Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM 1 minute read
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು

ಬೆಂಗಳೂರಿನ ಕನ್ನಡ ಭವನದಲ್ಲಿ ಬುಧವಾರ ನಡೆದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026ರಲ್ಲಿ ಭಾಗವಹಿಸುತ್ತಿರುವ ಮಕ್ಕಳು ಗಣ್ಯರೊಂದಿಗೆ ವೇದಿಕೆಯಲ್ಲಿ. ಚಿತ್ರ: ವಾರ್ತಾ ಇಲಾಖೆ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಕಲೆ ಮತ್ತು ಸಂಸ್ಕೃತಿಯ ಶಕ್ತಿಯನ್ನು ಹೊಂದಿರುವ ರಾಯಭಾರಿಗಳಾಗಿ ಮಕ್ಕಳು ಈ ನೆಲದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪಸರಿಸುತ್ತಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಕೆ.ಎಂ. ವಸುಂಧರಾ ಬುಧವಾರ ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026ಕ್ಕೆ ಚಾಲನೆ ನೀಡಿ ಹೇಳಿದರು.

ಜೆ.ಸಿ. ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನೀವು ಈ ನೆಲದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಉಳಿಸಿ ಬೆಳೆಸುತ್ತಿದ್ದೀರಿ ಹಾಗೂ ಕಲೆಯ ರಾಯಭಾರಿಗಳಾಗಿ ಕಂಗೊಳಿಸುತ್ತಿದ್ದೀರಿ. ಇದು ಮಕ್ಕಳಲ್ಲಿ ನಿರಂತರವಾಗಿ ಪ್ರಜ್ವಲಿಸಬೇಕು ಎಂದರು.

ಕಲೋತ್ಸವವನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟದಲ್ಲಿ ಮೂರು ಹಂತಗಳಲ್ಲಿ ಆಯೋಜಿಸಲಾಗುತ್ತಿದೆ. 8ರಿಂದ 14 ವರ್ಷದೊಳಗಿನ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಕಲಾಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಕಲ್ಪಿಸುವುದು ಇದರ ಉದ್ದೇಶ ಎಂದು ವಸುಂಧರಾ ತಿಳಿಸಿದರು.

ಈಗಾಗಲೇ ರಾಜ್ಯದ 31 ಜಿಲ್ಲೆಗಳಲ್ಲಿ ಕಲೋತ್ಸವ ಆರಂಭವಾಗಿದ್ದು, ಮಕ್ಕಳು ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಮುಂದಿನ ಹಂತಕ್ಕೆ ಆಯ್ಕೆಯಾಗದಿದ್ದರೆ ಸ್ಪರ್ಧಿಗಳು ನಿರಾಶರಾಗಬಾರದು; ತೀರ್ಪುಗಾರರು ನಿಗದಿತ ಮಾನದಂಡಗಳ ಆಧಾರದ ಮೇಲೆ ಪ್ರತಿಭಾವಂತರನ್ನು ಆಯ್ಕೆ ಮಾಡುತ್ತಾರೆ. ಇದೇ ಕೊನೆಯ ಅವಕಾಶವಲ್ಲ; ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳಿಗೆ ಸರ್ಕಾರದ ಬೆಂಬಲವಿದೆ, ಪೋಷಕರೂ ಅವರ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಅವರು ಹೇಳಿದರು.

ಕಲಾಪ್ರತಿಭೋತ್ಸವದಲ್ಲಿ ಶಾಸ್ತ್ರೀಯ ನೃತ್ಯ, ಚಿತ್ರಕಲೆ, ಜನಪದ ಗೀತೆ, ಸುಗಮ ಸಂಗೀತ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ 150ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಲಿದ್ದಾರೆ ಎಂದು ವಸುಂಧರಾ ತಿಳಿಸಿದರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶುಭ ಧನಂಜಯ್ ಮಾತನಾಡಿ, ಸಂಗೀತ, ಲಲಿತಕಲೆ, ನೃತ್ಯ ಸೇರಿದಂತೆ ಎಲ್ಲ ಕಲಾಪ್ರಕಾರಗಳಿಗೂ ತನ್ನದೇ ಆದ ಮಹತ್ವವಿದೆ. ಭಾರತದ ಸಾಂಸ್ಕೃತಿಕ ಪರಂಪರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ವಿದೇಶಿಯರೂ ನಮ್ಮ ಗುರು-ಶಿಷ್ಯ ಪರಂಪರೆಯ ಮೂಲಕ ಕಲೆಯನ್ನು ಕಲಿತು ತಮ್ಮದೇ ಆದ ರೀತಿಯಲ್ಲಿ ಪ್ರಚುರಪಡಿಸುತ್ತಿದ್ದಾರೆ. ನಮ್ಮ ಕಲೆಗಳ ಮೌಲ್ಯ ಹಾಗೂ ಶಾಸ್ತ್ರೀಯ ಪರಂಪರೆಯ ಮಹತ್ವವನ್ನು ಅರಿತುಕೊಳ್ಳಬೇಕು. ಶಾಸ್ತ್ರಬದ್ಧ ಕಲೆಗೆ ನಿಜವಾದ ಗೌರವ ಮತ್ತು ಮನ್ನಣೆ ದೊರೆಯುತ್ತದೆ. ಕಲಾಪ್ರತಿಭೋತ್ಸವ ಮಕ್ಕಳಿಗೆ ಕಲೆಯ ಬಗ್ಗೆ ಉತ್ತಮ ಮಾರ್ಗದರ್ಶನ ನೀಡುವ ವೇದಿಕೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಆರ್., ಕಲಾಸ್ಪರ್ಧಿಗಳು, ತೀರ್ಪುಗಾರರು ಹಾಗೂ ಪೋಷಕರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ

Related Stories

ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

The Bengaluru Live November 18, 2026 9:29 PM
ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

The Bengaluru Live November 18, 2026 9:08 PM
ಮೈಕ್‌ಗಳ ಮುಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಬೆಂಬಲಿಗರು
  • ಬೆಂಗಳೂರು ನಗರ

ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್

The Bengaluru Live November 18, 2026 8:54 PM

Latest Post

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

November 18, 2026 11:11 PM
ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಹಿನ್ನೆಲೆ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಶಸ್ತಿ ವಿಜೇತರು ಮತ್ತು ಗಣ್ಯರು
  • ಕರ್ನಾಟಕ

ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ

November 18, 2026 9:47 PM
ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ ಮರದ ಫಲಕಗಳ ಕೊಠಡಿಯಲ್ಲಿ ಸೋಫಾದ ಮೇಲೆ ಕುಳಿತಿರುವ ಕೇಸರಿ ವಸ್ತ್ರಧಾರಿ ಸ್ವಾಮೀಜಿ ಮತ್ತು ಇಬ್ಬದಿಯಲ್ಲಿ ನಿಂತಿರುವ ಪುರುಷರ ಗುಂಪು
  • ಕರ್ನಾಟಕ

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ

November 18, 2026 9:36 PM
ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

November 18, 2026 9:29 PM
ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್ ಬೆಂಗಳೂರು ಟೆಕ್ ಸಮಿಟ್ ಹಿನ್ನೆಲೆ ಫಲಕಗಳ ಮುಂದೆ ವೇದಿಕೆಯಲ್ಲಿ ಸಾಲಾಗಿ ನಿಂತು ನೀಲಿ ವರದಿ ಪ್ರತಿಗಳನ್ನು ಹಿಡಿದಿರುವ ಎಂಟು ಮಂದಿ
  • ಬೆಂಗಳೂರು ನಗರ

ಬೆಂಗಳೂರು ಇನ್ನೋವೇಶನ್ ವರದಿ 2026: ದೇಶದ ಸ್ಥಳೀಯ ಎಐ ಸ್ಟಾರ್ಟ್‌ಅಪ್ ಹೂಡಿಕೆಯ ಶೇ.36.3 ಬೆಂಗಳೂರಿಗೆ; $211 ಶತಕೋಟಿ ಮೌಲ್ಯದ 57 ಯೂನಿಕಾರ್ನ್

November 18, 2026 9:08 PM
ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್ ಮೈಕ್‌ಗಳ ಮುಂದೆ ಮಾಧ್ಯಮದವರೊಂದಿಗೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಹಿಂದೆ ಬೆಂಬಲಿಗರು
  • ಬೆಂಗಳೂರು ನಗರ

ವಿಮಾನ ನಿಲ್ದಾಣ ರಸ್ತೆಗೆ ಹೆಬ್ಬಾಳ ಮಾದರಿಯ ಹೊಸ ಫ್ಲೈಓವರ್ ಚಿಂತನೆ: ಐಒಸಿ ಜಂಕ್ಷನ್ ರೋಟರಿ ಮೇಲ್ಸೇತುವೆಗೆ ಶಂಕುಸ್ಥಾಪನೆ ನೆರವೇರಿಸಿ ಸಿಎಂ ಶಿವಕುಮಾರ್

November 18, 2026 8:54 PM

ನೀವು ತಪ್ಪಿಸಿಕೊಂಡಿರಬಹುದು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಮಾಣಪತ್ರ ಹಿಡಿದ ಮಕ್ಕಳು ಮತ್ತು ಗಣ್ಯರು
  • ಬೆಂಗಳೂರು ನಗರ

ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ

The Bengaluru Live November 18, 2026 11:11 PM
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿ ಮೇಳ ಹಿನ್ನೆಲೆ ಫಲಕದ ಮುಂದೆ ವೇದಿಕೆಯ ಮೇಲೆ ಪ್ರಶಸ್ತಿ ವಿಜೇತರು ಮತ್ತು ಗಣ್ಯರು
  • ಕರ್ನಾಟಕ

ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ

The Bengaluru Live November 18, 2026 9:47 PM
ಮರದ ಫಲಕಗಳ ಕೊಠಡಿಯಲ್ಲಿ ಸೋಫಾದ ಮೇಲೆ ಕುಳಿತಿರುವ ಕೇಸರಿ ವಸ್ತ್ರಧಾರಿ ಸ್ವಾಮೀಜಿ ಮತ್ತು ಇಬ್ಬದಿಯಲ್ಲಿ ನಿಂತಿರುವ ಪುರುಷರ ಗುಂಪು
  • ಕರ್ನಾಟಕ

ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ

The Bengaluru Live November 18, 2026 9:36 PM
ಬೆಂಗಳೂರು ಉತ್ತರ ನಗರ ಪಾಲಿಕೆಯ ಫೋನ್-ಇನ್ ಕಾರ್ಯಕ್ರಮದಲ್ಲಿ ಲ್ಯಾಂಡ್‌ಲೈನ್ ಫೋನ್ ಮತ್ತು ಕಡತಗಳೊಂದಿಗೆ ಸಭಾ ಮೇಜಿನ ಸುತ್ತ ಕುಳಿತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು

The Bengaluru Live November 18, 2026 9:29 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬೆಂಗಳೂರು ನಗರ ಜಿಲ್ಲಾ ಮಟ್ಟದ ಕಲಾಪ್ರತಿಭೋತ್ಸವ-2026: 150ಕ್ಕೂ ಹೆಚ್ಚು ಮಕ್ಕಳಿಂದ ಕಲಾ ಪ್ರದರ್ಶನ
  • ಜಿಕೆವಿಕೆ ಕೃಷಿ ಮೇಳ ಸಮಾರೋಪ: ಕೇಂದ್ರ ಯೋಜನೆ ಬಳಸಿಕೊಳ್ಳಿ, ಬೆಳೆ ವಿಮೆ ಮಾಡಿಸಿ ಎಂದು ರೈತರಿಗೆ ಸಂಸದ ಸುಧಾಕರ್ ಸಲಹೆ
  • ಜ.3ರಿಂದ ಎಲ್ಲ ಜಿಲ್ಲೆಗಳಲ್ಲಿ ವಚನ ಪಿತಾಮಹ ಫ.ಗು. ಹಳಕಟ್ಟಿ ಜೀವನ-ಸಾಧನೆ ಅಭಿಯಾನ: ಎಂ.ಬಿ. ಪಾಟೀಲ
  • ಬೆಂಗಳೂರು ಉತ್ತರ ನಗರ ಪಾಲಿಕೆ: ಪ್ರತಿ ಶುಕ್ರವಾರ ಆಯುಕ್ತರೊಂದಿಗೆ ಫೋನ್-ಇನ್; ಮೊದಲ ಕಾರ್ಯಕ್ರಮ ನವೆಂಬರ್ 20ರಂದು
©Copyright 2025 The Bengaluru Live All rights reserved. | MoreNews by AF themes.