Home ಮಂಡ್ಯ ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ- ಸಚಿವ ಡಾ. ನಾರಾಯಣಗೌಡ ಗರಂ

ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬ- ಸಚಿವ ಡಾ. ನಾರಾಯಣಗೌಡ ಗರಂ

49
0

ಬೆಂಗಳೂರು:

ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಿರ್ಮಾಣವಾಗುತ್ತಿರುವ ರಾಜ್ಯದ ಪ್ರತಿಷ್ಟಿತ ಯೋಜನೆಗಳಲ್ಲೊಂದಾದ ಮೆಘಾ ಫುಡ್ ಪಾರ್ಕ್ ಕಾಮಗಾರಿ ವಿಳಂಬಕ್ಕೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಸೌಧದಲ್ಲಿ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ದಿನಕ್ಕೊಂದು ಸಬೂಬು ಹೇಳುವುದನ್ನು ನಿಲ್ಲಿಸಿ, 15 ದಿನಗಳಲ್ಲಿ ವರದಿ ನೀಡಬೇಕು ಎಂದು ಖಡಕ್ಕಾಗಿ ಹೇಳಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರೂರಿನಲ್ಲಿ ಆಗುತ್ತಿರುವ ಮೆಗಾ ಫುಡ್ ಫಾರ್ಕ್ ಪ್ರತಿಷ್ಟಿತ ಯೋಜನೆ. ಸಾವಿರಾರು ಜನರಿಗೆ ನೇರ ಉದ್ಯೋಗ ಸಿಗುತ್ತದೆ. ಪರೋಕ್ಷವಾಗಿ ಸಾಕಷ್ಟು ಜನರಿಗೆ ಉದ್ಯೋಗ ದೊರೆಯತ್ತದೆ. ಜಿಲ್ಲೆಗೆ ಹೆಸರು ಬರುವಂತ ಯೋಜನೆ ಇದು. ಆದರೆ ಅಧಿಕಾರಿಗಳು ಪ್ರತಿ ಹಂತದಲ್ಲು ಒಂದೊಂದು ನೆಪ ಹೇಳಿ ಕಾಮಗಾರಿ ಆಮೆಗತಿಯಲ್ಲಿ ನಡೆಸುತ್ತಿದ್ದಾರೆ. ಹೀಗೆ ಆದರೆ ಸುಮ್ಮನಿರಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಬಂದು ಮೆಗಾ ಫುಡ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ಆದರೆ ಇಲ್ಲಿ ಕೆಲಸವೇ ಆಗಿಲ್ಲ. ನೀರು, ವಿದ್ಯುತ್, ರಸ್ತೆ ಹೀಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಧಿಕಾರಿಗಳಿಂದ ಈ ವರೆಗೆ ಸಾಧ್ಯವಾಗಿಲ್ಲ. ಇನ್ನು ಕಾರಣಗಳನ್ನು ಹೇಳುವಂತಿಲ್ಲ. ಅದೇನೇ ಸಮಸ್ಯೆ ಇದ್ದರೂ ತಕ್ಷಣ ಸರಿಪಡಿಸಬೇಕು. 15 ದಿನಗಳಲ್ಲಿ ಎಲ್ಲ ತೊಡಕನ್ನು ನಿವಾರಿಸಿ, ಕೆಲಸ ಆರಂಭಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ಕಾಗಿ ಹೇಳಿದ್ದಾರೆ.

Megha Food Park Work Delayed in Mandya1

ಕೇಂದ್ರ ಸರ್ಕಾರದ ‘ಕಿಸಾನ್ ಸಂಪದ ಯೋಜನೆಯಡಿ’ ಬೂಕನಕೆರೆಯ ಅಶೋಕನಗರದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣವಾಗಬೇಕು. ಇದು ಮುಖ್ಯಮಂತ್ರಿಗಳ ಬಹುದಿನಗಳ ಕನಸು. ಮೆಘಾ ಫುಡ್ ಪಾರ್ಕ್, ಪಶು ಆಹಾರ ಉತ್ಪಾದನಾ ಘಟಕ, ಹಾಲಿನ ಪ್ಯಾಕೇಜ್ ಉತ್ಪಾದನಾ ಘಟಕ ಜೊತೆಗೆ ಸಣ್ಣ ಕೈಗಾರಿಕೆಗಳು ಇಲ್ಲಿ ಆರಂಭವಾಗಬೇಕು. ಇದಕ್ಕೆ ಜಲಧಾರೆ ಯೋಜನೆಯಡಿ ಕೈಗಾರಿಕಾ ಪ್ರದೇಶಕ್ಕೆ 2.75 MLD ನೀರು ಸರಬರಾಜು ಆಗಬೇಕು. ಕೈಗಾರಿಕಾ ವಸಾಹತು ನಿರ್ಮಾಣ ಮಾಡಲು ಫೆವರಿಚ್ ಇನ್ ಫ್ರಾ ಫ್ರೈವೆಟ್ ಲಿಮಿಟೆಡ್ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. 60 ಎಕರೆ ಪ್ರದೇಶದಲ್ಲಿ , 113.83 ಕೋಟಿ ವೆಚ್ಚದಲ್ಲಿ ಮೆಗಾಫುಡ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇಷ್ಟು ಮಹತ್ವದ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಆದರೆ ಅಧಿಕಾರಿಗಳು ಜವಾಬ್ದಾರಿ ಮರೆತು ಕೆಲಸ ಮಾಡುತ್ತಿದ್ದಾರೆ. ಎಲ್ಲ ಅಡೆತಡೆಗಳನ್ನು ಸರಿಪಡಿಸಿ ಶೀಘ್ರದಲ್ಲಿ ಕೆಲಸ ಆರಂಭವಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವತಿ, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಝುಲ್ಫಿಕರ್ ಫೆವರಿಚ್ ಇಬ್ಬರು ಫ್ರಾ ಫ್ರೈವೆಟ್ ನ ಅಧಿಕಾರಿಗಳು ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here