Home ಅಪರಾಧ ಅಗ್ನಿ ಅವಘಡ: ಅಮೆರಿಕದಿಂದ ಬಂದ 24 ಗಂಟೆಗಳಲ್ಲೇ ತಾಯಿ- ಮಗಳು ಸಜೀವ ದಹನ

ಅಗ್ನಿ ಅವಘಡ: ಅಮೆರಿಕದಿಂದ ಬಂದ 24 ಗಂಟೆಗಳಲ್ಲೇ ತಾಯಿ- ಮಗಳು ಸಜೀವ ದಹನ

77
0
Mother, daughter died in Major Fire after returing from US within 24 hours in Bengaluru
bengaluru

ಬೆಂಗಳೂರು:

ನಗರದ ದೇವರಚಿಕ್ಕನಹಳ್ಳಿ ಬಳಿಯ ಆಶ್ರೀತ ಅಪಾರ್ಟ್ಮೆಂಟ್​ನಲ್ಲಿ ಸಂಭವಿಸಿದ​ ಅಗ್ನಿ ಅವಘಡದಲ್ಲಿ ತಾಯಿ-ಮಗಳು ಸಜೀವದಹನ ಆಗಿದ್ದಾರೆ. ನಿನ್ನೆಯಷ್ಟೇ ಅಮೆರಿಕದಿಂದ ಕುಟುಂಬಸ್ಥರು ಆಗಮಿಸಿದ್ದರು. ಅದಾಗ್ಯೂ ದುರಂತ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಈ ಇಬ್ಬರು ಮಾತ್ರ ಇದ್ದರು.

ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತ ದುರ್ದೈವಿಗಳು. ಮೂರನೇ ಮಹಡಿಯ 210ನೇ ಫ್ಲ್ಯಾಟ್‌ನಲ್ಲಿದ್ದ ನಿವಾಸಿಗಳು ಸಾವನ್ನಪ್ಪಿದ್ದಾರೆ.

ಘಟನಾ ಸ್ಥಳಕ್ಕೆ ಡಿಜಿಪಿ, (ಅಗ್ನಿಶಾಮಕ ಸೇವೆಗಳು) ಅಮರ್ ಕುಮಾರ್ ಪಾಂಡೆ, ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಹಾಗೂ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿಯಿ ಭೇಟಿ ನೀಡಿದರು. ಘಟನೆಗೆ ಇನ್ನೂ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

bengaluru

Also Read: Major fire claims two lives in Bengaluru’s Bommanahalli

bengaluru

LEAVE A REPLY

Please enter your comment!
Please enter your name here