Home ಕರ್ನಾಟಕ ಸೋಮವಾರದಿಂದ ಶಬರಿಮಲೆಗೆ ಹೆಚ್ಚು ಭಕ್ತರಿಗೆ ಅವಕಾಶ

ಸೋಮವಾರದಿಂದ ಶಬರಿಮಲೆಗೆ ಹೆಚ್ಚು ಭಕ್ತರಿಗೆ ಅವಕಾಶ

60
0

ಕೊಟ್ಟಾಯಂ:

ಶಬರಿಮಲೆ ದೇಗುಲಕ್ಕೆ ಈಗ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡಬಹುದಾಗಿದೆ.

ಸದ್ಯ ದೇಗುಲಕ್ಕೆ 1 ಸಾವಿರ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅದನ್ನು 2000ಕ್ಕೆ ಹೆಚ್ಚಿಸಲಾಗಿದೆ. ವಾರಾಂತ್ಯದಲ್ಲಿ ಅದನ್ನು 2000ರಿಂದ 3000ಕ್ಕೆ ಏರಿಸಲಾಗಿದೆ.

ಭಾನುವಾರ ಮುಖ್ಯ ಕಾರ್ಯದರ್ಶಿಯೊಂದಿಗೆ ನಡೆದ ಸಭೆಯ ನಂತರ ತ್ರಾವಂಕೂರ್‌ ದೇವಸ್ತಾನಂ ಮಂಡಳಿ ಅಧ್ಯಕ್ಷ ಎನ್‌ ವಾಸು ಈ ವಿಷಯ ತಿಳಿಸಿದ್ದಾರೆ.

ಶಬರಿಮಲದ ದರ್ಶನ ಆರಂಭಗೊಂಡ 12 ದಿನಗಳಲ್ಲಿ 13,529 ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಕಳೆದ ವರ್ಷ 48 ಕೋಟಿ ರೂ. ಆದಾಯ ಗಳಿಸಿದ್ದ ದೇಗುಲ ಈ ವರ್ಷ ಕೇವಲ 2 ಕೋಟಿ ರೂ. ಗಳಿಸಿದೆ.

LEAVE A REPLY

Please enter your comment!
Please enter your name here