Home ಹಾವೇರಿ ಚುನಾವಣಾ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ನೆನಪಾಗುತ್ತಾರೆ

ಚುನಾವಣಾ ಸಮಯದಲ್ಲಿ ಮಾತ್ರ ಕಾಂಗ್ರೆಸ್ ಗೆ ಅಲ್ಪಸಂಖ್ಯಾತರು ನೆನಪಾಗುತ್ತಾರೆ

36
0

ಬಸವರಾಜ ಬೊಮ್ಮಾಯಿ ಟೀಕೆ

ಹಾನಗಲ್ : (ಚಿಕ್ಕಾಂಶಿ)

ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ ನವರು ಎಲ್ಲಿಲ್ಲದ ಪ್ರೀತಿ ತೋರಿಸುತ್ತಾರೆ. ಚುನಾವಣೆ ಸಮಯದಲ್ಲಿ ಮಾತ್ರ ಈ ಸಮುದಾಯ ಅವರಿಗೆ ನೆನಪಾಗುತ್ತದೆ. ಉಳಿದ ಸಮಯದಲ್ಲಿ ಅವರನ್ನು ಕಾಂಗ್ರೆಸ್ ಪರಿಗಣಿಸುವುದಿಲ್ಲ ಎಂದು ಬೊಮ್ಮಾಯೊ ನುಡಿದರು.

೫ ವರ್ಷ ಅಲ್ಪಸಂಖ್ಯಾತರನ್ನು ಬಾವಿಯಲ್ಲಿಟ್ಟಿರುತ್ತಾರೆ. ಚುನಾವಣೆ ಬಂದಾಗ ಹಗ್ಗ ಕೊಟ್ಟು ಮೇಲೆ ತಂದು ಓಟ್ ಹಾಕಿಸಿಕೊಂಡು ಮತ್ತೆ ಬಾವಿಗೆ ದೂಡುತ್ತಾರೆ. ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ನವರು ದುರುಪಯೋಗ ಮಾಡಿಕೊಂಡಿದ್ದಾರೆ. ಅಲ್ಪಸಂಖ್ಯಾತರಿಂದಲೇ ಕಾಂಗ್ರೆಸ್ ಅಸ್ಥಿತ್ವದಲ್ಲಿದೆ. ಅವರಿಲ್ಲದಿದ್ದರೆ ಕಾಂಗ್ರೆಸ್ ಪಕ್ಷ ದೇಶದಲ್ಲಿ ಹುಡುಕುವಂತಹ ಪರಿಸ್ಥಿತಿ ಬರುತ್ತಿತ್ತು. ಕಾಂಗ್ರೆಸ್ ಗೆ ಅಲ್ಪಸಂಖ್ಯಾತರ ರಕ್ಷಣೆ ಇದೆ, ಆದರೆ ಕಾಂಗ್ರೆಸ್ ಅಲ್ಪ ಸಂಖ್ಯಾತರ ರಕ್ಷಣೆ ಮಾಡುತ್ತದೆ ಎಂದು ಹೇಳುತ್ತಾರೆ ಎಂದು ಅವರು ಪ್ರಚಾರದ ಸಂದರ್ಭದಲ್ಲಿ ಮಾತನಾಡಿದರು.

ಪ್ರತಿಪಕ್ಷದವರ ಟೀಕೆಗಳೇ ನನಗೆ ಮೆಟ್ಟಿಲು. ಈಕೆ ಎಂಬ ಮೆಟ್ಟಿಲುಗಳನ್ನು ಒಂದೊಂದಾಗಿ ಏರಿ ಕರ್ನಾಟಕವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿಕ್ಕಾಂಶಿ ಗ್ರಾಮದಲ್ಲಿ ಹೇಳಿದರು.

ಯಾರು ಎಷ್ಟೇ ಟೀಕೆ ಮಾಡಿಲಿ. ನನ್ನ ಗುರಿ ರೈತರ, ದೀನದಲಿತರ, ನೀರಾವರಿ ಯೋಜನೆಗಳ ಕರ್ನಾಟಕದ ಸಮಗ್ರ ಅಭಿವೃದ್ದಿತ್ತ ಮಾತ್ರ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಸಂಪೂರ್ಣ ಕರ್ನಾಟಕವನ್ನು ಅಭಿವೃದ್ಧಿ ಮಾಡುವುದೊಂದೇ ನನ್ನ ಕಾಯಕ. ಆ ಗುರಿಯಿಂದ ನಾನು ವಿಮುಖವಾಗುವುದಿಲ್ಲ ಎಂದು ಅವರು ಪ್ರಚಾರದ ವೇಳೆ ಹೇಳಿದರು.

CM Bommai at Hangal

ಕಾಂಗ್ರೆಸ್ ಟೀಕೆಗೆ ಬೊಮ್ಮಾಯಿ ಅನುದಾನದ ರಿಪೋರ್ಟ್ ಕಾರ್ಡ್ ಪ್ಲೇ

 • ಹಾನಗಲ್ ತಾಲೂಕಿನ ೩೮೪೩೩ ರೈತರಿಗೆ ತಲಾ ರೂ.೧೦೦೦೦ ನೀಡಲಾಗಿದೆ.
 • ಕೋವಿಡ್ ಸಂದರ್ಭದಲ್ಲಿ ೧೨೦೦೦ ಕಾರ್ಮಿಕರಿಗೆ ಕಿಟ್ ನೀಡಲಾಗಿದೆ.
 • ಪ್ರಧಾನಮಂತ್ರಿ ಕಲ್ಯಾಣ ಯೋಜನೆಯಲ್ಲಿ ೬೬,೦೦೦ ಉಚಿತವಾಗಿ ಪಡಿತರ ನೀಡಲಾಗಿದೆ.
 • ಕಟ್ಟಡ ಕಾರ್ಮಿಕರಿಗೆ ರೂ.೪೨ ಕೋಟಿ ನೀಡಲಾಗಿದೆ
 • ಹೂವು ಮಾರುವ ೬೪೬೨ ಜನರಿಗೆ ತಾಲಾ ರೂ.೧೦,೦೦೦ ನೀಡಲಾಗಿದೆ,
 • ಹಣ್ಣು ಮಾರುವ ೧೯೮೦ ಜನರಿಗೆ ತಲಾ ರೂ. ೧೦,೦೦೦ ನೀಡಲಾಗಿದೆ.
 • ಒಟ್ಟು ರೂ.೧೭.೬೦ ಕೋಟಿ ಹಾನಗಲ್ ತಾಲೂಕಿನ ಜನರಿಗೆ ನೀಡಲಾಗಿದೆ.,
 • ಮೆಕ್ಕೆಜೋಳ ಬೆಳೆಗಾರರಿಗೆ ರೂ.೧೭.೬೩ ಕೋಟಿ ಅನುದಾನ ನೀಡಲಾಗಿದೆ.
 • ಎಸ್.ಸಿ ಎಸ್.ಟಿ ಸಮುದಾಯಕ್ಕೆ ರೂ.೨೦ ಕೋಟಿ ಅನುದಾನ ನೀಡಲಾಗಿದೆ.
 • ಗ್ರಾಮೀಣ ಮತ್ತು ಲೋಕೋಪಯೋಗಿ ಸೇರಿ ಒಟ್ಟು ರೂ.೮೦ ಕೋಟಿ ಈ ವರ್ಷ ಮಂಜೂರು ಮಾಡಲಾಗಿದೆ
 • ಅಕ್ಕಿ ಆಲೂರು ಮತ್ತು ಹಾನಗಲ್ ಎರಡೂ ಐಟಿಐ ಉನ್ನತೀಕರಣಕ್ಕೆ ರೂ.೬೦ ಕೋಟಿ ನೀಡಲಾಗಿದೆ.
 • ಗ್ರಾಮೀಣ ಕುಡಿಯುವ ನೀಡಿಗೆ ರೂ.೬೪ ಕೋಟಿ ಮಂಜೂರಾಗಿದೆ ಅದರಲ್ಲಿ ರೂ.೨೬ ಕೋಟಿ ಅನುದಾನ ಬಳಕೆ ಆಗಿದೆ.
 • ಹಾನಗಲ್ ಕ್ಷೇತ್ರದಲ್ಲಿ ರೂ.೨೦ ಕೋಟಿ ಅನುದಾನವನ್ನು ಶಿವಕುಮಾರ ಉದಾಸಿ ಅವರು ಮಂಜೂರು ಮಾಡಿಸಿದ್ದಾರೆ

ಕಾಯಕದಲ್ಲಿ ನಂಬಿಕೆ

ಭಾರತೀಯ ಜನತಾ ಪಕ್ಷ ಕಾಯಕದಲ್ಲಿ ನಂಬಿಕೆ ಇಟ್ಟಿದೆ. ಮಾತುಗಳಿಂದ ಹೊಟ್ಟೆ ತುಂಬುವುದಿಲ್ಲ ಅಭಿವೃದ್ಧಿಯಾಗುವುದಿಲ್ಲ. ರಾಜಕಾರಣ ಅಂದರೆ ಜನರನ್ನು ಮರುಳು ಮಾಡುವುದಲ್ಲ. ಕೆಳಮಟ್ಟದಲ್ಲಿ ಭಾಷೆ ಬಳಸಿದರೆ ದೊಡ್ಡವರಾಗುವುದಿಲ್ಲ. ಅಭಿವೃದ್ಧಿ ಒಂದೇ ನಮ್ಮ ಪಕ್ಷದ ಅಜೆಂಡಾ ಎಂದು ಅವರು ಹೇಳಿದರು. ನಮ್ಮ ಜನಕೃತಜ್ಞರು ಕಷ್ಟಕಾಲದಲ್ಲಿ ಕೈಹಿಡಿದ ಸರ್ಕಾರವನ್ನು ಹಾನಗಲ್ ತಾಲೂಕಿನ ಜನ ಕೈ ಬಿಡುವುದಿಲ್ಲ ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪ ಅವರು ಈ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಾನಗಲ್ ಕ್ಷೇತ್ರದ ಜನ ಕೆರೆ ತುಂಬಿಸುವ ಯೋಜನೆಯ ಬೇಡಿಕೆ ಇಟ್ಟಿದ್ದರು. ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದೇ ದಿನದಲ್ಲಿ 625 ಕೋಟಿ ಅನುದಾನವನ್ನು ಬಿಎಸ್ ಯಡಿಯೂರಪ್ಪ ಅವರು ಮಂಜೂರು ಮಾಡಿದರು. ಇದುನ ಭಾರತೀಯ ಜನತಾ ಪಕ್ಷ ಅಭಿವೃದ್ಧಿಗೆ ನೀಡುವ ಮಹತ್ವ ಎಂದು ಬೊಮ್ಮಾಯಿ ಹೇಳಿದರು.

LEAVE A REPLY

Please enter your comment!
Please enter your name here