ಸಚಿವ ಮುನಿರತ್ನರವರ 70ಅಡಿ ಉದ್ದದ ಕಟೌಟ್
ರಾಜಕೀಯ ಮಾಡಲ್ಲ,ಜನರ ಸೇವೆ ಬಿಡಲ್ಲ
10ವರ್ಷದಲ್ಲಿ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿ-ಸಚಿವ ಮುನಿರತ್ನ
ಬೆಂಗಳೂರು:
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ,ಯಶವಂತಪುರ ವಾರ್ಡ್-37ರಲ್ಲಿ ಯಶವಂತಪುರ ರೈಲ್ವೆ ನಿಲ್ದಾಣ ಎದುರು ನೂತನವಾಗಿ ತೋಟಗಾರಿಕೆ ,ಯೋಜನೆ ಮತ್ತು ನಿರ್ವಹಣೆ ಹಾಗೂ ದತ್ತಾಂಶ ಸಚಿವರಾಗಿ ನೇಮಕರಾದ ಮುನಿರತ್ನರವರಿಗೆ ನಿಕಟಪೂರ್ವ ಬಿ.ಬಿ.ಎಂ.ಪಿ. ಸದಸ್ಯರಾದ ಜಿ.ಕೆ.ವೆಂಕಟೇಶ್ (ಎನ್.ಟಿ.ಆರ್)ರವರು ಯಶವಂತಪುರ ವಾರ್ಡ್ ಬಿ.ಜೆ.ಪಿ.ಕಾರ್ಯಕರ್ತರು ಅದ್ದೂರಿಯಾಗಿ 70ಅಡಿ ಉದ್ದದ ಕಟೌಟ್ ನಿಲ್ಲಿಸಿ ಸಚಿವ ಮುನಿರತ್ನರವರು ಕೈಯಲ್ಲಿ ಕೇಕ್ ಕತ್ತರಿಸಿ ,ಸಿಹಿ ತಿಂಡಿ ವಿತರಿಸಿದದರು.
ನಂತರ ಯಶವಂತಪುರ ವಾರ್ಡ್ ಬಿ.ಜೆ.ಪಿ.ಕಾರ್ಯಕರ್ತರಿಂದ ಅದ್ದೂರಿಯಾಗಿ ಸನ್ಮಾನಿಸಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವೇಲು ನಾಯಕರ್ ರವರು ಉಪಸ್ಥಿತರಿದ್ದರು.
ಸಚಿವರಾದ ಮುನಿರತ್ನ ರವರು ಮಾತನಾಡಿ ರಾಜರಾಜೇಶ್ವರಿಯ ಮತ್ತು ಮತದಾರರ ಆಶೀರ್ವಾದದ ಪುಣ್ಯದ ಫಲದಿಂದ 11ವರ್ಷಗಳ ಹಿಂದೆ ಮಹಾನಗರ ಪಾಲಿಕೆ ಸದಸ್ಯನಾಗಿ 3ಮೂರು ಬಾರಿ ಶಾಸಕನಾಗಿ ,ಇದೀಗ ಕರ್ನಾಟಕ ರಾಜ್ಯದ ಸಚಿವನಾಗಿ ಜನರ ಸೇವೆ ಮಾಡಲು ನೀವು ಆಶೀರ್ವಾದ ಮಾಡಿದ್ದೀರಿ.
ರಾಜಕೀಯ ಚುನಾವಣೆ ಬಂದಾಗ ಹತ್ತು ದಿನ ಮಾತ್ರ ಐದು ವರ್ಷ ಜನರ ಸೇವೆ ಮಾಡಬೇಕು ಇದು ನನ್ನ ಉದ್ದೇಶ, ನನ್ನ ಜೀವನದ ಗುರಿ.
50ವರ್ಷಗಳಿಂದ ರಾಜರಾಜೇಶ್ವರಿನಗರ ಅಭಿವೃದ್ದಿ ಕಾಣದೇ ಹೋಗಿತ್ತು .ಕಳೆದ ಹತ್ತು ವರ್ಷಗಳಲ್ಲಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರ ಶರವೇಗದಲ್ಲಿ ಅಭಿವೃದ್ದಿಯಾಗುತ್ತಿದೆ.
ಯಶವಂತಪುರ ವಾರ್ಡ್ ನನ್ನ ತವರು ಮನೆ ಇದ್ದಂತೆ
ಯಶವಂತಪುರ ವಾರ್ಡ್ ನಲ್ಲಿ ಕೊವಿಡ್ ಚಿಕಿತ್ಯೆಗಾಗಿ ಕೊವಿಡ್ ತುರ್ತು ಚಿಕಿತ್ಯೆ ಹೈಟೆಕ್ ಆಸ್ಪತ್ರೆ ಶೀಘ್ರದಲ್ಲಿ ಲೋಕರ್ಪಣೆಯಾಗಲಿದೆ ಮತ್ತು ಜೆ.ಪಿ.ಪಾರ್ಕ್ ವಾರ್ಡ್-17ರಲ್ಲಿ 2500ಸಾವಿರ ಮಕ್ಕಳಿಗೆ ಪ್ರವೇಶವಕಾಶ ಇರುವ ಅತ್ಯುತ್ತಮ ಶಾಲೆ , ಇದರಲ್ಲಿ ಆನ್ ಲೈನ್ ತರಗತಿಗೆ ಕಂಪ್ಯೂಟರ್ ಆಳವಡಿಸಲಾಗುವುದು.
ಅಭಿವೃದ್ದಿ ನಿರಂತರ ,ನಿಮ್ಮ ಜೊತೆಯಲ್ಲಿ ನಾನು ಇರುತ್ತೇನೆ ಎಂದು ಹೇಳಿದರು.
ಜಿ.ಕೆ.ವೆಂಕಟೇಶ್(ಎನ್.ಟಿ.ಆರ್) ರವರು ಮಾತನಾಡಿ ಬಡವರ ಪರ ಕಾಳಜಿ ,ಅಭಿವೃದ್ದಿಯ ಹರಿಕಾರರು ,ನನ್ನ ರಾಜಕೀಯ ಗುರುಗಳಾದ ಸಚಿವರಾದ ಮುನಿರತ್ನರವರು ಸದಾ ಅಭಿವೃದ್ದಿ ಪರ ಮತ್ತು ಬಡವರು ಸಮಾಜದಲ್ಲಿ ಮುಂದು ಬರಬೇಕು ಎಂಬ ಚಿಂತನೆ ಮಾಡುವ ಕಾಯಕಯೋಗಿ.
ಯಶವಂತಪುರ ವಾರ್ಡ್ನನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತ ನೀಡಿದ್ದಾರೆ . ಸಚಿವ ಮುನಿರತ್ನರವರನ್ನ ಮನೆ ಮಗನಂತೆ ಪ್ರೀತಿಸುತ್ತಾರೆ.
ಸಚಿವರಾಗಿ ಇನ್ನು ಹೆಚ್ಚು ಜನ ಸೇವೆ ಮಾಡುವಂತಾಗಲಿ ಎಂದು ವಾರ್ಡ್ ನಾಗರಿಕರ ಪರ ಶುಭಾ ಕೋರುತ್ತೇನೆ ಎಂದು ಹೇಳಿದರು.