Home Uncategorized Mouth Buddies: ಅಪರಿಚಿತರೊಂದಿಗೆ ಚುಂಬಿಸಲು ಚೀನಾದ ಹೊಸ ಡೇಟಿಂಗ್ ಟ್ರೆಂಡ್

Mouth Buddies: ಅಪರಿಚಿತರೊಂದಿಗೆ ಚುಂಬಿಸಲು ಚೀನಾದ ಹೊಸ ಡೇಟಿಂಗ್ ಟ್ರೆಂಡ್

45
0

ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ ಚೀನಾದಲ್ಲಿ ಹೊಸ ಡೇಟಿಂಗ್ ಟ್ರೆಂಡ್ ಬಹಳ ಸುದ್ದಿಯಾಗುತ್ತಿದೆ. ಇದರಲ್ಲಿ ಜನರು ಅನಾಮಧೇಯ ಚುಂಬನಗಳಿಗಾಗಿ ಆನ್‌ಲೈನ್‌ನಲ್ಲಿ ಅಪರಿಚಿತರನ್ನು ಭೇಟಿಯಾಗುತ್ತಾರೆ. ಇದನ್ನು ಮ್ಯಾಂಡರಿನ್‌ನಲ್ಲಿ ‘ಝಯಿ ಯು’ ಎಂದು ಕರೆಯಲಾಗುತ್ತದೆ . ಅಂದರೆ ಇಂಗ್ಲೀಷ್‌ನಲ್ಲಿ ಇದನ್ನು ಮೌತ್ ಬಡ್ಡೀಸ್ ಎಂದು ಕರೆಯಲಾಗುತ್ತದೆ. ಈ ಒಂದು ಟ್ರೆಂಡ್ ಚೀನಾದಲ್ಲಿ ಸಾಮಾಜಿಕ ಬಳಕೆದಾರರನ್ನು ಪ್ರೇರೇಪಿಸಿದೆ. ಇದು ಕೋವಿಡ್ ಪ್ರಕರಣಗಳಲ್ಲಿ ಪುನರುತ್ಥಾನವನ್ನು ಕಂಡಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಟ್ರೆಂಡ್‌ನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವಂತಹ ಯುವಜನರಿಗೆ ಸಲಹೆಯನ್ನು ನೀಡಿದ್ದಾರೆ.

ನಿಯಮಗಳ ಪ್ರಕಾರ ‘ಮೌತ್ ಬಡ್ಡೀಸ್’ ಕೇವಲ ಚುಂಬನಕ್ಕಾಗಿ ಮಾತ್ರ. ಇದರಲ್ಲಿ ಯಾವುದೇ ಸಂಬಂಧ ಅಥವಾ ಲೈಂಗಿಕತೆಯ ವಿಚಾರಗಳು ಇರುವುದಿಲ್ಲ ಹಾಗೂ ಅನಾಮಧೇಯ ಲಿಪ್ ಲಾಕಿಂಗ್ ಬಳಿಕ ಹೆಚ್ಚಿನ ಜನ ಅಪರಿಚಿತರನ್ನು ಭೇಟಿಯಾಗಲಿಲ್ಲ ಎಂದು ಎಸ್.ಸಿ.ಎಂ.ಪಿ ವರದಿ ತಿಳಿಸಿದೆ.
ವಾಸ್ತವವಾಗಿ ಒಬ್ಬರನ್ನೊಬ್ಬರು ಚುಂಬಿಸಿದ ಬಳಿಕ ಕೆಲವರು ನನಗೆ ಚುಂಬಿಸಿದ ವ್ಯಕ್ತಿ ಯಾರೆಂದು ಗೊತ್ತು. ಆದರೆ ನಾವು ಪ್ರೇಮಿಗಳಾಗಿಲ್ಲ. ಆದ್ದರಿಂದ ಕಿಸ್ಸಿಂಗ್ ಸಾಮಾನ್ಯವಾಗಿದೆ ಅದು ದೊಡ್ಡ ವಿಷಯವಲ್ಲ ಹಾಗೂ ಪ್ರಸ್ತುತತೆಯನ್ನು ಆನಂದಿಸುವುದು ನನಗೆ ಮುಖ್ಯವಾದ ವಿಷಯ. ಹಾಗಾಗಿ ಕಿಸ್ ಮಾಡುವ ವ್ಯಕ್ತಿಯೊಂದಿಗೆ, ನಾನು ಪ್ರೀತಿ ಮಾಡುವ ಜೀವವನ್ನೇ ಚುಂಬಿಸುತ್ತಿದ್ದೇನೆ ಎನ್ನುವ ಭಾವ ಮೂಡುತ್ತದೆ ಎಂದು ಗುವಾನ್ ಲೀ ಎಂಬ ವಿದ್ಯಾರ್ಥಿ ಹೇಳಿದ್ದಾನೆ ಎಂದು ಔಟ್‌ಲೆಟ್ ಪೇಪರ್‌ನಲ್ಲಿ ಉಲ್ಲೇಖಿಸಲಾಗಿದೆ.

ಆರ್ಟ್ಸ್ ವಿಧ್ಯಾರ್ಥಿನಿಯೊಬ್ಬಳು ನಾನು ಪ್ರಬಂಧ ಪತ್ರಿಕೆಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಸಂಬಂಧವನ್ನು ಶುರು ಮಾಡಲು ಬೇಕಾದ ಸ್ವಲ್ಪ ಸಮಯ ಸಿಕ್ಕಿತು ಹಾಗಾಗಿ ಮೌತ್ ಬಡ್ಡೀಸ್ ಟ್ರೆಂಡ್‌ನ್ನು ಪ್ರಯತ್ನಿಸಿದೆ ಎಂದು ಹೇಳಿದ್ದಾಳೆ. ಎಸ್.ಸಿ.ಎಂ.ಪಿ ಸಂಪರ್ಕ ಮಾಡಿದ ಚೆಂಗ್ ಪೆಂಗ್ ಎಂಬ ಹೆಸರಿನ ಇನ್ನೊಬ್ಬ ವಿಧ್ಯಾರ್ಥಿ ‘ ಚುಂಬನವು ದೈಹಿಕವಾಗಿ ಮತ್ತು ಮಾನಸಿಕವಾಗಿ ಜನರನ್ನು ಸಾಂತ್ವನಗೊಳಿಸುತ್ತದೆ. ಮತ್ತು ಇದು ಲೈಂಗಿಕ ಸಂಬಂಧಕ್ಕಿಂತ ಕಡಿಮೆ ಸಂಕೀರ್ಣವಾಗಿದೆ’ ಎಂದು ಹೇಳಿದ್ದಾನೆ.

ಇದನ್ನು ಓದಿ:ಪ್ರೀತಿಪಾತ್ರರ ಜತೆಗಿನ ಸಂಬಂಧ ಕಳೆದುಕೊಳ್ಳುವ ಆತಂಕ ಇದೆಯೇ? ತಪ್ಪು ಯೋಚನೆಗೆ ಇರಲಿ ಒಂದು ಪೂರ್ಣವಿರಾಮ

ವೈಬೋ ಬಳಕೆದಾರರು ಮೌತ್ ಬಡ್ಡೀಸ್ ಟ್ರೆಂಡ್‌ನ್ನು ಪ್ರಯತ್ನಿಸಲು ಬಯಸುವ ಜನರಿಗೆ ಸಲಹೆಯನ್ನು ನೀಡಿದರು. ಅವರಲ್ಲಿ ಒಬ್ಬರು ಜಾಂಗ್ ಎಂಬ ಹೆಸರಿನ ಮಹಿಳೆ. ಇವರು ಬೀಜಿಂಗ್‌ನ ಸಿನೆಮಾ ಹಾಲ್‌ನಲ್ಲಿ ಭೇಟಿಯಾದ ಪುರಷನ್ನು ಚುಂಬಿಸಿದ್ದೇನೆ ಎಂದು ಹೇಳಿದರು. ಅದಕ್ಕೆ ಕೆಲವೊಂದು ಬಳಕೆದಾರರು ಬಾರ್, ಕಾಲುದಾರಿ ಅಥವಾ ವ್ಯಕ್ತಿಯ ಮನೆ ಇಂತಹ ಸ್ಥಳಗಳಲ್ಲಿ ಚುಂಬಿಸಲು ಒಪ್ಪಿಕೊಳ್ಳಬೇಡಿ ಎಂದು ಸಲಹೆ ನೀಡಿದ್ದಾರೆ ಹಾಗೂ ಜಾಂಗ್ ಎಂಬ ಹೆಸರಿನ ವ್ಯಕ್ತಿ ‘ ಚುಂಬನವು ಆರೋಗ್ಯಕ್ಕೆ ಅಪಾಯವನ್ನು ತರಬಹುದು. ಇದು ಅಪಾಯಕಾರಿ ಬ್ಯಾಕ್ಟೀರಿಯಾ ಸೇರಿದಂತೆ ಲಕ್ಷಾಂತರ ಸೂಕ್ಷ್ಮ ಜೀವಿಗಳನ್ನು ಹರಡುತ್ತವೆ. ಆದ್ದರಿಂದ ನೀವು ಕಾಳಜಿಯನ್ನು ಹೊಂದಿದ್ದರೆ, ಆರೋಗ್ಯ ತಪಾಸಣೆಯ ವರದಿಯನ್ನು ತೋರಿಸಲು ನಿಮ್ಮ ಸಂಭಾವ್ಯ ಚುಂಬನ ಸಂಗಾತಿಯನ್ನು ನೀವು ಕೇಳಬಹುದು ಎಂಬ ಸಲಹೆ ನೀಡಿದ್ದಾರೆ ಎಂದು ಎಸ್.ಸಿ.ಎಂ.ಪಿ ವರದಿ ಹೇಳಿದೆ.

ಜೀವನ ಶೈಲಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here