ಬೆಂಗಳೂರು: ಮಾಧ್ಯಮಗಳಲ್ಲಿ ತೋರಿಸುತ್ತಿರುವುದು (ಮಂಡ್ಯ ಜೆಡಿಎಸ್ ಪಾಲು) ಸುದ್ದಿಯಲ್ಲಿ ಯಾವುದು ವಾಸ್ತವಾಂಶ ಸುದ್ದಿಯಲ್ಲ ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಇಂದು ದಿಲ್ಲಿಯಿಂದ ವಾಪಸ್ ಬೆಂಗಳೂರಿಗೆ ಬಂದಿಳಿದ ನಂತರ ಸ್ಪಷ್ಟಪಡಿಸಿದರು.
ನಮ್ಮ ರಾಜ್ಯದ ಪರವಾಗಿ ಕಾನೂನು ಹೋರಾಟ ನಡೆಸಿದ್ದ ನಾರಿಮನ್ ಅವರ ನಿಧನ ಹಿನ್ನೆಲೆ ಗೌರವ ಸಲ್ಲಿಸಲು ಹೋಗಿದ್ದೆ. ದೆಹಲಿಗೆ ಬಂದಾಗ ಬೇಟಿ ಮಾಡಬೇಕು ಅಂತ ಅಮಿತ್ ಶಾ ಹೇಳಿದ್ರು. ಹೀಗಾಗಿ ಅವರನ್ನ ಭೇಟಿ ಮಾಡಿ ಬಂದಿದ್ದೇನೆ. ಮಾಧ್ಯಮಗಳಲ್ಲಿ ತೋರಿಸುತ್ತಿರುವುದು (ಮಂಡ್ಯ ಜೆಡಿಎಸ್ ಪಾಲು) ಯಾವುದು ವಾಸ್ತವಾಂಶ ಸುದ್ದಿಯಲ್ಲ ಎಂದು ಸ್ಪಷ್ಟಪಡಿಸಿದರು.
ಚುನಾವಣೆಗೆ ಇನ್ನೂ 2 ತಿಂಗಳು ಸಮಯವಿದೆ ಮುಂದಿನ ವಾರದ ಒಳಗೆ ಎಲ್ಲಾ ಬಗೆ ಹರಿಯುತ್ತೆ. ಸೀಟು ಹಂಚಿಕೆ ಸಂಬಂಧ ಜೆಡಿಎಸ್ ಬಿಜೆಪಿ ನಡುವೆ ಯಾವುದೆ ಗೊಂದಲಗಳಿಲ್ಲ. ಈಗ ಬರುತ್ತಿರುವ ಧಾರವಾಹಿಗಳಿಗೆ ಹೆಚ್ಚಿನ ಮಹತ್ವವಿಲ್ಲ. ರಾಜ್ಯದ 28 ಕ್ಷೇತ್ರ ಗೆಲ್ಲಬೇಕೆನ್ನುವುದು ನಮ್ಮ ಗುರಿ, ಎಂದರು.
ಮಂಡ್ಯದಲ್ಲಿ ಯಾರು ಹಾಸನದಲ್ಲಿ ಯಾರು ಅಂತ ಒಂದು ಕ್ಷೇತ್ರದ ಬಗ್ಗೆ ಚರ್ಚೆ ಮಾಡಬೇಡಿ. ನಮಗೆ 28 ಕ್ಷೇತ್ರಗಳು ಒಂದೇ. ಅವಶ್ಯಕತೆ ಬಿದ್ರೆ ಮತ್ತೊಮ್ಮೆ ದೆಹಲಿಗೆ ಹೋಗುತ್ತೇನೆ ಎಂದರು. ಈ ಮೂಲಕ ಮಂಡ್ಯ, ಕೋಲಾರ ಮತ್ತು ಹಾಸನ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ ಎನ್ನುವ ಸುದ್ದಿಯನ್ನು ತಳ್ಳಿಹಾಕಿದರು. ಸೀಟು ಹಂಚಿಕೆ ಬಗ್ಗೆ ಚರ್ಚೆ ಆಗಿರಬಹುದು. ಆದ್ರೆ, ಈ ಬಗ್ಗೆ ಕುಮಾರಸ್ವಾಮಿ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ ಎಂದರು.
ಇನ್ನು ರಾಜ್ಯಸಭಾ ಚುನಾವಣೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯಸಭಾ ಚುನಾವಣೆಗೆ ಅವರ ಸೂಚನೆ ಮೆರೆಗೆ ನಾನು ಅಭ್ಯರ್ಥಿ ಹಾಕಿರುವುದು. ನಾನು ಆತ್ಮ ಸಾಕ್ಷಿಯಾಗಿ ಮತಕ್ಕೆ ಮನವಿ ಮಾಡುತ್ತಿದ್ದೇನೆ ಎಂದರು.