Home ಬೆಂಗಳೂರು ನಗರ ಕರ್ನಾಟಕದ ರೇನ್‌ಬೋ ಎಫ್‌ಎಂ 101.3 ಎಂಬ ಪ್ರಾದೇಶಿಕ ವಾಹಿನಿಗಳ ಬಂದ್ ಮಾಡದಂತೆ ಕೇಂದ್ರಕ್ಕೆ ಸಚಿವ ಶಿವರಾಜ್...

ಕರ್ನಾಟಕದ ರೇನ್‌ಬೋ ಎಫ್‌ಎಂ 101.3 ಎಂಬ ಪ್ರಾದೇಶಿಕ ವಾಹಿನಿಗಳ ಬಂದ್ ಮಾಡದಂತೆ ಕೇಂದ್ರಕ್ಕೆ ಸಚಿವ ಶಿವರಾಜ್ ತಂಗಡಗಿ ಮನವಿ

23
0
Minister Shivraj Tangadagi appeals to Center not to shut Karnataka's Rainbow FM 101.3
Minister Shivraj Tangadagi appeals to Center not to shut Karnataka's Rainbow FM 101.3
Advertisement
bengaluru

ಬೆಂಗಳೂರು:

ಪ್ರಾದೇಶಿಕ ವಾಹಿನಿಗಳ ಬಂದ್ ಮಾಡದಂತೆ ಕೇಂದ್ರ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್ ತಂಗಡಗಿ ಅವರು ಶುಕ್ರವಾರ ಮನವಿ ಮಾಡಿಕೊಂಡಿದ್ದಾರೆ.

ಈ ಸಂಬಂಧ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಶಿವರಾಜ್ ತಂಗಡಗಿ ಅವರು ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಕೇಂದ್ರ ಸರ್ಕಾರವು ಪ್ರಸಾರ ಭಾರತಿ ಮೂಲಕ ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುತ್ತಿದೆ, ಇದರಲ್ಲಿ ಪ್ರಧಾನ ಮಂತ್ರಿಗಳ ಮನ್ ಕಿ ಬಾತ್ ಕೂಡ ಸೇರಿದೆ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಧ್ವನಿಮುದ್ರಿತ ಆವೃತ್ತಿಗಳನ್ನು ಪ್ರಸಾರ ಮಾಡಲಾಗುತ್ತಿದೆ.

bengaluru bengaluru

ಬಿಜೆಪಿ ಸರ್ಕಾರದ ರಾಜಕೀಯ ಆಕಾಂಕ್ಷೆಗಳನ್ನೂ ಇವುಗಳ ಮೂಲಕವೇ ಈಡೇರಿಸಿಕೊಳ್ಳಲಾಗುತ್ತಿದೆ. ಎಲ್ಲವೂ ಗೊತ್ತಿದ್ದರೂ, ಅವುಗಳನ್ನು ಪರೋಕ್ಷವಾಗಿ ಒಪ್ಪಿಕೊಳ್ಳುವ ಬೆಳವಣಿಗೆಗಳು ಕಂಡು ಬಂದಿದೆ. ಕರ್ನಾಟಕದ ರೇನ್‌ಬೋ ಎಫ್‌ಎಂ 101.3 ಎಂಬ ಪ್ರಾದೇಶಿಕ ಚಾನೆಲ್ ಅನ್ನು ಲಕ್ಷಗಟ್ಟಲೆ ಜನರು ಕೇಳುತ್ತಿದ್ದು, ಈ ಪ್ರಾದೇಶಿಕ ವಾಹಿನಿಯನ್ನು ಬಂದ್ ಮಾಡಲು ಚಿಂತನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಈ ವಾಹಿನಿಯು ಕನ್ನಡಿಗರಿಗೆ ಅದರಲ್ಲೂ ಮುಖ್ಯವಾಗಿ ವಾಹಿನಿಯೊಂದಿಗೆ ಭಾವನಾತ್ಮಕ ಸಂಬಂಧ ಸಂಬಂಧ ಬೆಳಸಿಕೊಂಡವರಿಗೆ ಆಘಾತವನ್ನುಂಟು ಮಾಡಿದೆ.

ಈ ವಾಹಿನಿಯು ಕರ್ನಾಟಕದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ 30 ಲಕ್ಷಕ್ಕೂ ಹೆಚ್ಚು ಕೇಳುಗರನ್ನು ಹೊಂದಿದೆ. ಪ್ರಾದೇಶಿಕ ವಾಹಿನಿಯನ್ನು ಹೊರತುಪಡಿಸಿ, ಹಿಂದಿ ವಾಹಿನಿಗಳನ್ನು ಅತಿಯಾಗಿ ಪ್ರಚಾರ ಮಾಡುವುದು ನೋವುಂಟು ಮಾಡುತ್ತದೆ. ಹೀಗಾಗಿ ಪ್ರಾದೇಶಿಕ ವಾಹಿನಿಗಳ ಬಂದ್ ಮಾಡಬಾರದು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.


bengaluru

LEAVE A REPLY

Please enter your comment!
Please enter your name here