Home Uncategorized Mumbai fire accident: ಆಸ್ಪತ್ರೆ ಪಕ್ಕದ ಕಟ್ಟಡದಲ್ಲಿ ಅಗ್ನಿ ಅವಘಡ, 1 ಸಾವು, 22 ಮಂದಿಗೆ...

Mumbai fire accident: ಆಸ್ಪತ್ರೆ ಪಕ್ಕದ ಕಟ್ಟಡದಲ್ಲಿ ಅಗ್ನಿ ಅವಘಡ, 1 ಸಾವು, 22 ಮಂದಿಗೆ ಗಾಯ

0
0
bengaluru

ಮುಂಬೈ : ಆಸ್ಪತ್ರೆಯೊಂದರ ಪಕ್ಕದ ಕಟ್ಟಡದಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದ ಬೆಂಕಿಯಲ್ಲಿ 46 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಯುವತಿಯರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಮುಂಬೈ (Mumbai)ಘಾಟ್‌ಕೋಪರ್‌ ನಗರದಲ್ಲಿ ನಡೆದಿದೆ. ಬೆಂಕಿಯ ಸಂಭವಿಸಿದ ಪ್ರದೇಶದಲ್ಲಿ ಮುಂಜಾಗ್ರತಾ ಕ್ರಮವಾಗಿ ಪಕ್ಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 22 ರೋಗಿಗಳನ್ನು ಮತ್ತೊಂದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಾಟ್‌ಕೋಪರ್ ಪೂರ್ವ ಪ್ರದೇಶದ ಆರು ಅಂತಸ್ತಿನ ‘ವಿಶ್ವಾಸ್’ ಕಟ್ಟಡದ ನೆಲ ಮಹಡಿಯಲ್ಲಿರುವ ಹೋಟೆಲ್‌ನ ವಿದ್ಯುತ್ ಮೀಟರ್ ಕೋಣೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಮುಂಬೈನ ಅಪಾರ್ಟ್​ಮೆಂಟ್​ನಲ್ಲಿ ಬೆಂಕಿ ಅವಘಡ; ಕಟ್ಟಡದಲ್ಲಿದ್ದ ಜನರ ಸ್ಥಳಾಂತರ

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಕಿಯಲ್ಲಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿ ರಾಜವಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.

bengaluru

#WATCH | Maharashtra: Fire breaks out near Parekh Hospital in Mumbai’s Ghatkopar. Eight fire tenders have reached the spot. Further details awaited: Mumbai Fire Brigade pic.twitter.com/iiKUAIGEAh

— ANI (@ANI) December 17, 2022

ಖುರೇಷಿ ದೇಧಿಯಾ ಎಂಬ ವ್ಯಕ್ತಿ ಈ ಬೆಂಕಿ ಅವಘಡದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಯಿತು, 18 ವರ್ಷದ ತನಿಯಾ ಕಾಂಬ್ಲೆ ಎಂಬ ಯುವತಿಗೆ ಸುಟ್ಟ ಗಾಯಗಳಾಗಿವೆ, ಮತ್ತು ಕುಲ್ಸುಮ್ ಶೇಖ್ (20) ಯುವತಿಗೆ ಬೆಂಕಿಯಿಂದಾಗಿ ಉಸಿರುಗಟ್ಟುವಿಕೆಯಿಂದ ಬಳಲುತ್ತಿದ್ದರು.

ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 22 ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ, ಬೆಂಕಿಯನ್ನು ನಂದಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

bengaluru

LEAVE A REPLY

Please enter your comment!
Please enter your name here