ಬೆಂಗಳೂರು:
ಸಮರ್ಪಕ ಅಂಕಿ ಅಂಶಗಳೊಂದಿಗೆ ಸಮರ್ಥವಾಗಿ ಚರ್ಚೆ, ಸಂವಾದಗಳಲ್ಲಿ ಭಾಗವಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಗುರುಪ್ರಕಾಶ್ ಪಾಸ್ವಾನ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಅವರು ರಾಜ್ಯದ ವಕ್ತಾರರು ಮತ್ತು ರಾಜ್ಯ ಮಾಧ್ಯಮ ಸಮಿತಿ ಸದಸ್ಯರ ಜೊತೆ ಸಂವಾದದಲ್ಲಿ ಪಾಲ್ಗೊಂಡರು.
ಪಕ್ಷ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಕಾರ್ಯಗಳು ಹಾಗೂ ಯೋಜನೆಗಳನ್ನು ತಿಳಿಸಲು ಮಾಧ್ಯಮ ಪ್ರತಿನಿಧಿಗಳು ಕಾರ್ಯಪ್ರವೃತ್ತರಾಗಬೇಕು. ಪಕ್ಷ- ಸರಕಾರ- ಜನಪ್ರತಿನಿಧಿಗಳು ಮತ್ತು ಜನತೆಯ ನಡುವಿನ ಸೇತುವೆಯಾಗಿ ಅವರು ಕಾರ್ಯ ನಿರ್ವಹಿಸಬೇಕು.
ಲೇಖನ ಬರೆಯುವ ವೇಳೆ ಆಕ್ರಮಣಕಾರಿ ಪ್ರವೃತ್ತಿ ನಮ್ಮದಾಗಿರಲಿ ಎಂದು ಆಶಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಯನ್ನು ಕಾಲಕಾಲಕ್ಕೆ ತಿಳಿದುಕೊಳ್ಳಿ, ನಮ್ಮ ತತ್ವಾದರ್ಶಗಳ ಬಗ್ಗೆ ಸಮರ್ಪಕ ಮಾಹಿತಿ ನಿಮ್ಮದಾಗಿಸಿಕೊಳ್ಳಿ. ಪಕ್ಷದ ಸ್ಥಾಪಕರು ಮತ್ತು ಹಿರಿಯ ನಾಯಕರ ಪುಸ್ತಕಗಳನ್ನು ಓದಿದರೆ ಇವೆಲ್ಲವೂ ನಿಮಗೆ ಕರಗತವಾಗುತ್ತದೆ ಎಂದು ತಿಳಿಸಿದರು.
ಚರ್ಚೆ ಮತ್ತು ಸಂವಾದದ ಸಂದರ್ಭದಲ್ಲಿ ಲಭಿಸುವ ಸಮಯವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಅವರು ತಿಳಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣಾ, ಪ್ರಮುಖರು ಮತ್ತು ಆಹ್ವಾನಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.