Home ಅಪರಾಧ Karnataka: 13-year-old girl was raped by a 60-year-old man | 13 ವರ್ಷದ...

Karnataka: 13-year-old girl was raped by a 60-year-old man | 13 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನಿಂದ ಅತ್ಯಾಚಾರ

41
0
Magadi Police Station

ರಾಮನಗರ: ಜಿಲ್ಲೆಯ ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ 60 ವರ್ಷದ ವೃದ್ಧನೊಬ್ಬ ಅತ್ಯಾಚಾರ ನಡೆಸಿದ ಘಟನೆ ಜರುಗಿದೆ

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಗೆ ಪೋಷಕರು ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಬಾಲಕಿ ಈಗ ಒಂದೂವರೆ ತಿಂಗಳ ಗರ್ಭಿಣಿಯಾಗಿದ್ದು, 13 ವರ್ಷದ ಮಗಳ ಸ್ಥಿತಿ ಕಂಡು ಪೋಷಕರು ಕಂಗಾಲಾಗಿದ್ದಾರೆ. ಇನ್ನು ಯಾರು ಹೀಗೆ ಮಾಡಿದ್ದು ಎಂದು ಪ್ರಶ್ನಿಸಿದಾಗ ವೃದ್ಧನ ಹೆಸರು ಬಾಯ್ಬಿಟಿದ್ದಾಳೆ.

ಆರೋಪಿ ವೃದ್ಧನ ಮನೆಗೆ ಹಾಲು ಕೊಡಲು ಬಾಲಕಿಯ ತಂದೆ ಹೋಗುತ್ತಿದ್ದರು. ಕೆಲವೊಂದು ಸಮಯದಲ್ಲಿ ತಂದೆ ಇಲ್ಲದ ದಿನ, ಈ ಬಾಲಕಿಯೇ ಹಾಲು ಕೊಡಲು ವೃದ್ಧನ ಮನೆಗೆ ಹೋಗುತ್ತಿದ್ದಳು. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಿಳಿದು ಬಂದಿದೆ.

ಇನ್ನು ಈ ವೃದ್ಧ, 5 ವರ್ಷಗಳ ಹಿಂದೆಯೂ ಲೈಂಗಿಕ ದೌರ್ಜನ್ಯವೆಸಗಿದ್ದ. ಆದರೆ, ಭಯದಿಂದ ಬಾಲಕಿ ಸುಮ್ಮನಿದ್ದಳು. ಇದೀಗ ಐದು ವರ್ಷಗಳ ಬಳಿಕ ಮತ್ತೆ ಹಾಲು ಕೊಟ್ಟು ಬರಲು ಮನೆಗೆ ತೆರಳಿದ್ದ ವೇಳೆ ಮೊದಲಿನಂತೆಯೇ ಸಲುಗೆ ಬೆಳಸಿ ಕುಕೃತ್ಯವೆಸಗಿದ್ದಾನೆ.

ಇದೀಗ ಅತ್ಯಾಚಾರ ಆರೋಪದಡಿ 60 ವರ್ಷದ ವೃದ್ಧನನ್ನು ಪೊಲೀಸರು ಬಂಧಿಸಿದ್ದು, ಮಾಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿ ತನಿಖೆ ಆರಂಭವಾಗಿದೆ.

LEAVE A REPLY

Please enter your comment!
Please enter your name here