ಮೈಸೂರು:
ಪ್ರಾಣಿ- ಪಕ್ಷಿಗಳ ” ಬಗ್ಗೆ ಸದಾ ವಿಶೇಷ ಮಮತೆ ತೋರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಇಂದು ಮಾನವೀಯ ಕೆಲಸಕ್ಕೆ ಸಾಕ್ಷಿಯಾಗಿದ್ದಾರೆ.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ಪ್ರಾಣಿ ಗ್ರಹಾಲಯದಲ್ಲ’ಹುಲಿ’ ಯನ್ನು ಸಚಿವ ನಿರಾಣಿ ಅವರು ದತ್ತು ಪಡೆಯುವುದಾಗಿ ಇಂದಿಲ್ಲಿ ಪ್ರಕಟಿಸಿದರು.
ಅಧಿಕೃತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಅವರು ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ ವೇಳೆ ತಮ್ಮ ಮೊಮ್ಮಗ ‘ಸಮಥ್೯ ವಿಜಯ್ ನಿರಾಣಿ’ ಹೆಸರಿನಲ್ಲಿ ಹುಲಿಯನ್ನು ದತ್ತು ಪಡೆದರು.
ದತ್ತು ಪಡೆಯಲು ಬೇಕಾಗಿದ್ದ ನಿಯಮಗಳನ್ನು ಸ್ಥಳದಲ್ಲಿದ್ದ ಮೃಗಾಲಯದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಬಳಿಕ ದತ್ತು ಪಡೆಯುವ ನಿರ್ಧಾರವನ್ನು ಘೋಷಿಸಿದರು.
ಇಲ್ಲಿನ ಮೃಗಾಲಯಕ್ಕೆ ಬರುವ ಪ್ರಾಣಿ ಪ್ರಿಯರು ದತ್ತು ಪಡೆಯುತ್ತಾರೆ.