Home Uncategorized Google: ಭಾರತದ ನೂರು ಭಾಷೆಗಳಲ್ಲಿ ಟೆಕ್ಷ್ಟ್, ವಾಯ್ಸ್ ಸರ್ಚ್​ಗೆ ಎಐ ಅಭಿವೃದ್ಧಿಪಡಿಸುತ್ತಿದೆ ಗೂಗಲ್; ಸುಂದರ್ ಪಿಚೈ

Google: ಭಾರತದ ನೂರು ಭಾಷೆಗಳಲ್ಲಿ ಟೆಕ್ಷ್ಟ್, ವಾಯ್ಸ್ ಸರ್ಚ್​ಗೆ ಎಐ ಅಭಿವೃದ್ಧಿಪಡಿಸುತ್ತಿದೆ ಗೂಗಲ್; ಸುಂದರ್ ಪಿಚೈ

13
0
Advertisement
bengaluru

ನವದೆಹಲಿ: ಭಾರತದ ನೂರು ಭಾಷೆಗಳಲ್ಲಿ (Indian Languages) ವಾಯ್ಸ್ ಮತ್ತು ಟೆಕ್ಷ್ಟ್ ಇಂಟರ್​ನೆಟ್ ಸರ್ಚ್​ ದೊರೆಯುವಂತೆ ಮಾಡಲು ಕೃತಕ ಬುದ್ಧಿಮತ್ತೆ (Artificial Intelligence) ಮಾದರಿಯನ್ನು ಗೂಗಲ್ ಅಭಿವೃದ್ಧಿಪಡಿಸುತ್ತಿದೆ ಎಂದು ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸುಂದರ್ ಪಿಚೈ (Sundar Pichai) ಸೋಮವಾರ ತಿಳಿಸಿದ್ದಾರೆ. ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಅಸಾಧಾರಣ ಬದಲಾವಣೆಯಾಗಿದೆ. ಸೈಬರ್​ ಭದ್ರತೆ, ಆರೋಗ್ಯ, ಶಿಕ್ಷಣ, ಕೌಶಲ ತರಬೇತಿ, ಕೃಷಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೃತಕಬುದ್ಧಿಮತ್ತೆಗೆ ಹೂಡಿಕೆ ಮಾಡುವ ಮೂಲಕ ಭಾರತದ ಸಣ್ಣ ಉದ್ಯಮಗಳು ಮತ್ತು ಸ್ಟಾರ್ಟಪ್​ಗಳಿಗೆ ಗೂಗಲ್ ನೆರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

‘10 ವರ್ಷಗಳಲ್ಲಿ ಭಾರತದ ಡಿಜಿಟಲೈಸೇಷನ್​ಗಾಗಿ ನಾವು ಘೋಷಿಸಿದ್ದ 10 ಶತಕೋಟಿ ಡಾಲರ್ ನಿಧಿ ಉತ್ತಮವಾಗಿ ಬಳಕೆಯಾಗುತ್ತಿರುವುದನ್ನು ಕಾಣಲು ಮತ್ತು ಹೊಸ ದಾರಿಗಳನ್ನು ಹಂಚಿಕೊಳ್ಳಲು ನಾನಿಲ್ಲಿಗೆ ಆಗಮನಿಸಿದ್ದೇನೆ. ಭಾರತದ ಡಿಜಿಟಲ್ ಭವಿಷ್ಯವನ್ನು ಇನ್ನಷ್ಟು ಆಧುನೀಕರಣಗೊಳಿಸಲು ನಾವು ನೆರವು ನೀಡುತ್ತಿದ್ದೇವೆ’ ಎಂದು ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಾರೆ.

ಇದನ್ನೂ ಓದಿ: YouTube: ಭಾರತದ ಜಿಡಿಪಿಗೆ 2021ರಲ್ಲಿ ಯೂಟ್ಯೂಬರ್​ಗಳಿಂದ 10 ಸಾವಿರ ಕೋಟಿ ರೂ. ಕೊಡುಗೆ; ವರದಿ

ಭಾರತದ ನೂರು ಭಾಷೆಗಳನ್ನು ನಿರ್ವಹಿಸಲು ಒಂದೇ ಕೃತಕ ಬುದ್ಧಿಮತ್ತೆ ಮಾದರಿಯನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಜಾಗತಿಕ ಮಟ್ಟದಲ್ಲಿ ಆನ್​ಲೈನ್​ನಲ್ಲಿ ಹೆಚ್ಚು ಬಳಕೆಯಲ್ಲಿರುವ 1,000 ಭಾಷೆಗಳನ್ನು ಬಳಸಲು ಅನುಕೂಲವಾಗುವಂತೆ ಎಐ ಅಭಿವೃದ್ಧಿಪಡಿಸಬೇಕಿದೆ. ​ಇದರಿಂದಾಗಿ ಜನರಿಗೆ ತಮ್ಮ ಆಯ್ಕೆಯ ಭಾಷೆಯಲ್ಲಿ ಮಾಹಿತಿ ಪಡೆಯುವುದು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

bengaluru bengaluru

ಭಾಷಾ ಆನುವಾದ ಮತ್ತು ಸರ್ಚ್ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮಗೊಳಿಸಲು ದೇಶದ 773 ಜಿಲ್ಲೆಗಳಿಂದ ಮಾತಿನ ದತ್ತಾಂಶಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಲ್ಲಿ ಬೆಂಗಳೂರಿನ ಐಐಎಸ್​ಸಿ ಜತೆ ಸಹಭಾಗಿತ್ವ ಹೊಂದಲಾಗಿದೆ ಎಂದು ಗೂಗಲ್ ತಿಳಿಸಿದೆ. ಅಲ್ಲದೆ, ಭಾರತದಲ್ಲಿ ಮಹಿಳಾ ನೇತೃತ್ವದ ಸ್ಟಾರ್ಟಪ್​ಗಳಲ್ಲಿ ಹೂಡಿಕೆ ಮಾಡಲು ಉತ್ಸುಕವಾಗಿರುವುದಾಗಿಯೂ ಗೂಗಲ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ


bengaluru

LEAVE A REPLY

Please enter your comment!
Please enter your name here