ಸ್​ ಹರಿಬಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ತಮಾಷೆ ಮಾಡಲಾಗುತ್ತಿದೆ. ಇನ್ನೂ ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಸುದ್ದಿ ಖಚಿತ’ ಎಂದೆಲ್ಲ ವದಂತಿ ಹಬ್ಬಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.


bengaluru

LEAVE A REPLY

Please enter your comment!
Please enter your name here