ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮುಡಾ ಸೈಟ್ ಹಗರಣದ ಆರೋಪದಲ್ಲಿ ಈಗ ಮತ್ತೊಂದು ಸಂಕಷ್ಟ ಶುರುವಾಗಿದೆ. ರಾಜ್ಯಪಾಲರ ಶೋಕಾಸ್ ನೋಟೀಸ್ ಗೆ ಇನ್ನೂ ಸುಧಾರಿಸಿಕೊಳ್ಳುತ್ತಿರೋ ಸಿಎಂಗೆ ಸಾಮಾಜಿಕ ಕಾರ್ಯಕರ್ತ ಕೋರ್ಟ್ ಮೆಟ್ಟಿಲೇರಿ ಮತ್ತೊಂದು ಶಾಕ್ ಕೊಟ್ಟಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.ನೀಟ್ & ಕ್ಲೀನ್ ಎನ್ನಿಸಿಕೊಳ್ಳುತ್ತಿದ್ದ ಸಿಎಂ ಸಿದ್ದರಾಮಯ್ಯ ಈಗ ಗಂಭೀರ ಆರೋಪಗಳನ್ನು ಎದುರಿಸುವ ಸ್ಥಿತಿ ಬಂದಿದೆ. ಮೈಸೂರಿನಲ್ಲಿ ಮೂಡಾದವರು ಸಿಎಂ ಪತ್ನಿಗೆ ಅಕ್ರಮವಾಗಿ 14 ಸೈಟ್ ನೀಡಿದ್ದಾರೆ ಎಂದು ಟಿ ಜೆ ಅಬ್ರಹಾಂ ರಾಜ್ಯಪಾಲರಿಗೆ ದೂರು ನೀಡಿ ಸಿಎಂ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಬೇಕೆಂದು ಮನವಿ ಮಾಡಿದ್ರು. ಈ ಹಿನ್ನಲ್ಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲ್ಲೋಟ್ ಸಿಎಂ ಗೆ ಶೋಕಾಸ್ ನೋಟೀಸ್ ಅನ್ನು ನೀಡಿದ್ರು. ಈ ಮಧ್ಯ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಎನ್ನುವವರು ರಾಜ್ಯಪಾಲರಿಗೆ ಮತ್ತೊಂದು ದೂರನ್ನು ನೀಡಿದ್ರು. ರಾಜಭವನದಿಂದ ಯಾವುದೇ ಉತ್ತರ ಬರದ ಕಾರಣ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಗುರುವಾರ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ , ನಿಂಗಾ ಮತ್ತು ಇನ್ನಿತರರ ವಿರುದ್ಧ ಖಾಸಗೀ ದೂರು ದಾಖಲು ಮಾಡಿದ್ದಾರೆ. ಈ ಕೇಸ್ನ್ನು ವಿಚಾರಣೆಗೆ ಸ್ವೀಕರಿಸಬಹುದೇ ಎಂದು ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.
ಇನ್ನು 300 ಪುಟಗಳ ದೂರು ನೀಡಿರುವ ಸ್ನೇಹಮಯಿ ಕೃಷ್ಣ , ಸಿಎಂ ಪತ್ನಿ ಪಾರ್ವತಿ ಅವರು ಅಕ್ರಮವಾಗಿ ಸೈಟ್ ಗಳು ಮಂಜೂರು ಮಾಡಿಸಿಕೊಂಡಿರುವುದಕ್ಕೆ ಪುಷ್ಟಿ ನೀಡುವ ಸಾಕಷ್ಟು ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಿರೋದಾಗಿ ದೂರುದಾರ ತಿಳಿಸಿದ್ದಾರೆ. ಕೃಷಿ ಭೂಮಿ ಅಂತ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸ್ರಿಗೆ ಸುಳ್ಳು ದಾಖಲಾತಿ ಸೃಷ್ಟಿ ಮಾಡಿ ತಮ್ಮ ಹೆಸ್ರಿಗೆ ಪಡೆದಿದ್ದಾರೆ. ಮೂಡಾದಿಂದ ಹದಿನಾಲ್ಕು ನಿವೇಶನಗಳನ್ನ ಪಡೆದಿದ್ದಾರೆ . ಇದಕ್ಕೆ ಸಿಎಂ ಸಿದ್ದಾರಾಮಯ್ಯ ತಮ್ಮ ಪ್ರಭಾವವನ್ನು ಬಳಸಿ ಅಕ್ರಮ ಸಗಲು ನೆರವಾಗಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.
ಇನ್ನು ತಮ್ಮ ವಿರುದ್ದ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿರೋ ಸಿಎಂ ಸಿದ್ದರಾಮಯ್ಯ ಇಂತಹಃ ದೂರುಗಳಿಗೆಲ್ಲ ನಾವು ಹೆದರುವುದಿಲ್ಲ.ಇದಕ್ಕೆ ತಕ್ಕ ಉತ್ತರ ಕೊಡುತ್ತೇವೆ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸಿಎಂ ಸಿದ್ದಾರಾಮಯ್ಯಗೆ ಮುಡಾ ಮುಳ್ಳು ಪ್ರತಿದಿನ ಚುಚ್ಚುವಂತಾಗಿದ್ದು ಸಿಎಂ ವಿರುದ್ಧ ಅರ್ಜಿ ಇಂದು ಕೋರ್ಟ್ ಏನಾಗುತ್ತೋ ಅನ್ನೋದು ಕಾದು ನೋಡಬೇಕಿದೆ.