Home Uncategorized Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​

Lionel Messi Biopic: ‘ಲಿಯೋನೆಲ್‌ ಮೆಸ್ಸಿ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸಬೇಕು’; ಮೀಮ್ಸ್​ ವೈರಲ್​

25
0

ರೋಚಕ ಫಿಫಾ ವಿಶ್ವಕಪ್ (Fifa World Cup 2022)​ ಮುಕ್ತಾಯವಾಗಿದೆ. ಫ್ರಾನ್ಸ್ ವರ್ಸಸ್​ ಅರ್ಜೆಂಟೀನಾ ಪಂದ್ಯವನ್ನು ಇಡೀ ಜಗತ್ತಿನಾದ್ಯಂತ ಇರುವ ಪುಟ್​ಬಾಲ್​ ಪ್ರಿಯರು ನೋಡಿ ಸವಿದಿದ್ದಾರೆ. ಅಂತಿಮವಾಗಿ ಲಿಯೋನೆಲ್‌ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡ ವಿಶ್ವಕಪ್​ ಟ್ರೋಫಿಗೆ ಮುತ್ತಿಕ್ಕಿದೆ. ಈ ವಿಜಯಕ್ಕಾಗಿ ಅವರಿಗೆ ಜಗತ್ತಿನಾದ್ಯಂತ ಅಭಿನಂದನೆಗಳು ಮಹಾಪೂರ ಹರಿದುಬರುತ್ತಿದೆ. ಈ ಸಂದರ್ಭದಲ್ಲಿ ಲಿಯೋನೆಲ್‌ ಮೆಸ್ಸಿ (Lionel Messi) ಅವರ ಜೀವನಾಧಾರಿತ ಸಿನಿಮಾ ಬಗ್ಗೆಯೂ ಅಭಿಮಾನಿಗಳು ಚರ್ಚೆ ಮಾಡಲು ಆರಂಭಿಸಿದ್ದಾರೆ. ಒಂದು ವೇಳೆ ಮೆಸ್ಸಿ ಜೀವನದ ಕುರಿತು ಸಿನಿಮಾ ತಯಾರಾದರೆ ಅದರಲ್ಲಿ ಅಕ್ಷಯ್​ ಕುಮಾರ್​ (Akshay Kumar) ಅವರು ಮುಖ್ಯ ಪಾತ್ರ ಮಾಡಬೇಕು ಎಂದು ನೆಟ್ಟಿಗರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಕುರಿತಂತೆ ಅನೇಕ ಮೀಮ್ಸ್​ ಹರಿದಾಡುತ್ತಿವೆ.

ಬಾಲಿವುಡ್​ನಲ್ಲಿ ಅಕ್ಷಯ್​ ಕುಮಾರ್​ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಬಯೋಪಿಕ್​ ಮಾಡುವುದರಲ್ಲಿ ಅವರಿಗೆ ವಿಶೇಷ ಆಸಕ್ತಿ. ‘ಪ್ಯಾಡ್​ ಮ್ಯಾನ್​’, ‘ಸಾಮ್ರಾಟ್​ ಪೃಥ್ವಿರಾಜ್​’, ‘ಏರ್​ಲಿಫ್ಟ್​’, ‘ಗೋಲ್ಡ್​’ ಮುಂತಾದ ಸಿನಿಮಾಗಳಲ್ಲಿ ಅವರು ರಿಯಲ್​ ಲೈಫ್​ ವ್ಯಕ್ತಿಗಳ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಾರದ್ದೇ ಬಯೋಪಿಕ್​ ಬಗ್ಗೆ ಚರ್ಚೆ ಆದರೂ ಅಲ್ಲಿ ಅಕ್ಷಯ್​ ಕುಮಾರ್​ ಹೆಸರು ಕೇಳಿಬರುತ್ತದೆ.

ಇದನ್ನೂ ಓದಿ: Akshay Kumar: ಛತ್ರಪತಿ ಶಿವಾಜಿ ಪಾತ್ರ ಮಾಡಲು ಹೋಗಿ ಟ್ರೋಲ್​ ಆದ ಅಕ್ಷಯ್​ ಕುಮಾರ್​; ಇಲ್ಲಿದೆ ಕಾರಣ

ಅಕ್ಷಯ್​ ಕುಮಾರ್​ ಅವರು ಪದೇ ಪದೇ ಬಯೋಪಿಕ್​ ಬಗ್ಗೆ ಆಸಕ್ತಿ ತೋರಿಸುತ್ತಾರೆ ಎಂಬ ಕಾರಣಕ್ಕೆ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಯಾರಾದರೂ ರಾತ್ರೋ ರಾತ್ರಿ ಫೇಮಸ್​ ಆದರೂ ಸಾಕು, ಅವರ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಾರೆ ಎಂಬ ಮೀಮ್ಸ್​ ಹರಿದಾಡಲು ಶುರುವಾಗುತ್ತವೆ. ಅಂಥದ್ದರಲ್ಲಿ ಲಿಯೋನಲ್​ ಮೆಸ್ಸಿ ಬಯೋಪಿಕ್​ ವಿಚಾರ ಬಂದಾಗ ನೆಟ್ಟಿಗರು ಸುಮ್ಮನಿರುತ್ತಾರಾ? ಖಂಡಿತಾ ಇಲ್ಲ.

ಇದನ್ನೂ ಓದಿ: Akshay Kumar: ಸತತ ಸೋಲಿನ ಬಳಿಕ ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಲು ಮುಂದಾದ ನಟ ಅಕ್ಷಯ್​ ಕುಮಾರ್​

ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆಯೇ ಒಂದಷ್ಟು ಮಂದಿ ಲಿಯೋನಲ್​ ಮೆಸ್ಸಿಯ ಬಯೋಪಿಕ್​ ಬಗ್ಗೆ ಚರ್ಚೆ ಆರಂಭಿದ್ದಾರೆ. ಆ ಬಯೋಪಿಕ್​ನಲ್ಲಿ ಮೆಸ್ಸಿ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡ್ತಾರೆ ಎಂದು ಮೀಮ್ಸ್​ ಹರಿಬಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ತಮಾಷೆ ಮಾಡಲಾಗುತ್ತಿದೆ. ಇನ್ನೂ ಕೆಲವರಂತೂ ಒಂದು ಹೆಜ್ಜೆ ಮುಂದೆ ಹೋಗಿ, ‘ಈ ಸುದ್ದಿ ಖಚಿತ’ ಎಂದೆಲ್ಲ ವದಂತಿ ಹಬ್ಬಿಸುತ್ತಿದ್ದಾರೆ.

Akshay Kumar announced a biopic on Messi. Starts preparations. pic.twitter.com/6Qajs7VfdH

— Zaffar (@Zaffar_Nama) December 19, 2022

#Messi𓃵 #FIFAWorldCup #AkshayKumar pic.twitter.com/F23Cu19pi7

— jai_memeisthan (@memeisthan) December 19, 2022

It’s official @akshaykumar is going to make a biopic on Leo Messi. The title of the movie is Messi- a untold story directed by Prabhu Deva.@jammypants4 @badal_bnftv#FIFAWorldCupFinal #ARGFRA #Messi𓃵 pic.twitter.com/gQxTFpXn14

— Aditya Bhatt (@AadityaB2572002) December 18, 2022

ಅಕ್ಷಯ್​ ಕುಮಾರ್​ ಅವರು ಅರ್ಜೆಂಟೀನಾ ಜೆರ್ಸಿ ಧರಿಸಿ, ಫುಟ್​ಬಾಲ್​ ಹಿಡಿದಿರುವ ಫೋಟೋಗಳನ್ನು ಟ್ವಿಟರ್​ನಲ್ಲಿ ಶೇರ್​ ಮಾಡಲಾಗುತ್ತಿದೆ. ‘ಮೆಸ್ಸಿ ಬಯೋಪಿಕ್​ಗೆ ಅಕ್ಷಯ್​ ಕುಮಾರ್​ ತಯಾರಾಗುತ್ತಿರುವುದು’ ಎಂದು ಇದಕ್ಕೆ ನೆಟ್ಟಿಗರು ಕ್ಯಾಪ್ಷನ್​ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

LEAVE A REPLY

Please enter your comment!
Please enter your name here