Home ಬಾಗಲಕೋಟ ವಕೀಲೆ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಆರೋಪಿ ಬಂಧನ

ವಕೀಲೆ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಿದ ಆರೋಪಿ ಬಂಧನ

22
0
Man Arrested for publicly assaulting lady Advocate in Bagalkote
bengaluru

ಬಾಗಲಕೋಟೆ:

ವಕೀಲೆ ಮೇಲೆ ಸಾರ್ವಜನಿಕವಾಗಿ ಥಳಿಸಿದ ಆರೋಪದ ಮೇಲೆ ಮಹಾಂತೇಶ ಚೊಳಚಗುಡ್ಡ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಮಾಡಿ, ಜಾಡಿಸಿ ಒದ್ದ ವಿಡಿಯೊ ವೈರಲ್ ಆಗಿದೆ.

ವಿನಾಯಕ ನಗರದಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ವಕೀಲೆಯ ಸಂಗೀತಾ ಶಿಕ್ಕೇರಿ ಪತಿ ಸಹಾಯಕ್ಕೆ ಮನವಿ ಮಾಡಿದರೂ ಜನರು ನೆರವಿಗೆ ಬಂದಿಲ್ಲ.

ಸಂಗೀತಾ ಅವರನ್ನು ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

bengaluru

ಆರೋಪಿ ಮಹಾಂತೇಶ ನವನಗರದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಫೋಟೊಗ್ರಾಫರ್ ಆಗಿದ್ದಾರೆ.

ಸಂಗೀತ ಶಿಕ್ಕೇರಿ ಹಾಗೂ ಮಹಾಂತೇಶ ಚೊಳಚಗುಡ್ಡ ಅಕ್ಕಪಕ್ಕದ ಮನೆಯ ನಿವಾಸಿಗಳು. ಸಂಗೀತಾ ಅವರ ಮನೆಯನ್ನು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಖರೀದಿಸಿದ್ದಾರೆ. ಕುಟುಂಬದವರ ಗಮನಕ್ಕೆ ತಾರದೇ ನಮ್ಮ ದೊಡ್ಡಪ್ಪ ಮನೆಯನ್ನು ಮಾರಾಟ ಮಾಡಿದ್ದಾರೆ. ವಿವಾದ ನ್ಯಾಯಾಲಯದಲ್ಲಿದೆ. ಆದರೂ ರಾಜು ನಾಯ್ಕರ್ ತಮ್ಮ ಪ್ರಭಾವ ಬಳಸಿ ಮನೆ ಖಾಲಿ ಮಾಡಲು ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗೀತಾ ಶಿಕ್ಕೇರಿ ಎರಡು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದರು. ಈಗ ನಡೆದಿರುವ ಹಲ್ಲೆಯ ಹಿಂದೆಯೂ ಅವರದ್ದೇ ಕೈವಾಡ ಇದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಈ ಆರೋಪವನ್ನು ರಾಜು ನಾಯ್ಕರ್ ನಿರಾಕರಿಸಿದ್ದಾರೆ.

bengaluru

LEAVE A REPLY

Please enter your comment!
Please enter your name here